ಹೋಂ ಸ್ಟೇಯಲ್ಲಿ ಡ್ರಗ್ ಸಿಕ್ಕಿದ್ರೆ ಮಾಲೀಕರೇ ಹೊಣೆ ; ಡಿಜಿಪಿ ಎಚ್ಚರಿಕೆ 

14-09-20 07:35 pm       Chikmagalur Correspondent   ಕರ್ನಾಟಕ

ಹೋಂ ಸ್ಟೇಯಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಮಾಲೀಕರು ಮಾಹಿತಿ ನೀಡಿದರೆ ಅವರಿಗೆ ಇನಾಮು ನೀಡುತ್ತೇವೆ. ಮುಚ್ಚಿ ಹಾಕಲು ಯತ್ನಿಸಿದರೆ ಅವರಿಗೆ ಶಿಕ್ಷೆ ಪಕ್ಕ - ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ

ಚಿಕ್ಕಮಗಳೂರು, ಸೆಪ್ಟೆಂಬರ್ 14: ಚಿಕ್ಕಮಗಳೂರಿನ ಪ್ರವಾಸಿ ತಾಣಗಳಲ್ಲಿ ಇರುವ ಹೋಂ ಸ್ಟೇಗಳಿಗೆ ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ ರವಾನಿಸಿದ್ದಾರೆ. ಇಂದು ಚಿಕ್ಕಮಗಳೂರು ಭೇಟಿ ಮಾಡಿದ ಸೂದ್, ಡ್ರಗ್ಸ್ ಕುರಿತು ಮಾತನಾಡುತ್ತಾ ಇಲ್ಲೆಲ್ಲಾ ಹೋಮ್ ಸ್ಟೇಗಳು ಜಾಸ್ತಿ. ಎಲ್ಲಾದ್ರೂ ಮಾದಕ ದ್ರವ್ಯ ಬಳಸುವ ಪ್ರಕರಣ ಕಂಡು ಬಂದರೆ ಅದಕ್ಕೆ ಮಾಲೀಕರೇ ಹೊಣೆ. ಅವರ ಮೇಲೇನೇ ಏಕ್ಷನ್ ತಗೋಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ. 

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿಜಿಪಿ, ಹೋಂ ಸ್ಟೇಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿದ್ದೇವೆ. ಹೋಂ ಸ್ಟೇಯಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಮಾಲೀಕರು ಮಾಹಿತಿ ನೀಡಿದರೆ ಅವರಿಗೆ ಇನಾಮು ನೀಡುತ್ತೇವೆ. ಮುಚ್ಚಿ ಹಾಕಲು ಯತ್ನಿಸಿದರೆ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಡ್ರಗ್ಸ್‌, ಮಾದಕ ದ್ರವ್ಯಗಳ ದಂಧೆ ನಿಯಂತ್ರಿಸೋದು ಕೇವಲ ನಾರ್ಕೋಟಿಕ್ ವಿಂಗ್‌ ಜವಾಬ್ದಾರಿ ಮಾತ್ರ ಅಲ್ಲ.. ಪ್ರತಿ ಪೊಲೀಸ್‌ ಠಾಣೆಯ ಜವಾಬ್ದಾರಿ ಆಗಿರತ್ತೆ. ಡ್ರಗ್ಸ್‌ ಹಾವಳಿ ಎಲ್ಲೇ ಆಗಲಿ ಕಂಡುಬರಬಾರದು. ಅದು ನಮ್ಮ ಪೊಲೀಸ್ ಇಲಾಖೆಯ ಗುರಿ ಎಂದು ಹೇಳಿದರು.

Join our WhatsApp group for latest news updates