ಮಂಗಳೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಸೇರಿ ರಾಜ್ಯದ 15 ಕಡೆ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳಿಗೆ ಎಸಿಬಿ ದಾಳಿ ; ಕೋಟ್ಯಂತರ ಆಸ್ತಿ ಪತ್ತೆ

24-11-21 09:49 am       HK News Desk   ಕರ್ನಾಟಕ

ಮಂಗಳೂರು ಸ್ಮಾರ್ಟ್ ಸಿಟಿ ಎಕ್ಸಿಕ್ಯುಟಿವ್ ಇಂಜಿನಿಯರ್ ಕೆ.ಎಸ್.ಲಿಂಗೇಗೌಡ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ.‌

ಬೆಂಗಳೂರು, ನ.24: ಮಂಗಳೂರು ಸ್ಮಾರ್ಟ್ ಸಿಟಿ ಎಕ್ಸಿಕ್ಯುಟಿವ್ ಇಂಜಿನಿಯರ್ ಕೆ.ಎಸ್.ಲಿಂಗೇಗೌಡ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ  ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ.‌

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಎಸ್ ಲಿಂಗೇಗೌಡ, ಮಂಡ್ಯ ಹೆಚ್.ಎಲ್.ಬಿ.ಸಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್ ಕೆ, ದೊಡ್ಡಬಳ್ಳಾಪುರ ರೆವಿನ್ಯೂ ಇನ್ಸ್'ಪೆಕ್ಟರ್  ಲಕ್ಷ್ಮಿಕಾಂತಯ್ಯ, ವಾಸುದೇವ್ (ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ ಬೆಂಗಳೂರು) ಬಿ.ಕೃಷ್ಣಾರೆಡ್ಡಿ (ಜನರಲ್ ಮ್ಯಾನೇಜರ್  ನಂದಿನಿ ಡೈರಿ ಬೆಂಗಳೂರು),  ಟಿ.ಎಸ್.ರುದ್ರೇಶಪ್ಪ, (ಜಾಯಿಂಟ್ ಡೈರೆಕ್ಟರ್ ಅಗ್ರಿಕಲ್ಚರ್ ಡಿಪಾರ್ಟ್‌ಮೆಂಟ್ ಗದಗ), ಎ.ಕೆ.‌ಮಸ್ತಿ (ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್, ಸವದತ್ತಿ ಡೆಪ್ಯೂಟೇಷನ್, ಬೈಲಹೊಂಗಲ), ಸದಾಶಿವ ಮರಲಿಂಗಣ್ಣನವರ್ (ಸೀನಿಯರ್ ಮೋಟಾರ್ ಇನ್ಸ್'ಪೆಕ್ಟರ್ ಗೋಕಾಕ್) ನಾತಾಜೀ ಹೀರಾಜಿ (ಪಾಟೀಲ್ ಗ್ರೂಪ್ ಸಿ ಬೆಳಗಾಂ ಹೆಸ್ಕಾಂ),  ಕೆ.ಎಸ್.ಶಿವಾನಂದ್ರ (ರಿಟೈರ್ಡ್ ಸಬ್ ರಿಜಿಸ್ಟರ್ ಬಳ್ಳಾರಿ), ರಾಜಶೇಖರ್, (ಫಿಜಿಯೋಥೆರಪಿಸ್ಟ್ ಯಲಹಂಕ ಸರ್ಕಾರಿ ಆಸ್ಪತ್ರೆ), ಮಾಯಣ್ಣ ಎಂ.(ಎಫ್.ಡಿ.ಸಿ ಬಿಬಿಎಂಪಿ ಬೆಂಗಳೂರು, ರೋಡ್ಸ್ & ಇನ್ಸ್ಫಾಸ್ಟ್ರಕ್ಚರ್),  ಎಲ್.ಸಿ.ನಾಗರಾಜ್, (ಸಕಾಲ, ಅಡ್ಮಿನಿಸ್ಟೇಷನ್ ಆಫೀಸರ್, ಬೆಂಗಳೂರು)  ಜಿ.ವಿ.ಗಿರಿ, (ಡಿ ಗ್ರೂಪ್ ಸಿಬ್ಬಂದಿ ಬಿಬಿಎಂಪಿ ಯಶವಂತಪುರ), ಎಸ್.ಎಂ.ಬಿರಾದಾರ್ (ಜಾಯಿಂಟ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಜೇವರ್ಗಿ) ಮನೆಗಳು ಮತ್ತು ಅವರು ಹೊಂದಿರುವ ಆಸ್ತಿ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರು ಬಿಬಿಎಂಪಿ ಎಫ್ ಡಿಸಿ ನೌಕರನಾಗಿರುವ ಮಾಯಣ್ಣ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿ ನೌಕರನಾಗಿದ್ದಾನೆ. ಸಾಮಾನ್ಯ ನೌಕರನಾಗಿದ್ದರೂ ಕೋಟ್ಯಂತರ ಮೊತ್ತದ ಆಸ್ತಿ ಹೊಂದಿದ್ದಾನೆ.

ಬೆಂಗಳೂರಿನ ಹಲವು ಕಡೆ ಹತ್ತಾರು ಮನೆ, ಸೈಟ್‌, ಕೋಟ್ಯಾಂತರ ಬ್ಯಾಂಕ್ ಬ್ಯಾಲೆನ್ಸ್ ಇರುವ ಬಗ್ಗೆ ಮಾಹಿತಿ ಇದೆ. ಎಸಿಬಿ ದಾಳಿ ವೇಳೆ ಅಪಾರ ಅಕ್ರಮ ಸಂಪತ್ತು ಪತ್ತೆಯಾಗಿದೆ. ಮಾಯಣ್ಣ, ಕಸಾಪ ನಿಕಟಪೂರ್ವ ಬೆಂಗಳೂರು ಜಿಲ್ಲೆಯ ಅಧ್ಯಕ್ಷನಾಗಿದ್ದ. ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. ಮಾಯಣ್ಣ ಅಕ್ರಮ ಆಸ್ತಿ ಕಂಡು ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.‌

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಹೆಚ್‌ಎಲ್‌ಬಿಸಿ ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ರೀನಿವಾಸ್ ಮನೆ ಸೇರಿದಂತೆ ಮೂರು ಕಡೆ ಎಸಿಬಿ ದಾಳಿಯಾಗಿದೆ. ಮೈಸೂರಿನ ಬೋಗಾದಿ ನಿವಾಸ, ನಂಜನಗೂಡಿನ ಫಾರಂ ಹೌಸ್ ಮೇಲೂ ದಾಳಿಯಾಗಿದೆ. ಕೆಆರ್‌ಪೇಟೆ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ACB raids in 15 regions of Karnataka including Smart City Engineer Lingegowdas house in Mangalore