ಬ್ರೇಕಿಂಗ್ ನ್ಯೂಸ್
14-03-22 08:41 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.14: ದೇಶಾದ್ಯಂತ ಕುತೂಹಲ ಕೆರಳಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ವಿವಾದದ ಬಗ್ಗೆ ಕರ್ನಾಟಕ ಹೈಕೋರ್ಟ್ ಮಾ.15ರಂದು ತೀರ್ಪು ನೀಡಲಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠವು ಮಂಗಳವಾರ ಬೆಳಗ್ಗೆ 11 ಗಂಟೆಗೆ ತೀರ್ಪು ಪ್ರಕಟಿಸಲಿದ್ದು ಭಾರೀ ಕುತೂಹಲ ಮೂಡಿಸಿದೆ.
ಕಳೆದ ಜನವರಿ ಆರಂಭದಲ್ಲಿ ಉಡುಪಿಯ ಸರಕಾರಿ ಕಾಲೇಜಿನಲ್ಲಿ ಹೊತ್ತಿಕೊಂಡಿದ್ದ ಹಿಜಾಬ್ ವಿವಾದ ಬಳಿಕ ಇಡೀ ರಾಜ್ಯಕ್ಕೆ ಹರಡಿದ್ದಲ್ಲದೆ, ಉಡುಪಿಯ ಆರು ಮಂದಿ ವಿದ್ಯಾರ್ಥಿನಿಯರು ಹೈಕೋರ್ಟಿಗೆ ಅರ್ಜಿ ಸಲ್ಲಿಸುವುದರೊಂದಿಗೆ ಸಂಘರ್ಷ ಕೋರ್ಟ್ ಅಂಗಳಕ್ಕೆ ತಲುಪಿತ್ತು. ಧಾರ್ಮಿಕ ಹಕ್ಕಿನಡಿ ಹಿಜಾಬ್ ಮತ್ತು ಸ್ಕಾರ್ಫ್ ಧರಿಸಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿನಿಯರು ಕೇಳಿಕೊಂಡಿದ್ದರು. ಇದಾಗುತ್ತಿದ್ದಂತೆ, ಪರ-ವಿರೋಧ ವಿಚಾರದಲ್ಲಿ ಹೈಕೋರ್ಟಿನಲ್ಲಿ ಹತ್ತಕ್ಕೂ ಹೆಚ್ಚು ಅರ್ಜಿಗಳು ಹೈಕೋರ್ಟಿನಲ್ಲಿ ದಾಖಲಾಗಿದ್ದವು.
ಆನಂತರ ಹಿಜಾಬ್ ಮತ್ತು ಕೇಸರಿ ವಿಚಾರದಲ್ಲಿ ಹಿಂದು- ಮುಸ್ಲಿಮ್ ವೈಷಮ್ಯ ಹೊತ್ತಿಕೊಂಡು ಪ್ರಕರಣ ಬೇರೆಯದೇ ರೂಪ ಪಡೆದಿತ್ತು. ಶಿವಮೊಗ್ಗ ಮತ್ತು ಬಾಗಲಕೋಟೆಯಲ್ಲಿ ಕಾಲೇಜು ಪರಿಸರದಲ್ಲಿ ಕಲ್ಲು ತೂರಾಟ ನಡೆದು ಉದ್ವಿಗ್ನ ಸ್ಥಿತಿ ಎದುರಾಗಿತ್ತು. ಉಡುಪಿ ಮತ್ತು ಕುಂದಾಪುರದಲ್ಲಿಯೂ ಎರಡು ಗುಂಪುಗಳ ನಡುವೆ ವಾಗ್ಯುದ್ಧ ನಡೆದು ಕೊನೆಗೆ ಕಾಲೇಜುಗಳನ್ನು ಅನಿರ್ದಿಷ್ಟ ಅವಧಿಗೆ ರಜೆ ಕೊಟ್ಟು ಬಂದ್ ಮಾಡಲಾಗಿತ್ತು. ಇದರ ನಡುವೆಯೇ ಶಿವಮೊಗ್ಗದಲ್ಲಿ ಹಿಜಾಬ್ ಪರವಾಗಿ ಪೋಸ್ಟ್ ಮತ್ತು ಕೇಸರಿ ಶಾಲು ಹಂಚಿದ್ದ ಆರೋಪ ಎದುರಿಸುತ್ತಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಎಂಬಾತನನ್ನು ಕೊಲೆ ಮಾಡಲಾಗಿತ್ತು.
ಒಂದೆಡೆ ರಾಜ್ಯಾದ್ಯಂತ ಹಿಜಾಬ್ ಕಿಚ್ಚು, ಮತ್ತೊಂದೆಡೆ ಹೈಕೋರ್ಟಿನಲ್ಲಿ ತೀವ್ರ ಪರ –ವಿರೋಧ ಚರ್ಚೆ ನಡೆದು 13 ದಿನಗಳ ವಿಚಾರಣೆ ಬಳಿಕ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಹತ್ತು ಮುಖ್ಯ ಅರ್ಜಿಗಳು, ಆನಂತರ ದಾಖಲಾಗಿದ್ದ 25ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿತ್ತು. ರಾಜ್ಯ ಸರಕಾರ, ಕಾಲೇಜು ಅಭಿವೃದ್ಧಿ ಸಮಿತಿ, ಶಿಕ್ಷಕರ ಸಂಘದ ಪರವಾಗಿ ಪ್ರತ್ಯೇಕ ಅರ್ಜಿಗಳು ದಾಖಲಾಗಿದ್ದವು. ಈ ಬಗ್ಗೆ ಹೈಕೋರ್ಟಿನಲ್ಲಿ 25ಕ್ಕೂ ಹೆಚ್ಚು ಖ್ಯಾತ ವಕೀಲರು ಹಿಜಾಬ್ ಪರವಾಗಿ ಮತ್ತು ವಿರೋಧವಾಗಿ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರು.
ಈ ನಡುವೆ, ಮೊದಲಿಗೆ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿವಾದ ವಿಚಾರಣೆಗೆ ಬಂದಿತ್ತು. ಸಾಂವಿಧಾನಿಕ ಅಂಶಗಳು ಮತ್ತು ಹಿಜಾಬ್ ವಿವಾದ ಜಟಿಲವಾಗಿದ್ದರಿಂದ ಪ್ರಕರಣವನ್ನು ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರ ಪೀಠಕ್ಕೆ ರವಾನಿಸಿ, ಸೂಕ್ತ ಪೀಠ ರಚಿಸುವಂತೆ ಕೇಳಿಕೊಂಡಿದ್ದರು. ಆನಂತರ ಫೆ.10ರಂದು ಮುಖ್ಯ ನ್ಯಾಯಾಧೀಶರು ತ್ರಿಸದಸ್ಯರನ್ನು ಒಳಗೊಂಡ ಸಾಂವಿಧಾನಿಕ ಪೀಠ ರಚಿಸಿದ್ದರು. ಮುಖ್ಯ ನ್ಯಾಯಾಧೀಶ ರಿತುರಾಜ್ ಅವಸ್ಥಿ, ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಖೈಬುನ್ನೀಸಾ ಅವರಿದ್ದ ಪೀಠವು ನಿರಂತರ 13 ದಿನಗಳ ಕಾಲ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಇದರ ನಡುವೆ, ಮಧ್ಯಂತರ ತೀರ್ಪು ನೀಡುವಂತೆ ಅರ್ಜಿದಾರರ ಪರ ವಕೀಲರು ಕೇಳಿಕೊಂಡಿದ್ದರಿಂದ ಯಾವುದೇ ಧಾರ್ಮಿಕ ಗುರುತುಗಳನ್ನು ಸೂಚಿಸುವಂತಹ ಉಡುಪುಗಳನ್ನು ಅಂತಿಮ ತೀರ್ಪು ಬರುವ ವರೆಗೆ ಧರಿಸುವಂತಿಲ್ಲ ಎಂದು ಸಮವಸ್ತ್ರ ಕಡ್ಡಾಯ ಇದ್ದ ಕಾಲೇಜಿನ ಆಡಳಿತ ಸಮಿತಿಗಳಿಗೆ ಆದೇಶ ನೀಡಲಾಗಿತ್ತು.
ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಕರಾವಳಿಯ ಹಲವಾರು ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಕಟ್ಟುಪಾಡಿನ ಕಾರಣ ಮುಂದೊಡ್ಡಿ ಕಾಲೇಜಿಗೆ ಬರದೆ ದೂರ ಉಳಿದಿದ್ದಾರೆ. ಈ ವಿಚಾರದಲ್ಲಿ ಕೆಲವು ಕಡೆ ಕಾಲೇಜು ಸಿಬಂದಿ ಮತ್ತು ವಿದ್ಯಾರ್ಥಿಗಳ ನಡುವೆ ಭಾರೀ ಜಟಾಪಟಿಯೂ ನಡೆದಿತ್ತು.
ತ್ರಿದಸ್ಯ ಪೀಠದ ತೀರ್ಪು ಹೇಗಿರುತ್ತದೆ ?
ಸಾಮಾನ್ಯವಾಗಿ ಹೈಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ಮೂವರು ನ್ಯಾಯಾಧೀಶರು ಪ್ರತ್ಯೇಕ ತೀರ್ಪು ನೀಡುತ್ತಾರೆ. ಅದರಲ್ಲಿ ಇಬ್ಬರ ತೀರ್ಪು ಒಂದೇ ರೀತಿಯಾಗಿದ್ದರೆ, ಅದನ್ನು ಮುಖ್ಯ ನ್ಯಾಯಾಧೀಶರು ಅಂತಿಮ ತೀರ್ಪು ಎಂದು ಘೋಷಣೆ ಮಾಡುತ್ತಾರೆ. ಆದರೆ, ಹೆಚ್ಚು ಗೊಂದಲ ಇಲ್ಲದೇ ಇದ್ದಲ್ಲಿ ಮೂವರು ನ್ಯಾಯಾಧೀಶರು ಸೇರಿಕೊಂಡು ಒಂದೇ ತೀರ್ಪನ್ನು ನೀಡುವ ಸಾಧ್ಯತೆಯೂ ಇರುತ್ತದೆ. ಹಿಜಾಬ್ ವಿಚಾರದಲ್ಲಿ ಭಾರೀ ಸಂಘರ್ಷ, ವಾದ-ವಿವಾದ ಆಗಿದ್ದರಿಂದ ಮತ್ತು ಸಂವಿಧಾನದ ಅಂಶಗಳಡಿ ಪ್ರಶ್ನೆ ಕೇಳಿಬಂದಿದ್ದರಿಂದ ಧಾರ್ಮಿಕ ನಂಬಿಕೆ, ಸಂವಿಧಾನ ಎರಡೂ ವಿಚಾರಗಳನ್ನು ಆಧರಿಸಿ ತೀರ್ಪು ನೀಡಬೇಕಾಗುತ್ತದೆ. ಹೈಕೋರ್ಟ್ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ಬಗ್ಗೆ ಮೇಲ್ಮನವಿ ಹೋಗುವುದಿದ್ದರೆ, ಸುಪ್ರೀಂ ಕೋರ್ಟಿನಲ್ಲಿ ಐದು ಅಥವಾ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿಯೇ ಪ್ರಶ್ನೆ ಮಾಡಬೇಕಾಗುತ್ತದೆ.
The Karnataka High Court is set to pronounce judgement in the hijab row case at 10:30 am tomorrow. The High Court has reserved its judgment in the hijab case on February 25 after 11 days of back-to-back hearings. The Karnataka High Court had asked the counsels in the Hijab case to wind up their arguments by February 25. The Chief Justice of the High Court Ritu Raj Awasthi, who is part of the three-judge bench, also asked the parties to give their written submissions within two to three days.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm