ಮತಾಂತರ ನಿಷೇಧ ಕಾಯ್ದೆ ಭೀತಿ ; ರೊನಾಲ್ಡ್ ಕೊಲಾಸೊ ನೇತೃತ್ವದ ಕ್ರಿಶ್ಚಿಯನ್ ನಿಯೋಗದಿಂದ ಮುಖ್ಯಮಂತ್ರಿ ಭೇಟಿ 

11-12-21 06:13 pm       HK Desk news   ಕರ್ನಾಟಕ

ಮತಾಂತರ ನಿಷೇಧ ಕಾಯ್ದೆ ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ  ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮಂಗಳೂರಿನ ಕ್ರಿಶ್ಚಿಯನ್ ಮುಖಂಡರ ನಿಯೋಗ ಭೇಟಿಯಾಗಿದ್ದು ಅಹವಾಲು ಒಳಗೊಂಡ ಮನವಿಯನ್ನು ಸಲ್ಲಿಸಿದೆ. 

ಬೆಂಗಳೂರು, ಡಿ.11 : ಮತಾಂತರ ನಿಷೇಧ ಕಾಯ್ದೆ ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ  ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮಂಗಳೂರಿನ ಕ್ರಿಶ್ಚಿಯನ್ ಮುಖಂಡರ ನಿಯೋಗ ಭೇಟಿಯಾಗಿದ್ದು ಅಹವಾಲು ಒಳಗೊಂಡ ಮನವಿಯನ್ನು ಸಲ್ಲಿಸಿದೆ. 

ದುಬೈನಲ್ಲಿ ಉದ್ಯಮಿಯಾಗಿರುವ ರೊನಾಲ್ಡ್ ಕೊಲಾಸೊ ನೇತೃತ್ವದಲ್ಲಿ ಕ್ರಿಶ್ಚಿಯನ್ ಮುಖಂಡರ ನಿಯೋಗ ಸಿಎಂ ಭೇಟಿ ಮಾಡಿದ್ದು ರಾಜ್ಯದ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದೆ. ಅಲ್ಲದೆ, ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆಯೂ ಪುನರ್ ವಿಮರ್ಶೆ ಮಾಡುವಂತೆ ಮನವಿ ಮಾಡಿದೆ.‌

ನಿಯೋಗದಲ್ಲಿ ಮಾಜಿ ಶಾಸಕರಾದ ಐವಾನ್ ಡಿಸೋಜ, ಜೆ.ಆರ್ ಲೋಬೊ, ಕಾಂಗ್ರೆಸ್ ನಾಯಕ ನಾಯಕ ರಾಧಾಕೃಷ್ಣ, ಎನ್ ಆರ್ ಐ ಘಟಕದ ಉಪಾಧ್ಯಕ್ಷೆ ಆಗಿದ್ದ ಆರತಿ ಕೃಷ್ಣ ಇದ್ದರು.‌ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆಯಾಗಿದೆ. ಹಾಗಿದ್ದರೂ ಕ್ರಿಸ್ತಿಯನ್ನರು ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಈ ರೀತಿ ಬಿಂಬಿಸುವುದು ಸರಿಯಲ್ಲ.‌ ಸಮಾಜದಲ್ಲಿ ನಮಗೂ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಿ. 

ಮೊದಲು ನಮ್ಮ ಮೇಲೆ ಆಗುತ್ತಿರುವ ದಾಳಿಯನ್ನ ತಪ್ಪಿಸಿ.‌ ಮುಖ್ಯಮಂತ್ರಿ ಅವರಿಗೆ ನಮ್ಮ ಮನವಿಯನ್ನ ಒಪ್ಪಿಸಿದ್ದೇವೆ. ಎಲ್ಲವನ್ನು ಸರಿಪಡಿಸುತ್ತೇನೆ ಅಂತಾ ಸಿಎಂ ಭರವಸೆ ನೀಡಿದ್ದಾರೆ ಅಂತಾ ರೊನಾಲ್ಡ್ ಕೊಲಾಸೋ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

BJP in Karnataka to introduce stringent anti conversion law Ronald Colaco meets CM urging not to pass the bill as The Karnataka government is all set to bring in stringent anti-conversion laws in the state in the winter session of the Legislative Assembly which is scheduled to begin on December 13 in the bordering district of Belagavi.