ಬ್ರೇಕಿಂಗ್ ನ್ಯೂಸ್
20-01-22 10:51 pm HK Desk news ಕರ್ನಾಟಕ
ಮಂಡ್ಯ, ಜ.20 : ಪ್ರಚೋದನೆಕಾರಿ ಹೇಳಿಕೆ ನೀಡಿ ಜೈಲಿಗೆ ಹೋಗಿ ಹೊರಬಂದ ಕಾಳಿಕಾ ಮಠದ ಋಷಿಕುಮಾರ ಸ್ವಾಮಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮಿ, ಅಲ್ಲಿನ ಕಂಬಗಳನ್ನ ನೋಡಿದ್ರೆ ಪ್ರತಿಯೊಬ್ಬ ಹಿಂದು ಮಗುವೂ ಪ್ರಚೋದನೆಗೆ ಒಳಪಡುತ್ತದೆ. ಕಂಬದ ಬಿಂಬಗಳು, ನಾಗನ ಕಟ್ಟೆಗಳನ್ನ ನೋಡಿದ್ರೆ ಯಾರು ಕೂಡ ಪ್ರಚೋದನೆಗೆ ಒಳಗಾಗುತ್ತಾರೆ. ನಾನು ಒಬ್ಬ ಯತಿ, ಇನ್ನೆಷ್ಟು ಪ್ರಚೋದನೆಗೆ ಒಳಪಡಲಿಕ್ಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ನನಗೆ ಕಾನೂನಿನ ಮೇಲೆ ಅಪಾರ ನಂಬಿಕೆ ಇದೆ. ಬಾಬರಿ ಮಸೀದಿಯನ್ನು ರಾಮನ ದೇವಸ್ಥಾನ ಆಗೋದಕ್ಕೆ ನನ್ನ ದೇಶದ ಕಾನೂನು ಒಪ್ಪಿದೆ. ಈ ವಿಚಾರದಲ್ಲೂ ಕೋರ್ಟ್ ನಲ್ಲಿ ನನಗೆ ಖಂಡಿತ ನ್ಯಾಯ ಸಿಗಲಿದೆ. ಬಾಬರಿ ಮಸೀದಿ ಉತ್ಕನನ ಮಾಡಿ ಕೆಳಗಿರುವ ಕಂಬ ತೆಗೆದು ಇಲ್ಲಿ ದೇವಸ್ಥಾನ ಇತ್ತು ಅಂತ ಹೇಳಬೇಕಾಯಿತು. ಆದ್ರೆ ಶ್ರೀರಂಗಪಟ್ಟಣ ಮಸೀದಿಯ ದಾಖಲೆ ತರಿಸಿಕೊಂಡರೆ ಸಾಕು ದೇವಾಲಯ ಅಂತ ಗೊತ್ತಾಗುತ್ತೆ. ಉತ್ಖನನ ಮಾಡಬೇಕಿಲ್ಲ ಎಂದು ಹೇಳಿದರು.


ಸರ್ಕಾರ ದಯವಿಟ್ಟು ಮುಂಬರುವ ಹನುಮ ಜಯಂತಿ ಒಳಗಾಗಿ ಮಸೀದಿ ಬಾಗಿಲು ಹಾಕಿಸಬೇಕು. ನಾವು ಪ್ರಚೋದನೆ ಆಗುತ್ತಿಲ್ಲ, ನಮ್ಮೊಳಗೆ ಪ್ರಚೋದನೆ ಆಗಿಹೋಗುತ್ತದೆ. ಮಸೀದಿಯಾಗಿರುವ ಹಿಂದು ದೇವಾಲಯದ ಅವಶೇಷದ ಮೇಲಿನ ಗೋಪುರ ನೋಡಿದ್ರೆ ನೋವಾಗುತ್ತೆ. ಮುಂದೆ ಆಗುವಂತಹ ಅನಾಹುತಗಳನ್ನು ತಡೆದು ಮಸೀದಿ ಬಂದ್ ಮಾಡಿಸಬೇಕು. ನಾನು ಹೋರಾಟಕ್ಕೆ ಶತ ಸಿದ್ಧ, ಶತ ಬದ್ಧ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ನನ್ನ ಮನಸ್ಸಿನ ಭಾವನೆಯನ್ನ ಹಂಚಿಕೊಂಡಿದ್ದೇನೆ ಎಂದು ಹೇಳಿದರು.
ಬಾಬರಿ ರೀತಿಯಲ್ಲೇ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಒಡೆದು ಹಾಕಬೇಕೆಂದ ಋಷಿಕುಮಾರ ಸ್ವಾಮೀಜಿ ಬಂಧನ !
Mandya Rushikukar Swami released from jail says I abide with what I said about mosques.
13-01-26 03:04 pm
Bangalore Correspondent
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
13-01-26 04:21 pm
HK News Desk
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm