ಬ್ರೇಕಿಂಗ್ ನ್ಯೂಸ್
23-12-21 04:01 pm HK Desk news ಕರ್ನಾಟಕ
ಬೆಂಗಳೂರು, ಡಿ.23 : ರಾಜ್ಯ ಬಿಜೆಪಿ ಸರಕಾರ ಒಂದೆಡೆ ಮತಾಂತರ ವಿರುದ್ಧ ಪ್ರಬಲ ಕಾಯ್ದೆ ಜಾರಿಗೆ ತರಲು ಹೊರಟಿದ್ದರೆ, ಅದರ ವಿರುದ್ಧ ಕಾನೂನು ಹೋರಾಟ ನಡೆಸಲು ರಾಜ್ಯದ 14 ಚರ್ಚ್ ಧರ್ಮಪ್ರಾಂತ್ಯದ ಬಿಷಪ್ಪರು ಮುಂದಾಗಿದ್ದಾರೆ. ರಾಜ್ಯ ಸರಕಾರ ಕ್ರಿಸ್ತಿಯನ್ನರನ್ನು ಟಾರ್ಗೆಟ್ ಮಾಡಿಕೊಂಡು ಈ ರೀತಿಯ ಕಾಯ್ದೆ ತರುತ್ತಿದೆ ಎನ್ನುವ ಭಾವನೆ ಬಿಷಪರದ್ದಾಗಿದ್ದು, ಅದನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಡಾ.ಕೆ.ಎ.ವಿಲಿಯಂ, ಕ್ರಿಸ್ತಿಯನ್ನರು ಯಾವತ್ತೂ ಮತಾಂತರ ಕೆಲಸವನ್ನು ಮಾಡುತ್ತಿಲ್ಲ. ಹಾಗಾಗಿ ಈ ಕಾಯ್ದೆ ಬಗ್ಗೆ ಕ್ರಿಸ್ತಿಯನ್ನರು ಆತಂಕ ಪಡುವ ಅಗತ್ಯವೂ ಇಲ್ಲ. ಮೈಸೂರು ಧರ್ಮಪ್ರಾಂತ್ಯದಲ್ಲಿ 150ಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಿದ್ದು, ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಸೇವೆ ನೀಡುತ್ತಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳಷ್ಟು ಸೇವಾ ಕಾರ್ಯವನ್ನೂ ಮಾಡಿದ್ದೇವೆ. ಆದರೆ, ಯಾರಲ್ಲಿ ಕೂಡ ನಾವು ಅವರನ್ನು ಧರ್ಮ ಬದಲಿಸುವಂತೆ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.
ಆದರೆ, ಈಗ ಸಂದಿಗ್ಧ ಸನ್ನಿವೇಶ ಎದುರಾಗಲು ಕಾರಣವಾಗಿದ್ದು ಕೆಲವರು ಆಧಾರ ರಹಿತ ಆರೋಪ ಮಾಡಿರುವುದು. ಬಲವಂತದ ಮತಾಂತರ ಕೆಲಸ ಆಗುತ್ತಿದ್ದರೆ, ಅದನ್ನು ನಿಯಂತ್ರಿಸಲು, ಶಿಕ್ಷೆ ವಿಧಿಸಲು ಈಗಾಗಲೇ ಇರುವ ಕಾನೂನಿನಲ್ಲಿ ಅವಕಾಶಗಳಿವೆ. ಅದಕ್ಕಾಗಿ ಹೊಸ ಕಾಯ್ದೆ ತರಬೇಕಾದ ಅಗತ್ಯ ಇಲ್ಲ. ಆದರೆ, ಈಗ ರಾಜ್ಯ ಸರಕಾರ ಪ್ರಸ್ತಾವಿಸಿರುವ ಕಾಯ್ದೆ ಜಾರಿಗೆ ಬಂದರೆ ಆ ಬಗ್ಗೆ ನಾವು ಚರ್ಚೆ ನಡೆಸಬೇಕಾಗುತ್ತದೆ. ಅದರಿಂದ ಕ್ರಿಸ್ತಿಯನ್ನರನ್ನು ಟಾರ್ಗೆಟ್ ಮಾಡಿ, ಹತ್ತಿಕ್ಕುವ ಪ್ರಯತ್ನ ಆಗುತ್ತದೆಯೇ ಎಂಬ ಬಗ್ಗೆ ಚರ್ಚಿಸುತ್ತೇವೆ. ಈ ಬಗ್ಗೆ ಸದ್ಯದಲ್ಲೇ 14 ಧರ್ಮಪ್ರಾಂತ್ಯದ ಬಿಷಪ್ ಗಳು ಸೇರಿ ಸಭೆ ನಡೆಸುತ್ತೇವೆ. ಅಗತ್ಯ ಬಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಭಾರತದ ಸಂವಿಧಾನವು ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಅನುಸರಿಸಲು ಗ್ಯಾರಂಟಿ ಕೊಟ್ಟಿದೆ. ಯಾವುದೇ ಸರಕಾರ ಕೂಡ ಇದನ್ನು ಮೀರಿ ಹೋಗಲು ಸಾಧ್ಯವಿಲ್ಲ ಎಂದು ಬಿಷಪ್ ಡಾ.ಕೆ.ಎಂ.ವಿಲಿಯಂ ಹೇಳಿದ್ದಾರೆ.
At a time when the state government has decided to go ahead with the adoption of a bill against religious conversions, a group of 14 bishops from across Karnataka has decided to meet soon and chalk out a strategy to carry on legal fight against the said law. The group feels that this act specifically targets the Christians.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am