ಬ್ರೇಕಿಂಗ್ ನ್ಯೂಸ್
24-11-21 08:18 pm HK news Desk ಕರ್ನಾಟಕ
ಬೆಂಗಳೂರು, ನ.24: ಆತ ಹೆಸರಿಗೆ ತಕ್ಕಂತೆ ಮಾಯಾಗಾರನೇ ಆಗಿದ್ದ. ಯಕಶ್ಚಿತ್ ಪ್ರಥಮ ದರ್ಜೆ ಗುಮಾಸ್ತನಾಗಿದ್ದುಕೊಂಡೇ ಆತ ಕೆಲವೇ ಕೆಲವು ವರ್ಷಗಳಲ್ಲಿ ಅಕ್ರಮವಾಗಿ ಕೂಡಿಹಾಕಿದ ಹಣಕ್ಕೆ ಲೆಕ್ಕ ಇಲ್ಲ. ಎಸಿಬಿ ದಾಳಿಗೆ ಸಿಕ್ಕ ಬೆಂಗಳೂರಿನ ದೊಡ್ಡ ಮಿಕಗಳಲ್ಲಿ ಬಿಬಿಎಂಪಿ ಪ್ರಥಮ ದರ್ಜೆ ಗುಮಾಸ್ತ ಮಾಯಣ್ಣ ಕೂಡ ಒಬ್ಬ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದಲ್ಲಿ ಸಾಮಾನ್ಯ ನೌಕರನಾಗಿದ್ದ ಮಾಯಣ್ಣ ಗೌಡ ಮಾಡಿರುವ ಅಕ್ರಮ ಸಂಪಾದನೆ ಕಂಡು ಎಸಿಬಿ ಅಧಿಕಾರಿಗಳೇ ಹೌಹಾರಿದ್ದಾರೆ. ಅಂದಾಜು ಪ್ರಕಾರ ಮಾಯಣ್ಣ ಅಕ್ರಮವಾಗಿ ಗಳಿಸಿರುವ ಆಸ್ತಿ 50 ಕೋಟಿಗಿಂತಲೂ ಹೆಚ್ಚು ಎನ್ನಲಾಗುತ್ತಿದೆ.
ಬಿಬಿಎಂಪಿಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿದ್ದ ಮಾಯಣ್ಣ, 2009 ರಿಂದಲೂ ಪಾಲಿಕೆಯ ಅಷ್ಟೂ 198 ವಾರ್ಡ್ ಗಳಿಗೆ ಏಕೈಕ ಪ್ರಥಮ ದರ್ಜೆ ಸಹಾಯಕನಾಗಿದ್ದ. ಪ್ರತಿ ವರ್ಷವೂ ನೂರಾರು ಕೋಟಿ ಅನುದಾನದ ನಿರ್ವಹಣೆ ಮಾಡುತ್ತಿದ್ದ ಮಾಯಣ್ಣ ಹನ್ನೊಂದು ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನ ಕಣ್ಣೆದುರಲ್ಲೇ ಕೈಬದಲಾಗುವುದನ್ನು ನೋಡಿದ್ದಾನೆ. 198 ವಾರ್ಡ್ ಗಳಲ್ಲಿ ಅಧಿಕಾರಿಗಳು, ಗುತ್ತಿಗೆದಾರರ ಜೊತೆ ಕಮಿಷನ್ ವ್ಯವಹಾರ ಮಾಡುತ್ತಲೇ ಅದೆಷ್ಟೋ ಕೋಟಿಗಳನ್ನು ಗಳಿಸಿದ್ದಾನೆ ಅನ್ನುವ ಬಗ್ಗೆ ಈ ಹಿಂದೆಯೇ ಪಾಲಿಕೆಯಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು.
ಇಂಥ ಲಂಚಕೋರ ವ್ಯಕ್ತಿಯನ್ನು ಪಾಲಿಕೆಯಿಂದಲೇ ವರ್ಗಾವಣೆ ಮಾಡುವಂತೆ ಸರ್ಕಾರದ ಮಟ್ಟದಲ್ಲಿ ಭಾರೀ ಒತ್ತಡ ಸೃಷ್ಟಿಯಾಗಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೇ ಜೇಬು ತುಂಬಿಸಿಕೊಂಡು ವರ್ಗಾವಣೆ ಆದೇಶವನ್ನೇ ರದ್ದುಪಡಿಸಿದ್ದ ಅನ್ನುವುದು ಸುದ್ದಿಯಾಗಿತ್ತು.
ಮಾಯಣ್ಣ ಕೇವಲ ಬಿಬಿಎಂಪಿಯಲ್ಲಿ ಅಷ್ಟೇ ಅಲ್ಲ, ಕನ್ನಡ ಸಾಹಿತ್ಯ ಪರಿಷತ್ ನಲ್ಲೂ ಸಾಕಷ್ಟು ಅಕ್ರಮ ಎಸಗಿದ್ದಾನೆ ಅನ್ನುವ ಮಾತುಗಳಿವೆ. ಸಾಹಿತ್ಯ ಪರಿಷತ್ ಘಟಕದ ಬೆಂಗಳೂರು ನಗರಾಧ್ಯಕ್ಷನಾಗಿದ್ದ ವೇಳೆ ಪರಿಷತ್ ಹೆಸರಲ್ಲಿ ಅಕ್ರಮ ಎಸಗಿದ್ದಾನೆ. ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾನೆ. ಬೇನಾಮಿಯಾಗಿ ಆಸ್ತಿ ಮಾಡಿಕೊಂಡು ಸಾಹಿತ್ಯ ಪರಿಷತ್ ಹೆಸರಲ್ಲಿ ರಾಜ್ಯಕ್ಕೇ ದೊಡ್ಡ ಜನ ಆಗಲು ಹೊರಟಿದ್ದ. ಆದರೆ, ಈತನಿಂದ ಹಣ ಪೀಕಿಸಿಕೊಂಡದ್ದು ಬಿಟ್ಟರೆ, ಹಿಂಬಾಲಕರೇ ಈತನ ಪರವಾಗಿ ಕೆಲಸ ಮಾಡಿರಲಿಲ್ಲ. ಹೀಗಾಗಿ ಕಸಾಪ ಚುನಾವಣೆಯಲ್ಲಿ ಸೋತು ಹೋಗಿದ್ದ.
ಬಿಬಿಎಂಪಿಯಲ್ಲಿ ಸಣ್ಣ ಹುದ್ದೆಯಲ್ಲಿದ್ದುಕೊಂಡು ದೊಡ್ಡ ಹುದ್ದೆಯಲ್ಲಿದ್ದವರನ್ನೇ ಮೀರಿಸುವಷ್ಟು ಬೆಳೆದಿದ್ದ ಮಾಯಣ್ಣನ ಮಾಯಾಲೋಕದ ಬಗ್ಗೆ ಹಲವರು ಎಸಿಬಿಗೆ ದೂರು ನೀಡಿದ್ದರು. ಮೇಲಧಿಕಾರಿಗಳಿಗೂ ದೂರು ನೀಡಿದ್ದರು. ತನ್ನ ಸಂಬಂಧಿಕರು, ಕಾರ್ಪೊರೇಟರುಗಳ ಹೆಸರಲ್ಲಿ ಬೆಂಗಳೂರಿನ ಹಲವಾರು ಕಡೆ ಬಂಗಲೆಗಳನ್ನು ಹೊಂದಿದ್ದ ಮಾಯಣ್ಣ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆ ಮಾಯಣ್ಣ ತನ್ನ ಪತ್ನಿ ಹೆಸರಲ್ಲಿ ಚಲನಚಿತ್ರ ನಿರ್ಮಾಣಕ್ಕೂ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದ.
ಎಸಿಬಿ ದಾಳಿಯಲ್ಲಿ ಬೆಂಗಳೂರು ನಗರದಲ್ಲಿ ನಾಲ್ಕು ಕಡೆ ಬಂಗಲೆಗಳು, ವಿವಿಧ ಕಡೆಗಳಲ್ಲಿ ಆರು ನಿವೇಶನಗಳು, ಎರಡು ಕರೆ ಕೃಷಿ ಜಮೀನು, ಎರಡು ದ್ವಿಚಕ್ರ ವಾಹನಗಳು, 500 ಗ್ರಾಮ್ ಚಿನ್ನಾಭರಣ, ಮೂರು ಕಡೆ ಬೇನಾಮಿ ಆಸ್ತಿ ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ. ಅಧಿಕಾರಿಗಳ ಪರಿಶೀಲನೆ ಮುಂದುವರಿದಿದೆ.
ACB Conduct Raid on BBMP Employee Mayanna more than 50 crores seized, 11 years of illegal income capsized. Anti Corruption Bureau (ACB) has unearthed several alleged scams as it continued the raid on the city’s premier civic agency Bangalore Development Authority (BDA), including the sale of corner sites and crediting compensation to ineligible persons. The ACB officials say that the misappropriation of funds runs to more than Rs 200 crore and has caused a huge loss to the state exchequer.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm