ಬ್ರೇಕಿಂಗ್ ನ್ಯೂಸ್
08-02-22 06:52 pm HK Desk news ಕರ್ನಾಟಕ
ಬೆಂಗಳೂರು, ಫೆ.8 : ಹಿಜಾಬ್ ಧರಿಸುವ ವಿಚಾರದಲ್ಲಿ ಹೈಕೋರ್ಟಿನಲ್ಲಿ ಪ್ರಬಲ ವಾದ ಮಂಡನೆಯಾಗಿದೆ. ಹಿಜಾಬ್ ಪರವಾಗಿ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದು ಸರಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಅವರನ್ನೇ ತಬ್ಬಿಬ್ಬು ಮಾಡಿದ್ದಾರೆ. ಇಂದು ಎರಡು ಅರ್ಜಿಗಳ ವಕೀಲರು ವಾದ ಮಂಡಿಸಿದ್ದಾರೆ. ಈ ನಡುವೆ, ಸರಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಪ್ರಭುಲಿಂಗ ನಾವದಗಿ ಸರಕಾರ ಕೈಗೊಂಡ ನಿರ್ಧಾರವನ್ನು ಸಮರ್ಥಿಸಿದ್ದಾರೆ.
ಸಮಾಜದಲ್ಲಿ ಎಲ್ಲ ವರ್ಗದ ಜನ ಇದ್ದಾರೆ. ಮಾರುಕಟ್ಟೆಗೆ ಹಿಜಾಬ್ ಧರಿಸಿ ಹೋದಾಗ ಆಗದ ಗಲಾಟೆ ಶಾಲೆಯಲ್ಲಿ ಏಕಾಗುತ್ತಿದೆ. ಶಾಲೆಗಳ ಆವರಣಕ್ಕೆ ಹೋದಾಗ ಇಲ್ಲದ ಜಟಾಪಟಿ ಶಿಕ್ಷಣದ ಸಾಲಿನ ನಡುವಲ್ಲಿ ಏಕೆ ಎದ್ದಿದೆ. ಆಯಾ ಧರ್ಮಗಳ ಜನರಿಗೆ ಅವರದ್ದೇ ಆದ ನಂಬಿಕೆ, ಆಚರಣೆಗಳನ್ನು ಪಾಲಿಸಲು ಅವಕಾಶ ಇದೆಯಲ್ಲ.. ಸಿಖ್ಖರು ತಲೆಗೆ ಮುಂಡಾಸು ಕಟ್ಟಿ ಬರುತ್ತಾರೆ. ಇನ್ನೊಬ್ಬರು ನಾಮ ಹಾಕಿಕೊಂಡು ಬರುತ್ತಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಇದೆಲ್ಲ ಯಾಕೆ ಬೇಕು. ಅದರಲ್ಲೂ ಪಿಯು ಕಾಲೇಜಿನಲ್ಲಿ ಮಾತ್ರ ಇದನ್ನು ನಿರ್ಬಂಧಿಸಿದ ಮಾತ್ರಕ್ಕೆ ಸಮಾನತೆ ಬರುತ್ತದೆಯೇ.. ಪದವಿ, ಇಂಜಿನಿಯರಿಂಗ್, ಇತರ ಉನ್ನತ ಶಿಕ್ಷಣದಲ್ಲಿ ಇಲ್ಲದ ಕಡ್ಡಾಯ ನೀತಿ ಇಲ್ಲಿ ಯಾಕೆ ಎಂದು ದೇವದತ್ ಕಾಮತ್ ಸಂವಿಧಾನದ ವಿಧಿಗಳನ್ನು ಉಲ್ಲೇಖಿಸಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಕೇರಳ ಹೈಕೋರ್ಟ್, ಮುಂಬೈ ಕೋರ್ಟ್ ನೀಡಿರುವ ವಿವಿಧ ತೀರ್ಪುಗಳನ್ನು ಉಲ್ಲೇಖ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಕೃಷ್ಣ ಎಸ್. ದೀಕ್ಷಿತ್, ಗುರು ಗ್ರಂಥ ಸಾಹಿಬ್ ನಲ್ಲಿ ಸಿಖ್ ಸಂಪ್ರದಾಯದ ಬಗ್ಗೆ ಉಲ್ಲೇಖಿಸಲಾಗಿದೆ. ಕೇಶ್ ಕಂಗನ್, ಖಡಾ, ಕಚ್ಚಾ, ಕೃಪಾನ್ ಕಡ್ಡಾಯ ಇದೆ. ಇದು ಸಿಖ್ ಧರ್ಮೀಯರ ಧಾರ್ಮಿಕ ಆಚರಣೆ. ಪಂಚಕಗಳನ್ನು ಸಿಖ್ಖರ ಪಾಲಿಗೆ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ಹಿಜಾಬ್ ಕೂಡ ಇಸ್ಲಾಂನಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂದು ವಕೀಲರಲ್ಲಿ ಪ್ರಶ್ನೆ ಮಾಡಿದ್ದಾರೆ.
ಉಡುಪಿ ಸರಕಾರಿ ಕಾಲೇಜಿನ ರೇಶಿಮಾ ಪರವಾಗಿ ಹಾಜರಾಗಿದ್ದ ದೇವದತ್ ಕಾಮತ್ ವಿವಿಧ ತೀರ್ಪು ಆಧರಿಸಿ ಮಂಡಿಸಿದ ವಾದ ಒಂದು ಹಂತದಲ್ಲಿ ಎಜಿ ಪ್ರಭುಲಿಂಗ ನಾವದಗಿಯವರ ನಡುವೆ ವಾಗ್ವಾದ, ಪ್ರಬಲ ಆಕ್ಷೇಪಕ್ಕೂ ಕಾರಣವಾಯಿತು. ಸಾರ್ವಜನಿಕ ಸುವ್ಯವಸ್ಥೆ ದೃಷ್ಟಿಯಿಂದ ಧಾರ್ಮಿಕ ಆಚರಣೆಗೆ ಸರ್ಕಾರದ ನೀತಿ ಅಡ್ಡಿಯಾಗಿದೆ. ಹಿಜಾಬ್ ಧರಿಸೋದ್ರಿಂದ ಯಾರಿಗೂ ತೊಂದರೆಯಾಗುತ್ತಿಲ್ಲ. ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದ ದೇವದತ್ ಕಾಮತ್, ನಾನು ಜಾತಿಯಲ್ಲಿ ಬ್ರಾಹ್ಮಣ. ನನ್ನ ಮಗ ಹಣೆಗೆ ನಾಮ ಹಾಕಿಕೊಂಡು ಸ್ಕೂಲ್ ಗೆ ಹೋಗ್ತಾನೆ. ಅದು ನಮ್ಮ ಧಾರ್ಮಿಕ ನಂಬಿಕೆ. ಅದೇ ರೀತಿ ಹಿಜಾಬ್ ಕೂಡ ಮುಸ್ಲಿಮರ ಧಾರ್ಮಿಕ ಆಚರಣೆ, ನಂಬಿಕೆ. ಅದರಲ್ಲಿ ತಪ್ಪು ಏನಿದೆ. ಈವರೆಗೂ ಇದ್ದ ಹಿಜಾಬ್ ಈಗ ದಿಢೀರ್ ತಪ್ಪಾಗಿ ಕಂಡಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಅಷ್ಟೇ ಹಾಸ್ಯ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು, ಹಂದಿ ಮರಿಯೊಂದಿಗೆ ಮಾರುಕಟ್ಟೆಗೆ ಹೋದರೆ ಸಮಸ್ಯೆಯಾಗಲ್ಲ. ಕೆಲವರು ನಗುತ್ತಾರೆ ಅಷ್ಟೇ. ಆದರೆ ದೇವಾಲಯ, ಚರ್ಚ್ , ಮಸೀದಿಗೆ ಹೋದ್ರೆ ಸಮಸ್ಯೆಯಾಗುತ್ತದೆ ಎಂದು ಕುಟುಕಿದರು.
ಅರ್ಜಿದಾರರು ಸ್ಕಾರ್ಪ್ ಧರಿಸಿ ಕಾಲೇಜುಗೆ ಹೋಗ್ತಿದ್ದಾರೆ. ಮೌನವಾಗಿಯೇ ತಮ್ಮ ನಂಬಿಕೆಯನ್ನ ಆಚರಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಎಂಬ ನೆಪ ನೀಡೋದು ಸರಿಯಲ್ಲ. ಇದು ಕುದುರೆಗೆ ಟಾಂಗ ಕಟ್ಟಿದಾಗೆ ಆಗುತ್ತಿದೆ. ಈ ರೀತಿಯ ನೆಪದಲ್ಲಿ ನಮ್ಮ ಧಾರ್ಮಿಕ ಹಕ್ಕುಗಳನ್ನ ಹತ್ತಿಕ್ಕಬಾರದು. ಕಾನೂನು ಸುವ್ಯವಸ್ಥೆ ಹೆಸ್ರಲ್ಲಿ ಧಾರ್ಮಿಕ ಆಚರಣೆಗೆ ನಿರ್ಬಂಧ ಹೇರುವುದು ಸರಿಯಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದ್ರೆ ನಿರ್ಬಂಧಿಸಬಹುದು. ಆದ್ರೆ ಹಿಜಾಬ್ ಧರಿಸೋದ್ರಿಂದ ಯಾವ ರೀತಿ ಕಾನೂನು ಸುವ್ಯವಸ್ಥೆ ಗೆ ಧಕ್ಕೆಯಾಗಿದೆ. ನಮ್ಮ ದೇಶ ಜಾತ್ಯಾತೀತ ರಾಷ್ಟ್ರ. ವೈವಿಧ್ಯತೆ ಯಿಂದ ಕೂಡಿದೆ. ಏಕಂ ಸತ್ ವಿಪ್ರ ಬಹುಧಾ ವದಂತಿ ಎಂಬ ಭಾವನೆ ಇಟ್ಟುಕೊಂಡಿದ್ದೇವೆ. ಬೇರೆ ಧರ್ಮಗಳಿಗೆ ಗೌರವ ಕೊಡೋದು ಜಾತ್ಯತೀತ ಅಲ್ಲವೇ ? ಹಿಜಾಬ್ ಧರಿಸಿ ಶಾಲೆಗೆ ಹೋದ ಮಾತ್ರಕ್ಕೆ ವೈವಿಧ್ಯತೆಗೆ ಧಕ್ಕೆಯಾಗುವುದಿಲ್ಲ ಎಂದು ದೇವದತ್ ಕಾಮತ್ ಪ್ರಬಲ ವಾದ ಮಂಡಿಸಿದ್ದಾರೆ.
ಆದರೆ ದೇವದತ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಜಿ ಪ್ರಭುಲಿಂಗ ನಾವದಗಿ, ಈ ವಾದವನ್ನು ದಾಖಲಿಸದಂತೆ ಮನವಿ ಮಾಡಿದ್ದಾರೆ. ಆದರೆ ಎಜಿ ಮನವಿ ಪರಿಗಣಿಸಲು ಕೋರ್ಟ್ ನಿರಾಕರಿಸಿದ್ದು ಅರ್ಜಿದಾರರರು ಹೇಳಿದ್ದನ್ನು ದಾಖಲಿಸುತ್ತೇವೆ. ನಿಮ್ಮ ಆಕ್ಷೇಪಣೆಯನ್ನು ದಪ್ಪ ಅಕ್ಷರಗಳಲ್ಲಿ ದಾಖಲಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದೆ. ಅಲ್ಲದೆ, ಎರಡು ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ನಾಳೆಗೆ (ಫೆ.9) ಮುಂದೂಡಿದೆ.
Even as the High Court started hearing the matter, the Hijab row turned violent in Karnataka on Tuesday as incidents of stone pelting and lathi-charge were reported in the state at Pre-University Colleges. According to media reports, many students were injured in the stone pelting. The Karnataka Police also resorted to lathi charge as incidents of stone pelting were reported during the students’ protest. The hijab row began last month when six Muslim girl students of the state-run PU College in Karnataka’s Udupi alleged on January 1, 2022, that they were denied entry into the classroom for wearing hijab. The protest subsequently spread to other colleges in Udupi and other districts as some students continued to wear hijabs and were countered by others wearing saffron shawls.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm