ಗಣಿಗಾರಿಕೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿ ಕೊರಳು ಪಟ್ಟಿ ಹಿಡಿಯುವ ಬೆದರಿಕೆ ; ಜಗದೀಶ ಕಾರಂತ ವಿರುದ್ಧ ಪ್ರಕರಣ ದಾಖಲು

24-11-21 12:28 pm       HK news Desk   ಕರ್ನಾಟಕ

ಕಾರಿಂಜೇಶ್ವರ ದೇವಸ್ಥಾನ ಸುತ್ತಮುತ್ತ ನಡೆಯುವ ಗಣಿಗಾರಿಕೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿಯ ಕಚೇರಿಗೆ ನುಗ್ಗಿ ಕೊರಳು ಪಟ್ಟಿ ಹಿಡಿಯುತ್ತೇವೆ ಎಂದು ಅಬ್ಬರಿಸಿದ್ದ ಹಿಂದು ಜಾಗರಣ ವೇದಿಕೆ ಮುಖಂಡ ಜಗದೀಶ ಕಾರಂತ ವಿರುದ್ಧ ಪ್ರಕರಣ ದಾಖಲಾಗಿದೆ. 

ಬಂಟ್ವಾಳ, ನ.24: ಕಾರಿಂಜೇಶ್ವರ ದೇವಸ್ಥಾನ ಸುತ್ತಮುತ್ತ ನಡೆಯುವ ಗಣಿಗಾರಿಕೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿಯ ಕಚೇರಿಗೆ ನುಗ್ಗಿ ಕೊರಳು ಪಟ್ಟಿ ಹಿಡಿಯುತ್ತೇವೆ ಎಂದು ಅಬ್ಬರಿಸಿದ್ದ ಹಿಂದು ಜಾಗರಣ ವೇದಿಕೆ ಮುಖಂಡ ಜಗದೀಶ ಕಾರಂತ ವಿರುದ್ಧ ಪ್ರಕರಣ ದಾಖಲಾಗಿದೆ. 

ಕಾರಿಂಜೇಶ್ವರ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ಇತ್ತೀಚೆಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಜಗದೀಶ್ ಕಾರಂತ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈಗ ಚುನಾವಣೆ ಇದೆ, ಹಾಗೆಂದು ಅಧಿಕಾರಿಗಳು ಬಿಝಿ ಇದ್ದಾರೆ ಅಂದ್ರೆ ಓಕೆ. ಡಿಸೆಂಬರ್ 10 ರ ನಂತರ ಹತ್ತು ದಿನದ ಸಮಯ ಕೊಡುತ್ತೇವೆ. ಆನಂತರವೂ ಅಕ್ರಮ ಗಣಿಗಾರಿಕೆ ನಿಲ್ಲಿಸದೇ ಹೋದಲ್ಲಿ ನಮ್ಮ ಜಾಗರಣ ವೇದಿಕೆ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಆತನ ಕೊರಳು ಪಟ್ಟಿ ಹಿಡಿಯಲಿದ್ದಾರೆ. ಅದೇ ರೀತಿ ಗಣಿಗಾರಿಕೆ ಮುಚ್ಚಿಸಲು ಸಾಧ್ಯವಾಗದೇ ಇದ್ದರೆ ಈ ಭಾಗದ ಉಸ್ತುವಾರಿ ಸಚಿವ ಮತ್ತು ಶಾಸಕನೂ ರಾಜಿನಾಮೆ ಕೊಟ್ಟು ಹೋಗಲಿ ಎಂದು ಆಕ್ರೋಶದ ಮಾತುಗಳನ್ನಾಡಿ ಎಚ್ಚರಿಕೆ ನೀಡಿದ್ದರು. 

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಕೊರಳು ಪಟ್ಟಿ ಹಿಡಿಯುತ್ತೇವೆಂದು ಬಹಿರಂಗ ಬೆದರಿಕೆ ಹಾಕಿದ ವಿಚಾರದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಪುಂಜಾಲುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸುವುದಾಗಿ ಬಹಿರಂಗ ಬೆದರಿಕೆ ಹಾಕಿದ ಆರೋಪದಲ್ಲಿ ಜಗದೀಶ್ ಕಾರಂತ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Bantwal Illegal mining surrounding Karneshwar Temple, HJV Jagadish Karanth makes open threat to DC Mangalore. Says we will enter your office and catch hold of your collar in case you don't stop this illegal activity.