ಬ್ರೇಕಿಂಗ್ ನ್ಯೂಸ್
24-11-21 05:44 pm HK news Desk ಕರ್ನಾಟಕ
ಕಲಬುರ್ಗಿ, ನ.24: ಅತ್ತ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮನೆ ಬಾಗಿಲು ಬಡಿಯುತ್ತಿದ್ದರೆ, ಇತ್ತ ಭ್ರಷ್ಟ ಅಧಿಕಾರಿ ಮನೆಯ ಬಾತ್ ರೂಮಿನಲ್ಲಿ ಹಣದ ಕಂತೆಯನ್ನು ಒಂದೊಂದೇ ನೀರಿನ ಪೈಪಿಗೆ ತೂರಿಸುತ್ತಿದ್ದ.. ಹೌದು.. ತನ್ನ ಕೆಲಸದ ಉದ್ದಕ್ಕೂ ಜನರ ದುಡ್ಡನ್ನು ಕಿತ್ತು ತಿಂದು ಗುಡ್ಡೆ ಹಾಕಿದ್ದ ಪರಮ ಭ್ರಷ್ಟ ಅಧಿಕಾರಿಯೊಬ್ಬನ ಅಸಲಿ ಬಣ್ಣ ನೋಡಿ ಎಸಿಬಿ ಅಧಿಕಾರಿಗಳೇ ದಿಗಿಲುಗೊಂಡಿದ್ದಾರೆ.
ಭಾರೀ ಆಸ್ತಿ ಗಳಿಸಿರುವ ಆರೋಪದಲ್ಲಿ ಕಲಬುರ್ಗಿಯ ಲೋಕೋಪಯೋಗಿ ಇಲಾಖೆಯ ಜೆಇ ಆಗಿರುವ ಶಾಂತಗೌಡನ ಬಿರಾದಾರ ಎಂಬ ಅಧಿಕಾರಿಯ ಮನೆಗೆ ಹೊಕ್ಕಿದ್ದ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ಆಗಿದ್ದಾರೆ. ಪೈಪ್, ಬಕೇಟ್ ನಲ್ಲಿ ತುಂಬಿದ್ದ ಕಂತೆ ಕಂತೆ ನೋಟಿನ ರಾಶಿಯನ್ನೇ ಪತ್ತೆ ಹಚ್ಚಿದ್ದಾರೆ. ಮನೆಯ ಬಾತ್ ರೂಮಿನ ಪೈಪ್ ನಲ್ಲಿ ತೂರಿಸಿದ್ದ ನಗದನ್ನು ಹೊರ ತೆಗೆಯಲು ಅಧಿಕಾರಿಗಳು ಹರಸಾಹಸ ಮಾಡಿದ್ದಾರೆ. ಪ್ಲಂಬರನ್ನು ಕರೆಸಿ, ಬಾತ್ ರೂಮಿನಿಂದ ಮನೆಯ ಹೊರಗೆ ಚಾಚಿಕೊಂಡಿದ್ದ ಪೈಪನ್ನು ಕಟ್ ಮಾಡಿ ತೆಗೆಯುತ್ತಿದ್ದಾಗ ನೋಟಿನ ಕಂತೆಗಳೇ ಹೊರಬಿದ್ದಿವೆ. ಅಧಿಕಾರಿಗಳ ಕಣ್ಣಿಗೆ ಬೀಳದಂತೆ ಸ್ವತಃ ಲಂಚಕೋರ ಅಧಿಕಾರಿಯೇ ಪೈಪ್ ಒಳಗೆ ಲಂಚದ ಹಣವನ್ನು ತೂರಿಸಿದ್ದು ಎಲ್ಲವನ್ನೂ ಎಸಿಬಿ ಸಿಬಂದಿ ಹೊರತೆಗೆದಿದ್ದಾರೆ.

ನೆಲಕ್ಕೆ ಹುದುಗಿದ್ದ ಪೈಪನ್ನೂ ಅಗೆದು ತೆಗೆದಿದ್ದು ಕೊನೆಗೆ 13 ಲಕ್ಷ 50 ಸಾವಿರ ಹಣ ಪಿವಿಸಿ ಪೈಪ್ ನಲ್ಲೇ ಪತ್ತೆಯಾಗಿದೆ. ಅಲ್ಲಲ್ಲಿ ಪತ್ತೆಯಾದ ಹಣದ ಕಂತೆಗಳನ್ನು ಬಕೆಟ್ ನಲ್ಲಿ ತುಂಬಿಸಿ ಅಧಿಕಾರಿಗಳು ಲೆಕ್ಕ ಮಾಡಿದ್ದಾರೆ. ಒಟ್ಟು ಶಾಂತಗೌಡನ ಮನೆಯಲ್ಲಿ ಬರೋಬ್ಬರಿ 55 ಲಕ್ಷ ನಗದು ಪತ್ತೆಯಾಗಿದೆ. ಆರಂಭದಿಂದಲೂ ಎಸಿಬಿ ತನಿಖೆಗೆ ಸಹಕರಿಸದೆ ನಾಟಕವಾಡಿದ ಅಧಿಕಾರಿ, ಕಪಾಟು, ಬೀರುವಿನ ಕೀಯನ್ನು ಕೊಡದೆ ಸತಾಯಿಸಿದ್ದಾನೆ.
ಇದಲ್ಲದೆ, ಶಾಂತಗೌಡ ಬಿರಾದಾರ ಕಲಬುರಗಿಯ ವಿವಿಧ ಕಡೆ ಆಸ್ತಿ ಹೊಂದಿದ್ದಾನೆ. ಗುಬ್ಬಿ ಕಾಲೋನಿಯಲ್ಲಿ ಒಂದು ಭವ್ಯ ಬಂಗಲೆ, ಕಲಬುರಗಿಯ ಬಡೇಪುರದಲ್ಲಿ ಇನ್ನೊಂದು ಭವ್ಯ ಬಂಗಲೆ ಪತ್ತೆಯಾಗಿದೆ. ಕಲಬುರಗಿ ನಗರದ ಬ್ರಹ್ಮಪೂರ ಬಡವಾಣೆ ಕೋಟನೂರ್ ಡಿ ಬಡವಾಣೆಯಲ್ಲಿ ತಲಾ ಎರಡು ಸೈಟ್ ಹೊಂದಿರುವುದು ಪತ್ತೆಯಾಗಿದೆ.

ಯಡ್ರಾಮಿ ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ 25 ಎಕರೆ ಫಾರ್ಮ್ ಹೌಸ್, 10 ಎಕರೆ ಜಮೀನು ಸೇರಿ ಒಟ್ಟು 35 ಎಕರೆ ಜಮೀನು ಸದ್ಯಕ್ಕೆ ಪತ್ತೆಯಾಗಿದೆ. ಹಂಗಾರಮಗ ಗ್ರಾಮದ ಫಾರ್ಮ್ ನಲ್ಲಿ ಮತ್ತೆರಡು ಭವ್ಯ ಬಂಗಲೆ ಇರುವುದನ್ನೂ ಪತ್ತೆ ಮಾಡಿದ್ದಾರೆ.
ಹಂಗಾಮಿ ನೌಕರನಾಗಿ ಸೇರಿದ್ದ ಲಂಚಕೋರ !
1992 ರಲ್ಲಿ ಕುಲಬುರ್ಗಿ ಜಿಲ್ಲಾ ಪಂಚಾಯ್ತಿ ಆಳಂದ ವಿಭಾಗದಲ್ಲಿ ಕಿರಿಯ ಅಭಿಯಂತರ ಹುದ್ದೆಗೆ ಹಂಗಾಮಿ ನೌಕರನಾಗಿ ಸೇರ್ಪಡೆಯಾಗಿದ್ದ ಶಾಂತಗೌಡ ತನ್ನ ಕರ್ತವ್ಯದ ಉದ್ದಕ್ಕೂ ಭ್ರಷ್ಟಾಚಾರದಿಂದ ಕೂಡಿಟ್ಟ ಹಣಕ್ಕೆ ಲೆಕ್ಕ ಇರಲಿಕ್ಕಿಲ್ಲ. 2000 ಇಸವಿಯಲ್ಲಿ ಖಾಯಂ ನೌಕರನಾಗಿ ಸೇರಿದ್ದ ಶಾಂತಗೌಡ ಕಲಬುರಗಿ ಜಿಲ್ಲೆಯ ಆಳಂದ, ವಿಜಯಪುರ ಜಿಲ್ಲೆಯ ಆಲಮೇಲ, ಬೆಳಗಾವಿ, ಜೇವರ್ಗಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯ ಪೂರೈಸಿದ್ದಾನೆ. ಕಡಿಮೆ ಅವಧಿಯಲ್ಲಿ ಕೂಡಿಹಾಕಿದ ಆಸ್ತಿಯನ್ನು ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ. ಕಡತ ಪರಿಶೀಲನೆ ಮುಂದುವರಿದಿದ್ದು ಇನ್ನು ಬ್ಯಾಂಕಿನಲ್ಲಿರುವ ಆಸ್ತಿ ಪಾಸ್ತಿಯ ಬಗ್ಗೆ ಇನ್ನೂ ಹೊರಬಂದಿಲ್ಲ.
A search of the resident of a Junior Engineer in the Public Works Department (PWD) in Kalaburagi yielded assets, including cash, that were said to be disproportionate to the known source of the officer’s income.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am