ಬ್ರೇಕಿಂಗ್ ನ್ಯೂಸ್
09-12-21 02:28 pm HK Desk news ಕರ್ನಾಟಕ
ಬೆಂಗಳೂರು, ಡಿ.9 : ರಾಜ್ಯ ಬಿಜೆಪಿಯಲ್ಲಿ ಮೇಜರ್ ಸರ್ಜರಿ ಮಾಡಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಮೊದಲಿಗೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ಆ ಹುದ್ದೆಯಿಂದ ಕಿತ್ತೆಸೆದು ಆ ಜಾಗಕ್ಕೆ ಹೊಸಬರನ್ನು ಆಯ್ಕೆ ಮಾಡಲಿದ್ದಾರೆ. ದೆಹಲಿ ಮಟ್ಟದಲ್ಲಿ ಈ ಸುದ್ದಿ ದೃಢಪಟ್ಟಿದ್ದು, ಇನ್ನೆರಡು ದಿನದಲ್ಲೇ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಹೆಡ್ ಲೈನ್ ಕರ್ನಾಟಕಕ್ಕೆ ಲಭಿಸಿದೆ.
ತಿಂಗಳ ಹಿಂದೆಯೇ ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಕೇಳಿಬರುತ್ತಿದ್ದಂತೆ, ನಳಿನ್ ಕುಮಾರ್ ಎತ್ತಂಗಡಿ ಆಗಲಿದ್ದಾರೆ ಎನ್ನುವ ಮಾಹಿತಿಗಳಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರೇ, ಹಗರಣದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಪಕ್ಷದ ಮುಂಚೂಣಿ ಹುದ್ದೆಯಿಂದ ತೆಗೆದು ಹಾಕುವಂತೆ ಸೂಚನೆ ನೀಡಿದ್ದರು ಎನ್ನುವುದು ನಂಬಲರ್ಹ ಮೂಲಗಳಿಂದ ಲಭ್ಯವಾಗಿತ್ತು. ಆದರೆ, ಹಗರಣ ಕೇಳಿಬಂದ ಬೆನ್ನಲ್ಲೇ ನಾಯಕರ ಮೇಲೆ ಕ್ರಮ ಜರುಗಿಸಿದರೆ, ಚುನಾವಣೆ ಹೊತ್ತಲ್ಲಿ ಬೇರೆ ರೀತಿಯ ಪರಿಣಾಮ ಬೀರಬಹುದು ಎನ್ನುವ ಭಯದಿಂದ ವಿಧಾನ ಪರಿಷತ್ ಚುನಾವಣೆ ಕಳೆದ ಕೂಡಲೇ ಬದಲಾವಣೆ ಮಾಡಲು ನಿರ್ಧರಿಸಿದ್ದರು ಎನ್ನಲಾಗಿತ್ತು.
ಅದರಂತೆ, ವಿಧಾನ ಪರಿಷತ್ ಚುನಾವಣೆಗೆ ಒಂದು ದಿನ ಇರುವಾಗಲೇ ಹೈಕಮಾಂಡ್ ವರಿಷ್ಠರು ಚಾಟಿ ಬೀಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮೂಲಗಳ ಪ್ರಕಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಗೆ ತನ್ನ ಹುದ್ದೆಗೆ ರಾಜಿನಾಮೆ ನೀಡುವಂತೆ ಸೂಚನೆ ಹೋಗಿದೆಯಂತೆ. ಕಳೆದ ಒಂದೂವರೆ ವರ್ಷದಲ್ಲಿ ಬಿಜೆಪಿ ಸಾರಥಿಯಾಗಿದ್ದರೂ, ಪಕ್ಷದಲ್ಲಿ ಬಣಗಳನ್ನು ಸೃಷ್ಟಿಸಿದ್ದು ಬಿಟ್ಟರೆ ಒಗ್ಗೂಡಿಸುವ ಪ್ರಕ್ರಿಯೆ ಆಗಿಲ್ಲ ಎನ್ನುವ ಬಗ್ಗೆಯೂ ದೂರು ಹೋಗಿತ್ತು. ಅಲ್ಲದೆ, ಪಕ್ಷದ ಅಧ್ಯಕ್ಷನಾಗಿದ್ದರೂ, ಬೇರೊಬ್ಬರ ಕೈಗೊಂಬೆಯಂತೆ ವರ್ತಿಸುತ್ತಾರೆ ಎನ್ನುವ ಬಗ್ಗೆಯೂ ದೂರುಗಳಿದ್ದವು. ಇಂಥ ದೂರುಗಳಿದ್ದರೂ, ಅದನ್ನು ಕೇಂದ್ರದಲ್ಲಿರುವ ಕರ್ನಾಟಕದ ಪ್ರಭಾವಿ ವ್ಯಕ್ತಿ ಅಲ್ಲಿಗೇ ಗೌಣವಾಗಿಸಿದ್ದರು. ಆದರೆ, ಈಗ ಬಿಟ್ ಕಾಯಿನ್ ಹಗರಣದಲ್ಲಿ ನಳಿನ್ ಕುಮಾರ್ ಹೆಸರು ಪ್ರಬಲವಾಗಿ ಕೇಳಿಬಂದಿದ್ದು ಕೇಂದ್ರ ನಾಯಕರಿಗೂ ನುಂಗಲಾರದ ತುತ್ತಾಗಿತ್ತು.
ಬಿಟ್ ಕಾಯಿನ್ ಪ್ರಕರಣವನ್ನು ಸದ್ದಿಲ್ಲದೇ ಮುಗಿಸಿದರೂ, ಆರೋಪಿತರನ್ನು ಹುದ್ದೆಯಿಂದ ತೆರವು ಮಾಡುವಂತೆ ಪ್ರಧಾನಿ ಸೂಚನೆ ನೀಡಿದ್ದನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಲ್ಲಿ ಪಕ್ಷದ ನಾಯಕರಿದ್ದಾರೆ. ಈ ನಡುವೆ, ಪಕ್ಷದ ಅಧ್ಯಕ್ಷ ಅವಧಿ ಮೂರು ವರ್ಷ ಇದ್ದರೂ, ನಡುವೆ ಬದಲಿಸಿ ಆ ಹುದ್ದೆಗೆ ಯಾರನ್ನು ತರಲಿದ್ದಾರೆ ಅನ್ನುವುದೂ ಕುತೂಹಲ ಹುಟ್ಟಿಸಿದೆ. ದೆಹಲಿ ಮಟ್ಟದ ಮಾಹಿತಿ ಪ್ರಕಾರ, ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಕೇಂದ್ರ ವರಿಷ್ಠರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಗಳಿವೆ.
ಇತ್ತೀಚೆಗೆ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಉತ್ತರ ಭಾರತದಲ್ಲಿ ಚುನಾವಣಾ ಚಾಣಕ್ಯನಾಗಿ ಗುರುತಿಸಲ್ಪಟ್ಟ ಪ್ರಶಾಂತ್ ಕಿಶೋರ್ ಬೆಂಗಳೂರಿನಲ್ಲಿ ಭೇಟಿಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು. ಯಡಿಯೂರಪ್ಪ ಮತ್ತು ಪುತ್ರರು ಹೊಸ ಪಕ್ಷ ಕಟ್ಟಲಿದ್ದಾರೆಯೇ ಎಂಬ ಅನುಮಾನಗಳು ಎದ್ದಿದ್ದವು. ಒಂದ್ವೇಳೆ, ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಪಕ್ಷ ಸ್ಥಾಪನೆಯಾದರೆ, ರಾಜ್ಯದಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎನ್ನುವ ಸಂದೇಶವೂ ಬಿಜೆಪಿ ಹೈಕಮಾಂಡಿಗೆ ಹೋಗಿತ್ತು. ಇದೆಲ್ಲವನ್ನೂ ಗಮನಿಸಿರುವ ಬಿಜೆಪಿ ಹೈಕಮಾಂಡ್, ಕೈಸುಟ್ಟುಕೊಳ್ಳುವ ಬದಲು ವಿಜಯೇಂದ್ರ ಕೈಗೇ ರಾಜ್ಯಾಧ್ಯಕ್ಷ ಪಟ್ಟ ಕೊಟ್ಟು ಮುಂದಿನ ಚುನಾವಣೆ ಎದುರಿಸಲು ಸಜ್ಜಾಗಿದೆ ಎನ್ನುವ ಮಾಹಿತಿಗಳಿವೆ.
ಪ್ರಬಲ ಲಿಂಗಾಯತ ಸಮುದಾಯದ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೇರಿಸಿದರೆ, ಮುಖ್ಯಮಂತ್ರಿಯ ಬದಲಾವಣೆಯೂ ಆಗಲಿದೆ ಅನ್ನುವ ಮಾತೂ ಕೇಳಿಬಂದಿದೆ. ಈಗಾಗ್ಲೇ ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಮೂರು ತಿಂಗಳು ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆಂಬ ಮಾಹಿತಿಗಳಿವೆ. ಹೀಗಾಗಿ ಇದೇ ನೆಪವನ್ನು ಮುಂದಿಟ್ಟು ಮುಖ್ಯಮಂತ್ರಿಯನ್ನೂ ಬದಲಾಯಿಸಿದರೂ ಅಚ್ಚರಿಯಿಲ್ಲ. ಆದರೆ, ಸಿಎಂ ಬದಲಾವಣೆ ಏನಿದ್ದರೂ, ರಾಜ್ಯಾಧ್ಯಕ್ಷರ ಬದಲಾವಣೆಯ ನಂತರವೇ ಆಗಬೇಕಷ್ಟೆ.
Nalin Kumar Kateel to resign from state BJP president post says sources, Vijayendra to be the next president. Nalin Kumars name was out in Bitcoin Karnataka scam.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am