ಬ್ರೇಕಿಂಗ್ ನ್ಯೂಸ್
19-09-20 12:46 pm Headline Karnataka News Network ಕರ್ನಾಟಕ
ಬೆಂಗಳೂರು, ಸೆಪ್ಟಂಬರ್ 19: ಡ್ರಗ್ ನಂಟಿನಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಮುಸ್ಲಿಂ ಆಗಿ ಮತಾಂತರಗೊಂಡಿದ್ದರೇ ಅನ್ನುವ ಅನುಮಾನ ಕೇಳಿಬಂದಿದೆ.
ಎರಡು ವರ್ಷಗಳ ಹಿಂದೆ ಸಂಜನಾ ಮುಸ್ಲಿಂ ಮತಕ್ಕೆ ಮತಾಂತರಗೊಂಡಿದ್ದರು ಅನ್ನೋ ಮಾತು ಕೇಳಿಬರುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ಬೆಂಗಳೂರಿನ ದಾರುಲ್ ಉಲೂಮ್ ಶಾ ವಲಿಯುಲ್ಲಾ ಎನ್ನುವ ಮದ್ರಸ ಸಂಜನಾ ಮತಾಂತರ ಆಗಿರುವ ಬಗ್ಗೆ 2018ರಲ್ಲಿ ತನ್ನ ಲೆಟರ್ ಹೆಡ್ ನಲ್ಲಿ ಬಿಡುಗಡೆ ಮಾಡಿದ್ದ ನೋಟೀಸ್ ಬಹಿರಂಗವಾಗಿದೆ.
ಮಿಸ್ ಮನೋಹರ್ ಅರ್ಚನಾ ಗಲ್ರಾನಿ, ನಂ. 130, 5ನೇ ಕ್ರಾಸ್, ವರ್ಮಾಸ್ ನ್ಯೂ ಲೇಔಟ್, ಸಿಂಫೊನಿ ಅಪಾರ್ಟ್ಮೆಂಟ್, ಹೆಬ್ಬಾಳ, ಕೆಂಪಾಪುರ ದಾಸರಹಳ್ಳಿ ರೋಡ್, ಭುವನೇಶ್ವರಿ ನಗರ, ಬೆಂಗಳೂರು ಈ ವಿಳಾಸ ಹೊಂದಿರುವ ಸಂಜನಾ 2018 ಅಕ್ಟೋಬರ್ 9ರಂದು ಮುಸ್ಲಿಂ ಆಗಿ ಮತಾಂತರ ಆಗಿದ್ದಾರೆ. ಅರ್ಚನಾ ಗಲ್ರಾನಿ(ಸಂಜನಾ ಒರಿಜಿನಲ್ ಹೆಸರು) ಇನ್ನು ಮಿಸ್ ಮಾಹಿರಾ ಎಂಬುದಾಗಿ ಹೆಸರು ಬದಲಿಸಿಕೊಂಡಿದ್ದಾರೆ. ಆಕೆಯ ಸ್ವ ಇಚ್ಛೆಯಿಂದ ಸಂಜನಾ ಮತಾಂತರ ಆಗಿರುವುದಾಗಿ ದಾರುಲ್ ಉಲೂಮ್ ಶಾ ವಲೀಯುಲ್ಲಾ ಮದ್ರಸದವರು, ಸಾರ್ವಜನಿಕರ ಗಮನಕ್ಕೆ ಎಂದು ನೋಟಿಸ್ ನೀಡಿದ್ದರು. ಈ ನೋಟಿಸ್ ಈಗ ಜಾಲತಾಣದಲ್ಲಿ ಓಡಾಡುತ್ತಿದ್ದು ಸಂಜನಾ ಮುಸ್ಲಿಂ ಆಗಿ ಮತಾಂತರ ಆಗಿದ್ದರೇ ಎನ್ನುವ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.

ಸಂಜನಾಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸುತ್ತಿದ್ದಂತೆ ಆಕೆ ಬೆಂಗಳೂರಿನ ಅಝೀಜ್ ಪಾಷಾ ಎಂಬ ವೈದ್ಯನನ್ನು ಮದುವೆಯಾಗಿದ್ದಾಳೆ ಎಂಬ ಮಾಹಿತಿ ಹೊರಬಂದಿತ್ತು. ಮದುವೆಯ ಫೋಟೊಗಳು ಕೂಡ ಜಾಲತಾಣದಲ್ಲಿ ಹರಿದಾಡಿದ್ದವು. ಎರಡು ವರ್ಷಗಳ ಹಿಂದೆ ಆತನ ಜೊತೆ ಸಂಜನಾ ಮದುವೆಯಾಗಿತ್ತು ಎಂದು ಎನ್ನಲಾಗಿತ್ತು. ಈಗ ಆಕೆ ಮುಸ್ಲಿಂ ಆಗಿ ಮತಾಂತರ ಆಗಿದ್ದಾಳೆ ಎನ್ನೋದು ಖಚಿತವಾಗುತ್ತಿದೆ.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm