ಪ್ರಮೋದ್ ಮುತಾಲಿಕ್ ಗೆ ಕೊರೊನಾ ದೃಢ ; ಬೆಂಗಳೂರು ಆಸ್ಪತ್ರೆಗೆ ದಾಖಲು 

18-09-20 08:05 pm       Bangalore Correspondent   ಕರ್ನಾಟಕ

ಡ್ರಗ್ ಪ್ರಕರಣದಲ್ಲಿ ನಿರಂತರ ಆರ್ಭಟಿಸುತ್ತಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಈಗ ಕೊರೊನಾ ತಗಲಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬೆಂಗಳೂರು, ಸೆಪ್ಟಂಬರ್ 18: ಕೊರೊನಾ ಸೋಂಕು ಈಗ ಜನಸಾಮಾನ್ಯರಿಂದ ಹಿಡಿದು ಬಡವ ಬಲ್ಲಿದರೆಲ್ಲರನ್ನೂ ಕಾಡುತ್ತಿದ್ದು ಸರ್ವಾಂತರ್ಯಾಮಿ ಎನ್ನುವಂತಾಗಿದೆ. ಡ್ರಗ್ ಪ್ರಕರಣದಲ್ಲಿ ನಿರಂತರ ಆರ್ಭಟಿಸುತ್ತಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಈಗ ಕೊರೊನಾ ತಗಲಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಪ್ರಮೋದ್ ಮುತಾಲಿಕ್ ಅವರನ್ನು ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಸದ್ಯ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆಯಷ್ಟೇ ರಾಜ್ಯಸಭೆ ಸದಸ್ಯ ಬಿಜೆಪಿಯ ಅಶೋಕ್ ಗಸ್ತಿ ಕೊರೊನಾದಿಂದ ಮೃತಪಟ್ಟಿದ್ದರು. ರಾಜ್ಯದಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟ ಮೊದಲ ಜನಪ್ರತಿನಿಧಿ ಅಶೋಕ್ ಗಸ್ತಿ. ಇದೀಗ ಮುಂಚೂಣಿ ಹಿಂದು ಸಂಘಟನೆಯ ವರಿಷ್ಠ ಮುತಾಲಿಕ್ ಅವರನ್ನು ಸೋಂಕು ಸುತ್ತಿಕೊಂಡಿದೆ. ಸೋಂಕು ಲೆಕ್ಕಿಸದೆ ರಾಜ್ಯದಾದ್ಯಂತ ಪ್ರವಾಸ ಮಾಡಿದ್ದೇ ಅವರಿಗೆ ಮುಳುವಾಗಿದೆ.