ಬ್ರೇಕಿಂಗ್ ನ್ಯೂಸ್
28-12-21 01:44 pm HK Desk news ಕರ್ನಾಟಕ
ಬೆಂಗಳೂರು, ಡಿ. 28: ಇಂದು ರಾತ್ರಿ 10 ಗಂಟೆಯಿಂದಲೇ ರಾಜ್ಯದಲ್ಲೆಡೆ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಅವಶ್ಯಕ ವಸ್ತು ಮತ್ತು ಸೇವೆ ಹೊರತುಪಡಿಸಿ ಬೇರೆಯಲ್ಲವೂ ಬಂದ್ ಆಗಿರಲಿದೆ.
ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ನಿಯಂತ್ರಿಸಲು ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಇಷ್ಟು ದಿನ ತಡರಾತ್ರಿವರೆಗೂ ಓಡಾಡುತ್ತಿದ್ದವರು ರಾತ್ರಿ 10 ಗಂಟೆಯೊಳಗೆ ಮನೆ ಸೇರಿಕೊಳ್ಳಬೇಕು. ತಡರಾತ್ರಿವರೆಗೂ ಕ್ಲಬ್, ಪಬ್ ಅಂತ ಸುತ್ತಾಡುತ್ತಿದ್ದವರು ಹಾಗೂ ವ್ಯಾಪಾರ- ವಹಿವಾಟು ಎಲ್ಲವೂ ರಾತ್ರಿ 10 ಗಂಟೆಯ ನಂತರ ನಡೆಯುವುದಿಲ್ಲ. ಓಮಿಕ್ರಾನ್ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಮೊರೆ ಹೋಗಿದ್ದು, ಮಂಗಳವಾರ ರಾತ್ರಿ 10 ಗಂಟೆಯಿಂದ ರಾಜ್ಯದಲ್ಲಿ ಕಠಿಣ ನಿಯಮಗಳು ಜಾರಿಯಾಗುತ್ತಿದೆ. ರಾಜ್ಯದ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಬೀಳಲಿದ್ದು, ಫ್ಲೈಓವರ್‌ಗಳು ಬಂದ್ ಆಗುತ್ತವೆ. ಬಾರ್, ಪಬ್, ಹೋಟೆಲ್, ಸಿನಿಮಾ, ಮಾಲ್ ಸೇರಿದಂತೆ ಇಡೀ ರಾಜ್ಯವೇ ಸಂಪೂರ್ಣ ಸ್ತಬ್ಧವಾಗಲಿದೆ.
ರಾಜ್ಯದಲ್ಲಿ 31 ಓಮಿಕ್ರಾನ್ ಸೋಂಕು ಪ್ರಕರಣ
ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕು ಸದ್ದಿಲ್ಲದೇ ಆರ್ಭಟ ಶುರು ಮಾಡಿದ್ದು, ದಿನಕ್ಕೆ ಒಂದೋ, ಎರಡೋ ಬರುತ್ತಿದ್ದ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಸದ್ಯ ರಾಜ್ಯದಲ್ಲಿ 31 ಓಮಿಕ್ರಾನ್ ಸೋಂಕು ಪ್ರಕರಣ ದೃಢಪಟ್ಟಿವೆ. ಅದೇ ರೀತಿ ನೆರೆ ರಾಜ್ಯದಲ್ಲೂ ಓಮಿಕ್ರಾನ್ ಹಾವಳಿ ಮಿತಿ ಮೀರಿದೆ. ಹೀಗಾಗಿ, ರಾಜ್ಯ ಸರ್ಕಾರ ಹೊಸ ರೂಪಾಂತರಿಗೆ ಆರಂಭದಲ್ಲೇ ಕಟ್ಟಿಹಾಕಲು ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಇಂದಿನಿಂದ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.
ನೈಟ್ ಕರ್ಫ್ಯೂ ವೇಳೆ ಏನಿರುತ್ತೆ?
ಇಂದು ರಾತ್ರಿ 10 ಗಂಟೆಯೊಳಗೆ ವ್ಯಾಪಾರ ವಹಿವಾಟು ಎಲ್ಲವೂ ಬಂದ್ ಆಗಲಿದ್ದು, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್‌ಕರ್ಫ್ಯೂ ಜಾರಿಯಲ್ಲಿರಲಿದೆ. ವೈದ್ಯಕೀಯ ಸಿಬ್ಬಂದಿ, ರೋಗಿಗಳು ಮತ್ತು ಅವರ ಸಹಾಯಕರು ಓಡಾಡಬಹುದು. ತುರ್ತು ಸೇವೆಗಳು ಓಪನ್ ಇರಲಿದ್ದು, ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿವೆ.ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಕಂಪನಿ ನೌಕರರು, ಕಾರ್ಖಾನೆಯ ಕಾರ್ಮಿಕರು ತಮ್ಮ ಐಡಿ ಕಾರ್ಡ್ ತೋರಿಸಿ ಓಡಾಡಲು ಅವಕಾಶ ಇದೆ. ಗೂಡ್ಸ್ ಸೇವೆ ಇರಲಿದೆ. ಬಸ್, ರೈಲು, ವಿಮಾನ ಸೇವೆ ಇರಲಿದೆ. ರಾತ್ರಿ ಪ್ರಯಾಣ ಮಾಡುವವರು ತಮ್ಮ ಪ್ರಯಾಣದ ಟಿಕೆಟ್ ತೋರಿಸಿ ಓಡಾಡಬಹುದಾಗಿದೆ. ಫುಡ್ ಹೋಂ ಡೆಲಿವರಿಗೆ ಅನುಮತಿ ಇರುತ್ತದೆ. ಇ-ಕಾಮರ್ಸ್, ಖಾಲಿ ವಾಹನ ಸಂಚಾರಕ್ಕೆ ಅವಕಾಶ ಇದ್ದು, ದೂರ ಪ್ರಯಾಣದ ಬಸ್ಗಳಿಗೆ ಅನುಮತಿ ನೀಡಲಾಗಿದೆ. ಕರ್ಫ್ಯೂ ವೇಳೇ ಆಟೋ, ಕ್ಯಾಬ್ಗೆ ಅವಕಾಶ ಇರುತ್ತದೆ.
ಕರ್ಫ್ಯೂ ವೇಳೆ ಏನಿರಲ್ಲ?
ಎಲ್ಲಾ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ ಹೇರಲಾಗುತ್ತದೆ. 10 ಗಂಟೆ ಒಳಗೆ ಹೋಟೆಲ್, ಬಾರ್, ರೆಸ್ಟೋರೆಂಟ್, ಮಾಲ್, ಥಿಯೇಟರ್, ಶಾಪ್, ಕಚೇರಿಗಳು ಲಾಕ್ ಆಗಬೇಕು (ಪಬ್, ಬಾರ್, ಕ್ಲಬ್, ಹೋಟೆಲ್ಗಳಲ್ಲಿ ಡಿಸೆಂಬರ್ 28ರಿಂದ 10 ದಿನ ಶೇ.50ರಷ್ಟು ಮಾತ್ರ ಅವಕಾಶ). ಬಟ್ಟೆ ಅಂಗಡಿ, ಬೀದಿ ಬದಿ ವ್ಯಾಪಾರ ಕೂಡ ಕ್ಲೋಸ್ ಆಗಲಿದೆ. ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡುವಂತಿಲ್ಲ. ಇನ್ನು ರಾತ್ರಿ 10ರಿಂದ ಮೆಟ್ರೋ ಟ್ರೇನ್ ಸಂಚಾರದಲ್ಲಿ ಕಡಿತಗೊಳಿಸಲಾಗಿದೆ.
ಸುಮ್ಮನೇ ಓಡಾಡಿದರೆ ಬೀಳುತ್ತದೆ ದಂಡ
ವ್ಯಾಪಾರಕ್ಕೆ ತೊಂದರೆಯಾಗುತ್ತದೆ ನೈಟ್ ಕರ್ಫ್ಯೂ ಸಡಿಲಿಕೆ ಮಾಡಿ ಅನ್ನುವ ಒತ್ತಾಯಕ್ಕೆ ಖುದ್ದು ಸಿಎಂ ಬಸವರಾಜ ಬೊಮ್ಮಾಯಿಯವರು ಮರುಪರಿಶೀಲನೆ ಮಾಡುವುದಿಲ್ಲ ಎಂದಿದ್ದಾರೆ. ವ್ಯಾಪಾರ, ವಹಿವಾಟು ನಡೀಬೇಕು. ಜನರಿಗೆ ತೊಂದರೆಯಾಗುತ್ತದೆ ಅನ್ನುವ ಕಾಳಜಿ ಇದೆ. ಆದರೆ ಜನರ ಆರೋಗ್ಯದ ದೃಷ್ಟಿಯಿಂದಲೇ ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ ಅಂತಾ ಸಿಎಂ ಖಡಕ್ ಆಗಿ ಸಂದೇಶ ನೀಡಿದರು. ಇಂದು ರಾತ್ರಿ 10 ಗಂಟೆಗೆ ಪೊಲೀಸರು ಫೀಲ್ಡ್‌ಗಿಳಿಯಲಿದ್ದು, ಬೆಂಗಳೂರು ಸೇರಿ ರಾಜ್ಯದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಪೊಲಿಸ್ ಹದ್ದಿನ ಕಣ್ಣಿಡಲಿದ್ದು, ಸುಮ್ಮನೇ ಓಡಾಡಿದರೆ ದಂಡ ತೆರಬೇಕಾಗುತ್ತದೆ. ಆಸ್ಪತ್ರೆಗೆ ಹೋಗುವವರು, ನೈಟ್ ಶಿಫ್ಟ್ ಕೆಲಸಕ್ಕೆ ಹೋಗುವವರು ಸೂಕ್ತ ದಾಖಲೆ ತೋರಿಸಬೇಕು.
ರಾಜ್ಯದಲ್ಲಿ 4000 ಐಸಿಯು ತಯಾರಿದೆ
ಜನರ ಆರೋಗ್ಯ ದೃಷ್ಟಿಯಿಂದಲೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ, ಅನಿವಾರ್ಯವಾಗಿ ಇಂದಿನಿಂದ ಜಾರಿಯಾಗುವ 10 ದಿನಗಳ ಕಠಿಣ ನಿಯಮಗಳನ್ನು ಅನುಸರಿಸಬೇಕಿದೆ. ಓಮಿಕ್ರಾನ್ ಪ್ರಕರಣ ಹೆಚ್ಚು ಹರಡಿದರೆ ಏನು ಮಾಡಬೇಕು ಎಂಬ ಬಗ್ಗೆ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಚರ್ಚೆಯಾಗಿದೆ. ಓಮಿಕ್ರಾನ್ ಹೇಗೆ ಹರಡುತ್ತಿದೆ? ಹೊರರಾಜ್ಯ, ಹೊರ ದೇಶದಲ್ಲಿ ಹೇಗೆ ಹರಡುತ್ತಿದೆ ಎಂಬ ಕುರಿತು ಚರ್ಚೆಯಾಗಿದೆ. ಸದ್ಯ ರಾಜ್ಯದಲ್ಲಿ 4000 ಐಸಿಯು ತಯಾರಿದ್ದು, 7051 ಬೆಡ್‌ಗಳನ್ನು ಐಸಿಯು ಬೆಡ್ಗಳಾಗಿ ಪರಿವರ್ತನೆ ಮಾಡಲಾಗಿದೆ. ಅಷ್ಟೇ ಅಲ್ಲದೇ, 3091 ಹಾಸಿಗೆಗಳು ಕೊರೊನಾಗೆ ಹೆಚ್ಚುವರಿಯಾಗಿ ಮೀಸಲು ಇಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
As Omicron cases continue to rise across the country, Karnataka has imposed a 10-day night curfew in the state starting today. "Night curfew has been imposed in the state in the interest of public health," Chief Minister Basavaraj Bommai said while speaking to media persons on Monday.
29-10-24 11:02 pm
HK News Desk
ರೈತರ ಜಮೀನಿಗೆ ವಕ್ಫ್ ನೋಟಿಸ್ ; ಬೇಲಿಯೇ ಎದ್ದು ಹೊಲ...
29-10-24 10:09 pm
Pratap Simha, waqf board: ಮುಸ್ಲಿಮರಿಗೆ ವಕ್ಫ್ ಆ...
29-10-24 02:43 pm
Yediyurappa, Vijayendra, Ramesh Jarkiholi: ವಿ...
28-10-24 07:40 pm
Tumkur selfie, Hamsa: ಸೆಲ್ಫಿ ಕ್ಲಿಕ್ಕಿಸುವಾಗ ಕೆ...
28-10-24 05:46 pm
29-10-24 08:23 pm
HK News Desk
ಕಾಞಂಗಾಡ್ ; ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ...
29-10-24 12:01 pm
ಕೇರಳದ ಯೂಟ್ಯೂಬರ್ ದಂಪತಿ ಸಾವಿಗೆ ಶರಣು ; ಕೊನೆಯ ವಿ...
28-10-24 08:38 pm
ಇಸ್ರೇಲಿಗೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಪೋಸ...
28-10-24 05:56 pm
Cyber fraud, Digital arrest, Modi: "ಡಿಜಿಟಲ್ ಅ...
28-10-24 11:47 am
28-10-24 10:51 pm
Giridhar Shetty, Headline Karnataka, Mangalore
Leopard, pilar, Deralakatte; ದೇರಳಕಟ್ಟೆ ಪ್ರದೇಶ...
28-10-24 03:53 pm
MLA Harish Poonja, B K Harishprasad: ಪುಡಿ ರಾಜ...
28-10-24 01:00 pm
Pejawar Seer, Caste Census: ಪ್ರಜಾಪ್ರಭುತ್ವದಲ್ಲ...
27-10-24 10:37 pm
Ashok Rai Puttur, Mangalore; ನಾನೊಬ್ಬ ಹಿಂದು, ದ...
27-10-24 02:41 pm
29-10-24 01:01 pm
Mangalore Correspondent
Mangalore Murder, Crime, Kateel: ಕಟೀಲು ಬಳಿ ಮನ...
29-10-24 12:38 pm
Mangalore Crime, Drugs: ಪಣಂಬೂರಿನಲ್ಲಿ ಡ್ರಗ್ಸ್...
28-10-24 11:12 pm
Bangalore Crime, Blackmail: ಪತ್ನಿ ಮತ್ತು ಆಕೆಯ...
28-10-24 02:47 pm
Mangalore News, Cyber Fraud: ಮಹಾರಾಷ್ಟ್ರದ ಎಸ್ಐ...
27-10-24 08:57 pm