ಬ್ರೇಕಿಂಗ್ ನ್ಯೂಸ್
23-12-21 01:36 pm HK Desk news ಕರ್ನಾಟಕ
ಮೈಸೂರು, ಡಿ.23 : ಮೂರು ಮಕ್ಕಳ ತಾಯಿ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ 17 ವರ್ಷದ ಅಪ್ರಾಪ್ತ ಹುಡುಗನ ಜೊತೆ ಲವ್ವಿಡವ್ವಿ ನಡೆಸಿದ್ದಲ್ಲದೆ, ಆತನನ್ನು ಮದುವೆಯಾಗಲು ದುಂಬಾಲು ಬಿದ್ದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಹುಡುಗ ಪಿಯುಸಿ ವಿದ್ಯಾರ್ಥಿಯಾಗಿದ್ದು ಆತನನ್ನು ಮದುವೆ ಮಾಡಿಕೊಳ್ಳಲು ಮಹಿಳೆ ಬೆನ್ನುಬಿದ್ದಿದ್ದಾಳೆ. ಘಟನೆ ಬಗ್ಗೆ ಪೋಕ್ಸೋ ಕಾಯ್ದೆಯಡಿ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಮಕ್ಕಳನ್ನು ಹೊಂದಿರುವ ಮೂಲತಃ ಕೇರಳದ ವೈನಾಡು ಜಿಲ್ಲೆಯ ಕಲ್ಪೆಟ್ಟ ನಿವಾಸಿ 35 ವರ್ಷದ ಪಲ್ಲವಿ, ಪತಿಯಿಂದ ದೂರವಾಗಿ ಬೆಂಗಳೂರಿನಲ್ಲಿ ವಾಸವಿದ್ದಾಳೆ. ಈ ನಡುವೆ, ಫೇಸ್‌ಬುಕ್ ಮೂಲಕ ಮೈಸೂರಿನ 17 ವರ್ಷದ ಬಾಲಕನ ಪರಿಚಯವಾಗಿತ್ತು. ಫೇಸ್ಬುಕ್ ಚಾಟಿಂಗ್ ಮೂಲಕ ಸಲುಗೆ ಬೆಳೆದಿದ್ದು ಒಂದು ತಿಂಗಳ ಹಿಂದೆ ಆಕೆಯನ್ನು ಭೇಟಿ ಮಾಡಲೆಂದು ಬಾಲಕ ತೆರಳಿದ್ದ.

ಆನಂತರ ಮನೆಯಿಂದ ನಾಪತ್ತೆಯಾಗಿದ್ದ ಹುಡುಗ 10 ದಿನಗಳ ಕಾಲ ಕೇರಳ, ಆಂಧ್ರಪ್ರದೇಶ ಹಾಗೂ ಬೆಂಗಳೂರಿನಲ್ಲಿ ಸುತ್ತಾಡಿ ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದ. ಈತನ್ಮಧ್ಯೆ, ಬಾಲಕನ ಸುಳಿವು ಸಿಗದೇ ಇದ್ದುದರಿಂದ ಪಾಲಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸರ ಹುಡುಕಾಟದ ಬಳಿಕ ಹುಡುಗ ಸಿಕ್ಕಿದ್ದು ಮರಳಿ ಮನೆಗೆ ಬಂದಿದ್ದ. ಮಹಿಳೆಗೆ ತಾನೇ ಮದುವೆಯಾಗುವುದಾಗಿ ಹುಡುಗ ಹೇಳಿ ಬಂದಿದ್ದ ಎನ್ನಲಾಗಿತ್ತು.
ಈ ಬಗ್ಗೆ ಯಾವುದೇ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಮನೆಗೆ ಬಂದು ತನ್ನ ಪಾಡಿಗಿದ್ದ ಬಾಲಕನನ್ನು ಸ್ವತಃ ಮಹಿಳೆ ಪಲ್ಲವಿ ಹುಡುಕುತ್ತಾ ಬಂದಿದ್ದಾಳೆ. ಹುಡುಗನಿಂದಲೇ ವಿಳಾಸ ಪಡೆದು ಗ್ರಾಮಕ್ಕೆ ಬಂದಿದ್ದ ಮಹಿಳೆ ಮನೆಯವರಲ್ಲಿ ಹುಡುಗನನ್ನು ಮದುವೆ ಮಾಡಿಕೊಡುವಂತೆ ಕುಟುಂಬದವರನ್ನು ಒತ್ತಾಯಿಸಿದ್ದಾಳೆ. ಇದರಿಂದ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದು ಪೊಲೀಸರಿಗೆ ತಿಳಿಸಿದ್ದಲ್ಲದೆ ಶಿಶು ಅಭಿವೃದ್ಧಿ ಇಲಾಖೆಗೂ ದೂರು ನೀಡಿದ್ದಾರೆ.
ತನಿಖೆ ನಡೆಸಿದ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದಿದ್ದು ಅಪ್ರಾಪ್ತನನ್ನು ಮೈಸೂರಿನ ಬಾಲ ಮಂದಿರದಲ್ಲಿ ಹಾಗೂ ಮಹಿಳೆಯನ್ನು ರಾಜ್ಯ ಮಹಿಳಾ ನಿಲಯದಲ್ಲಿ ಇರಿಸಿದೆ. ಪೊಲೀಸರು ಮಹಿಳೆಯ ವಿರುದ್ಧ ಅಪ್ರಾಪ್ತ ಬಾಲಕನನ್ನು ಲೈಂಗಿಕ ದುರುಪಯೋಗ ಮಾಡಿದ ಕಾರಣಕ್ಕೆ ಪೋಕ್ಸೋ ಕೇಸು ದಾಖಲಿಸಿದ್ದಾರೆ.
35 year old woman seen romancing with PUC boy in Mysuru, woman thrashed by family. A case has been registered against the woman in women police station.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm