ಬಿಟ್ ಅಲ್ಲ ಬೆಳ್ಳಿ ಕಾಯಿನ್ ಹಂಚಿಕೆ ; ಮೈಸೂರು ಪರಿಷತ್ ಚುನಾವಣೆಯಲ್ಲಿ ಝಣ ಝಣ ಸದ್ದು ! 

03-12-21 06:44 pm       HK Desk news   ಕರ್ನಾಟಕ

ಮೈಸೂರು ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಅವರಿಂದ ಬೆಳ್ಳಿ ಕಾಯಿನ್ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮೈಸೂರು, ಡಿ.3 : ವಿಧಾನ ಪರಿಷತ್ ಚುನಾವಣೆಯಲ್ಲಿ ಝಣ ಝಣ ಕಾಂಚಾಣ ತುಳುಕ ತೊಡಗಿದೆ. ಚುನಾವಣೆ ಘೋಷಣೆ ಸಂದರ್ಭದಲ್ಲಿ ಬಿಟ್ ಕಾಯಿನ್ ಸದ್ದು ಮಾಡಿದ್ದರಿಂದ ಬಿಟ್ ಕಾಯಿನನ್ನೇ ಹಂಚಲಿದ್ದಾರೆಂದು ಕುಹಕ ಎದ್ದಿತ್ತು. ಇದೀಗ ಬಿಟ್ ಬದಲು ಬೆಳ್ಳಿ ಕಾಯಿನ್ ಮತದಾರರಿಗೆ ಹಂಚುತ್ತಿರುವುದು ಬಯಲಾಗಿದೆ. 

ಮೈಸೂರು ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಅವರಿಂದ ಬೆಳ್ಳಿ ಕಾಯಿನ್ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಚುನಾವಣೆಗೆ ಒಂದು ವಾರ ಇರುವಾಗಲೇ ಮತದಾರರಿಗೆ ಬೆಳ್ಳಿ ಕಾಯಿನ್ ಹಂಚಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.‌

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಚಿತ್ರವುಳ್ಳ ಬೆಳ್ಳಿ ಕಾಯಿನ್‌ ಕೊಟ್ಟು ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದ್ದು ಜೆಡಿಎಸ್ ಅಭ್ಯರ್ಥಿಯ ನಡೆಗೆ ಹಲವೆಡೆ ಆಕ್ಷೇಪ ಕೇಳಿಬಂದಿದೆ. 

ಇದರೊಂದಿಗೆ ಪರಿಷತ್ ಚುನಾವಣೆಯಲ್ಲಿ ಝಣಝಣ ಕಾಂಚಾಣ ಸದ್ದು ಮಾಡಿದ್ದು ಶನಿವಾರ ಎಚ್‌‌.ಡಿ‌.ಕುಮಾರಸ್ವಾಮಿ ಭಾಗವಹಿಸುವ ಪ್ರಚಾರ ಸಭೆಯಲ್ಲೂ ಬೆಳ್ಳಿ ಕಾಯಿನ್ ಹಂಚಿಕೆಗೆ ಸಿದ್ಧತೆ ನಡೆದಿದೆ.

Distribution of Silver Coins by Mysuru Mlc C N Manjegowda, election gimic  exposed. As there is just a weeks time for elections distribution of Gold coins to voters has been revealed.