ಬ್ರೇಕಿಂಗ್ ನ್ಯೂಸ್
23-11-21 03:20 pm HK news Desk ಕರ್ನಾಟಕ
ಬೆಂಗಳೂರು, ನ.23: ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ಸರಕಾರದ ಪ್ರಭಾವಿ ಮಂತ್ರಿಗಳು, ಬಿಜಪಿ ನಾಯಕರು ನೇರ ಶಾಮೀಲಾಗಿದ್ದಾರೆ ಎನ್ನುವ ಬಗ್ಗೆ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದ ಆರ್ ಟಿಐ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ಮತ್ತಷ್ಟು ಮಾಹಿತಿಗಳನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಒಟ್ಟು 12,900 ಬಿಟ್ ಕಾಯಿನ್ ಗಳನ್ನು ಆರೋಪಿ ಶ್ರೀಕಿಯಿಂದ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಪಡೆದಿದ್ದು, ಅದನ್ನು ಕ್ಯಾಶ್ ಮಾಡಿದ್ದಾರೆ ಎನ್ನುವ ಬಗ್ಗೆ ಮಹತ್ವದ ಮಾಹಿತಿಯನ್ನು ಹೊರಗೆಡವಿದ್ದಾರೆ.
ಪ್ರಕರಣದಲ್ಲಿ ನೂರಾರು ಕೋಟಿ ರೂಪಾಯಿ ಕೈಬದಲಾಗಿದೆ, ತನಿಖಾಧಿಕಾರಿಗಳು ಆರೋಪಿಯಿಂದಲೇ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ ಎನ್ನುವ ಬಗ್ಗೆ ಅಶೋಕ್ ಕುಮಾರ್ ಅಡಿಗ ಕಳೆದ ಎಪ್ರಿಲ್ 26ರಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಮತ್ತು ಸಿಸಿಬಿ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರ ಗಮನಕ್ಕೆ ತಂದಿದ್ದಾರೆ. ಆದರೆ, ಪೊಲೀಸ್ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಅಡಿಗ ಗಂಭೀರ ಆರೋಪ ಮಾಡಿದ್ದಾರೆ.
ಆರೋಪಿ ಶ್ರೀಕಿ ಕಸ್ಟಡಿಯಲ್ಲಿದ್ದಾಗಲೇ ಪೊಲೀಸರು ಆತನಲ್ಲಿದ್ದ ಬಿಟ್ ಕಾಯಿನ್ ಗಳನ್ನು ಕ್ಯಾಶ್ ಮಾಡಿಸಿದ್ದಾರೆ. ಜನವರಿ ತಿಂಗಳಲ್ಲಿ 9600 ಬಿಟ್ ಕಾಯಿನ್ ಹಾಗೂ ಆನಂತರ 3300 ಬಿಟ್ ಕಾಯಿನ್ ಗಳನ್ನು ಕ್ಯಾಶ್ ಮಾಡಿದ್ದಾರೆ. ಇದನ್ನು ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಹಂಚಿಕೊಂಡಿದ್ದಾರೆ. ಶ್ರೀಕಿ ನೆದರ್ಲೆಂಡ್ ಮೂಲದ ಬಿಟ್ ಕಾಯಿನ್ ಎಕ್ಸ್ ಚೇಂಜ್ ಅನ್ನು ಹ್ಯಾಕ್ ಮಾಡಿದ್ದು, ಸಾವಿರಾರು ಬಿಟ್ ಕಾಯಿನ್ ಗಳನ್ನು ತನ್ನ ವ್ಯಾಲೆಟ್ ಗೆ ಹಾಕಿಕೊಂಡಿದ್ದ. ಅದರ ಬಗ್ಗೆ ತಿಳಿದು ಪೊಲೀಸ್ ಅಧಿಕಾರಿಗಳು ಆತನಿಂದಲೇ ಲಂಚ ಪಡೆದಿದ್ದಾರೆ ಎಂದು ಅಶೋಕ್ ಕುಮಾರ್ ಅಡಿಗ ತಿಳಿಸಿದ್ದಾರೆ.
ಶ್ರೀಕಿ ಬಿಟ್ ಕಾಯಿನ್ ಗಳನ್ನು ಕದ್ದಿರುವ ಬಗ್ಗೆ ನೆದರ್ಲೇಂಡಿನ ಆಮ್ ಸ್ಟರ್ ಡ್ಯಾಮಿನಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ನೇಶನಲ್ ಪೊಲೀಸ್ ಕಾರ್ಪ್ಸ್ ತಂಡದವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರತೀ ಬಿಟ್ ಕಾಯಿನ್ ಗಳಿಗೆ ಅದರದ್ದೇ ಆದ ವಿಳಾಸ (ಯೂನಿಕ್ ಐಡೆಂಟಿಫಿಕೇಶನ್ ನಂಬರ್) ಹೊಂದಿದ್ದು, ಅದನ್ನು ಬಿಟ್ ಕಾಯಿನ್ ಎಕ್ಸ್ ಚೇಂಜ್ ನವರು ಬ್ಲಾಕ್ ಲಿಸ್ಟ್ ನಲ್ಲಿ ಹಾಕಿದ್ದರು. ಕಳವಾಗಿರುವ ಬಿಟ್ ಕಾಯಿನ್ ಗಳ ವಿಳಾಸದ ಪ್ರತಿಯನ್ನು ನೆದರ್ಲೆಂಡ್ ಕಂಪನಿಯಿಂದ ಅಶೋಕ್ ಕುಮಾರ್ ಅಡಿಗ ಪಡೆದಿದ್ದು, ಅದನ್ನು ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತಂಡಕ್ಕೂ ನೀಡಿದ್ದಾರೆ.
ವಿವಿಧ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಬಿಟ್ ಕಾಯಿನ್ ಗಳನ್ನು ಪ್ರತೀ ಬಾರಿ ಕ್ಯಾಶ್ ಮಾಡಿದಾಗಲೂ ಅದರ ಮಾಹಿತಿ ಎಕ್ಸ್ ಚೇಂಜ್ ನಲ್ಲಿ ದಾಖಲಾಗುತ್ತದೆ. ಅದರಂತೆ, ಬಿಟ್ ಕಾಯಿನ್ ಕ್ಯಾಶ್ ಮಾಡಿರುವ ಒಟ್ಟು 1,017 ರಶೀದಿ ಪ್ರತಿಗಳು ಅಮೆರಿಕದ ಎಫ್ ಬಿಐ ಮತ್ತು ನೆದರ್ಲೆಂಡ್ ಪೊಲೀಸರಿಂದ ದೊರೆತಿದ್ದು, ಅವುಗಳನ್ನು ಮೂರು ಫೈಲ್ ಗಳಲ್ಲಾಗಿ ಬೆಂಗಳೂರು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಕಮಲ್ ಪಂತ್ ಅವರಿಗೆ ನೀಡಿದ್ದಾಗಿ ಅಡಿಗ ತಿಳಿಸಿದ್ದಾರೆ.
ಖಚಿತ ದಾಖಲೆಗಳ ಪ್ರಕಾರ, 17 ಮಂದಿಗೆ ಸಾವಿರಾರು ಕೋಟಿ ರೂಪಾಯಿ ಹಣ ಲಂಚದ ರೂಪದಲ್ಲಿ ಹೋಗಿದೆ. ಈ ರೀತಿಯ ಭ್ರಷ್ಟಾಚಾರ ಹಿಂದೆ ಆಗಿಲ್ಲ. ಮುಂದೆ ಆಗೋದಕ್ಕೆ ಬಿಡಬಾರದು. ಇವೆಲ್ಲ ಹಣದ ವಹಿವಾಟು ಆಗಿರುವುದರ ಕಾಪಿಯನ್ನು ಕೇಂದ್ರ ಗೃಹ ಇಲಾಖೆಗೆ ಕೊಡಲಿದ್ದೇನೆ. ಕರ್ನಾಟಕದ ಪೊಲೀಸರು ನನ್ನ ಮೇಲೆ ಉದ್ದೇಶಪೂರ್ವಕ ಸುಳ್ಳು ಕೇಸ್ ಹಾಕಿ ಸಿಕ್ಕಿಸಿದರೂ ಸಿಕ್ಕಿಸಬಹುದು ಎಂದು ಅಶೋಕ್ ಕುಮಾರ್ ಅಡಿಗ ಆತಂಕ ವ್ಯಕ್ತಪಡಿಸಿದ್ದಾರೆ.
ಬಹುಕೋಟಿ ರೂಪಾಯಿ ಬಿಟ್ ಕಾಯಿನ್ ಹಗರಣದ ಬಗ್ಗೆ ಅಶೋಕ್ ಕುಮಾರ್ ಅಡಿಗ ಸೇರಿದಂತೆ ಬೆಂಗಳೂರಿನ ನಾಲ್ಕು ಮಂದಿ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದು ಬಿಜೆಪಿ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಗಮನಕ್ಕೆ ತಂದಿದ್ದರು. ಆನಂತರ, ಕೇಂದ್ರ ಗೃಹ ಇಲಾಖೆಯಿಂದ ಹದಿನೈದು ಮಂದಿ ಅಧಿಕಾರಿಗಳು ಬೆಂಗಳೂರಿಗೆ ಬಂದು ಹಗರಣದ ಮಾಹಿತಿ ಪಡೆದು, ಪ್ರಧಾನಿ ಕಚೇರಿಗೆ ಸಲ್ಲಿಸಿದ್ದಾರೆ. ಯಾರೆಲ್ಲ ಭಾಗಿಯಾಗಿದ್ದಾರೆ, ಎಷ್ಟು ಕೋಟಿ ತಿಂದು ಹಾಕಿದ್ದಾರೆ ಅನ್ನುವ ಖಚಿತ ಮಾಹಿತಿಗಳು ಲಭ್ಯ ಇದ್ದರೂ, ಬಿಜೆಪಿ ಸರಕಾರ ಮಾನ ಹರಾಜಾಗುವುದನ್ನು ತಪ್ಪಿಸಲು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎನ್ನಲಾಗುತ್ತಿದೆ.
Aright to information (RTI) activist recently made a startling allegation in connection with the multi-crore Karnataka Bitcoin scam. The RTI activist said senior police officers and leaders encashed Bitcoins that they got as bribes from hacker Srikrishna Ramesh alias Sriki. A complaint was filed on April 26, 2021 by RTI activist AR Ashok Kumar Adiga with the Additional Commissioner of Police, City Crime Branch with the subject being “Corruption in the drug case by high ranking police officials and highly influential politicians”.
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 10:01 pm
Mangalore Correspondent
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am