ಬ್ರೇಕಿಂಗ್ ನ್ಯೂಸ್
29-11-21 01:44 pm HK Desk news ಕರ್ನಾಟಕ
ಬೆಂಗಳೂರು, ನ.29: ಅಚ್ಚರಿಯ ಪ್ರಕರಣ ಒಂದರಲ್ಲಿ ಬೆಂಗಳೂರಿನ ಇಎಸ್ಐ ಆಸ್ಪತ್ರೆಯ ಶವಾಗಾರದಲ್ಲಿ ಒಂದೂವರೆ ವರ್ಷದ ಹಿಂದೆ ಕೋವಿಡ್ ನಿಂದಾಗಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ದೇಹ ಹಾಗೇ ಉಳಿದುಕೊಂಡಿರುವುದು ಪತ್ತೆಯಾಗಿದ್ದು, ಆಸ್ಪತ್ರೆ ಸಿಬಂದಿಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಶವಾಗಾರದ ಕೋಲ್ಡ್ ಸ್ಟೋರೇಜ್ ನಲ್ಲಿ ಸ್ವಚ್ಚತಾ ಸಿಬಂದಿ ಕ್ಲೀನಿಂಗ್ ಮಾಡುತ್ತಿದ್ದಾಗ ಎರಡು ಮೃತದೇಹ ಕಂಡುಬಂದಿದೆ. ಬಳಿಕ ಸಿಬಂದಿ ಪರಿಶೀಲನೆ ನಡೆಸಿದಾಗ, 15 ತಿಂಗಳ ಹಿಂದೆ ಕೋವಿಡ್ ನಿಂದಾಗಿ ಮೃತಪಟ್ಟ ಇಬ್ಬರ ಶವ ಎನ್ನುವುದು ಗೊತ್ತಾಗಿದೆ. ಅಲ್ಲದೆ, ಶವದ ಜೊತೆಗಿದ್ದ ಟ್ಯಾಗ್ ಅನ್ನು ಚೆಕ್ ಮಾಡಿದಾಗ ಚಾಮರಾಜಪೇಟೆಯ ದುರ್ಗಾ (40) ಎಂಬ ಮಹಿಳೆಯ ಶವ ಮತ್ತು ಇನ್ನೊಂದು ಕೆ.ಪಿ.ಅಗ್ರಹಾರದ ನಿವಾಸಿ ಮುನಿರಾಜು(35) ಎಂಬ ಯುವಕನ ಶವ ಎನ್ನುವುದು ಪತ್ತೆಯಾಗಿದೆ. ಅವರಿಬ್ಬರೂ 2020ರ ಜುಲೈನಲ್ಲಿ ಕೊರೊನಾ ಚಿಕಿತ್ಸೆಗಾಗಿ ಇಎಸ್ಐ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಶವಗಳನ್ನು ಅಲ್ಲಿನ ಹಳೇ ಶವಾಗಾರಕ್ಕೆ ಸಾಗಿಸಲಾಗಿತ್ತು. ಅಲ್ಲಿಂದ ಬಿಬಿಎಂಪಿ ಕಾರ್ಯಕರ್ತರು ಅದನ್ನು ಕೊಂಡೊಯ್ದು ಅಂತ್ಯಕ್ರಿಯೆ ಮಾಡಬೇಕಾಗಿತ್ತು. ಕೊರೊನಾದಿಂದ ಮೃತಪಟ್ಟ ಶವಗಳನ್ನು ಕುಟುಂಬಸ್ಥರಿಗೆ ಬಿಟ್ಟುಕೊಡದೇ ಇದ್ದುದರಿಂದ ಕುಟುಂಬಕ್ಕೆ ಹಸ್ತಾಂತರ ಮಾಡಿರಲಿಲ್ಲ. ಇತ್ತ ಸಿಬಂದಿಯೂ ಆ ಬಗ್ಗೆ ಆಸ್ಥೆ ವಹಿಸದೇ ಇದ್ದುದರಿಂದ ಶವಗಳು ಕೋಲ್ಡ್ ಸ್ಟೋರೇಜ್ ನಲ್ಲಿಯೇ ಉಳಿದಿತ್ತು.
ಇಎಸ್ಐ ಹಳೆ ಶವಾಗಾರದಲ್ಲಿ ಆರು ಕೋಲ್ಡ್ ಸ್ಟೋರೇಜ್ ಇದ್ದು, ಕೋವಿಡ್ ಸಂದರ್ಭದಲ್ಲಿ ಶವಗಳನ್ನು ಇಡಲು ಜಾಗ ಸಾಲದೆ ಸಂಕಷ್ಟ ಉಂಟಾಗಿತ್ತು. ಇದರಿಂದಾಗಿ ತುರ್ತಾಗಿ ಹೊಸ ಶವಾಗಾರವನ್ನೂ ಆರಂಭಿಸಲಾಗಿತ್ತು. 2020ರ ಡಿಸೆಂಬರ್ ವೇಳೆಗೆ ಹೊಸ ಶವಾಗಾರ ಆರಂಭಗೊಂಡಿತ್ತು. ಆದರೆ, ಈ ನಡುವೆ ಹಳೇ ಶವಾಗಾರದಲ್ಲಿದ್ದ ಶವಗಳ ಬಗ್ಗೆ ಅಲ್ಲಿನ ಸಿಬಂದಿ ನಿರ್ಲಕ್ಷ್ಯ ವಹಿಸಿದ್ದರು.
ಮೂರು ದಿನಗಳ ಹಿಂದೆ ಸ್ವಚ್ಛತಾ ಸಿಬಂದಿ ಅಲ್ಲಿಗೆ ತೆರಳಿದ್ದಾಗ ಏನೋ ವಾಸನೆ ಬಂದಿತ್ತು. ಹಾಗಾಗಿ ತಪಾಸಣೆ ನಡೆಸಿದಾಗ, ಸ್ಟೋರೇಜ್ ಒಳಗಡೆ ಎರಡು ಶವಗಳು ಪತ್ತೆಯಾಗಿವೆ. ಈ ಬಗ್ಗೆ ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಮರಾಜಪೇಟೆಯ ದುರ್ಗಾ ಎಂಬ ಮಹಿಳೆಯ ಗಂಡನೂ ಸಾವು ಕಂಡಿದ್ದು, ಇತರೇ ಕುಟುಂಬಸ್ಥರು ಶವ ಪಡೆಯಲು ನಿರಾಕರಿಸಿದ್ದಾರೆ. ಮುನಿರಾಜು ಕುಟುಂಬಸ್ಥರು ಇದ್ದಾರೆಯೇ ಎಂಬ ಬಗ್ಗೆ ಪತ್ತೆಯಾಗಿಲ್ಲ. ಶವಗಳನ್ನು ಸೋಮವಾರ ಅಂತ್ಯಕ್ರಿಯೆ ನಡೆಸಲು ಅಲ್ಲಿನ ಸಿಬಂದಿ ನಿರ್ಧರಿಸಿದ್ದಾರೆ. ಇಎಸ್ಐ ಸಿಬಂದಿ ಮತ್ತು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bodies of two Covid-19 victims were located a year after their deaths in the mortuary of the ESI hospital in Bengaluru. Rajajinagar police said the victims have been identified as Durga and Muniraju.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 07:32 pm
Mangalore Correspondent
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am