ಕಾರೊಂದಿಗೆ ಹಳ್ಳದಲ್ಲಿ ಕೊಚ್ಚಿ ಹೋದ ಜೆಸ್ಕಾಂ ಜೆಇಇ

18-09-20 11:02 am       Headline Karnataka News Network   ಕರ್ನಾಟಕ

ತುಂಬಿಹರಿಯುತ್ತಿದ್ದ ಹಳ್ಳವನ್ನು ದಾಟಲು ಯತ್ನಿಸಿದ ಜೆಸ್ಕಾಂ ಎಂಜಿನಿಯರ್ ಒಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ.

ಕಲಬುರ್ಗಿ, ಸಪ್ಟೆಂಬರ್ 18: ತುಂಬಿಹರಿಯುತ್ತಿದ್ದ ಹಳ್ಳವನ್ನು ದಾಟಲು ಯತ್ನಿಸಿದ ಜೆಸ್ಕಾಂ ಎಂಜಿನಿಯರ್ ಒಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಜಿಲ್ಲೆಯ ಆಳಂದ ತಾಲ್ಲೂಕಿನ ವೈಜಾಪುರ–ಬಮ್ಮನಳ್ಳಿ ಗ್ರಾಮದ ಮಧ್ಯದಲ್ಲಿ ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳವನ್ನು ಕಾರಿನಲ್ಲಿ ದಾಟಲು ಅಫಜಲಪುರದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದರಾಮ ದಾನಪ್ಪ ಅವಟೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.

ಅವರೊಂದಿಗೇ ಕಾರಿನಲ್ಲಿದ್ದ ರಾಜಶೇಖರ ಬಸವರಾಜ ಕುಂಬಾರ ಎಂಬವರು ಈಜಿಕೊಂಡು ಪಾರಾಗಿದ್ದಾರೆ. ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಈ ನಡುವೆ ಅಳಂದ ಬಳಿಯ ಹಳ್ಳದಲ್ಲಿ ಸಿಲುಕಿದ್ದ ರಾಜಶೇಖರ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಆದರೆ ಎಂಜಿನಿಯರ್ ಸಿದ್ದರಾಮ ದಾನಪ್ಪ ಅವಟೆ ಅವರ ಬಗ್ಗೆ ಈ ವರೆಗೆ ಸುಳಿವು ಸಿಕ್ಕಿಲ್ಲ.

Join our WhatsApp group for latest news updates