ಬ್ರೇಕಿಂಗ್ ನ್ಯೂಸ್
25-03-22 05:58 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.25: ಹಿಜಾಬ್ ಸಂಘರ್ಷ, ಹಿಂದು ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿಷೇಧದ ಬಳಿಕ ಮತ್ತೊಂದು ವಿವಾದಾಸ್ಪದ ನಡೆಗೆ ರಾಜ್ಯದ ಬಿಜೆಪಿ ಸರಕಾರ ಮುಂದಾಗಿದೆ. ಶಾಲೆಗಳಲ್ಲಿ ಕಲಿಸಲಾಗುವ ಇತಿಹಾಸ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದು, ಟಿಪ್ಪು ಸುಲ್ತಾನ್ ವೈಭವೀಕರಣ ಸೇರಿದಂತೆ ಚರಿತ್ರೆ ಪುಸ್ತಕದಲ್ಲಿರುವ ಹಿಂದು ವಿರೋಧಿ ಪಠ್ಯಗಳಿಗೆ ಕತ್ತರಿ ಹಾಕಲು ಮುಂದಾಗಿದೆ.
ಲೇಖಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ರಾಜ್ಯ ಸರಕಾರಕ್ಕೆ ಈ ಬಗ್ಗೆ ವರದಿ ನೀಡಿದ್ದು, ಅದರಲ್ಲಿನ ಅಂಶಗಳನ್ನು ಜಾರಿಗೆ ತರಲು ಸರಕಾರ ಮುಂದಡಿ ಇಟ್ಟಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರೋಹಿತ್ ಚಕ್ರತೀರ್ಥ ಬಲಪಂಥೀಯ ವಿಚಾರಧಾರೆಯುಳ್ಳ ಲೇಖಕನಾಗಿದ್ದು, ಶಾಲಾ ಪಠದಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗಿನ ಸಮಾಜ ವಿಜ್ಞಾನ ಪುಸ್ತಕದಲ್ಲಿರುವ ಕೆಲವು ಹಳೆಯ ಪಠ್ಯಗಳನ್ನು ಬದಲಿಸಿ, ಹೊಸತಾಗಿ ಪಠ್ಯಗಳನ್ನು ಸೇರಿಸಲು ಶಿಫಾರಸು ಮಾಡಿದ್ದಾರೆ. ಈ ಹಿಂದೆ 6ನೇ ತರಗತಿಯಲ್ಲಿರುವ ಪಠ್ಯದಲ್ಲಿ ವೈದಿಕ ಹಿಂದು ಧರ್ಮದ ಅವಗುಣಗಳಿಂದಾಗಿ ಇತರೇ ಧರ್ಮಗಳು ಭಾರತದಲ್ಲಿ ನೆಲೆ ಕಂಡುಕೊಳ್ಳಲು ಕಾರಣವಾಗಿತ್ತು ಅನ್ನುವ ಅಂಶ ಇದ್ದುದು ವಿವಾದಕ್ಕೆ ಕಾರಣವಾಗಿತ್ತು.
ಮೂಲಗಳ ಪ್ರಕಾರ, ಈಶಾನ್ಯ ಭಾರತವನ್ನು ಸುಮಾರು 600 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಅಹೋಮಿಗಳ ಸಾಮ್ರಾಜ್ಯ, ಉತ್ತರ ಭಾರತದ ಹಲವು ಭಾಗಗಳನ್ನು ಆಳಿದ್ದ ಕಾರ್ಕೋಟ ಸಾಮ್ರಾಜ್ಯ, ಕಾಶ್ಮೀರವನ್ನು ಆಳಿದ್ದ ರಾಜರುಗಳ ಬಗ್ಗೆ ಹೊಸತಾಗಿ ಪಠ್ಯಗಳನ್ನು ಸೇರ್ಪಡೆಗೆ ಶಿಫಾರಸು ಮಾಡಲಾಗಿದೆ. ಇದಲ್ಲದೆ, ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಮತ್ತು ದತ್ತಪೀಠದ ಕುರಿತಾಗಿ ಪಠ್ಯವನ್ನು ಸೇರಿಸಲು ಸಮಿತಿ ಶಿಫಾರಸು ಮಾಡಿದೆ. ರಾಜ್ಯದಲ್ಲಿ ಹೆಚ್ಚು ವಿವಾದಕ್ಕೆ ಈಡಾಗಿರುವ ದತ್ತಪೀಠದ ಕುರಿತ ಪಠ್ಯ ಕಾಂಗ್ರೆಸ್ ಮತ್ತು ಎಡಪಂಥೀಯರ ವಿರೋಧಕ್ಕೆ ಕಾರಣವಾಗಲಿದೆ. ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್ ಬಗ್ಗೆ ಚರಿತ್ರೆಯ ಭಾಗವಾಗಿಯಷ್ಟೇ ಪಠ್ಯದಲ್ಲಿ ಇರಲಿದೆ. ಆತನ ವೈಭವೀಕರಿಸಿದ್ದ ವಿಚಾರವನ್ನು ಪಠ್ಯದಿಂದ ತೆಗೆದು ಹಾಕುವ ಸಾಧ್ಯತೆಯಿದೆ.
ಪಠ್ಯದಲ್ಲಿ ಹಿಂದು ವಿರೋಧಿ ವಿಚಾರಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪಠ್ಯಪುಸ್ತಕದ ಪರಿಶೀಲನೆಗಾಗಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. 6ರಿಂದ 10ನೇ ತರಗತಿ ವರೆಗಿನ ಇತಿಹಾಸ ಪಠ್ಯ ಪುಸ್ತಕದ ಬಗ್ಗೆ ಅಧ್ಯಯನ ನಡೆಸಿರುವ ಸಮಿತಿ ಈಗಾಗಲೇ ವರದಿ ನೀಡಿದ್ದು, ಅದನ್ನು ರಾಜ್ಯ ಸರಕಾರ ಅಂಗೀಕರಿಸಿದೆ. ಸಮಿತಿ ನೀಡಿರುವ ಅಂಶಗಳನ್ನು ಮುಂದಿನ 2022-23ನೇ ಸಾಲಿನಲ್ಲಿ ಪಠ್ಯದಲ್ಲಿ ಸೇರಿಸಿಕೊಳ್ಳಲು ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ 6ನೇ ತರಗತಿಯ ಪಠ್ಯಪುಸ್ತಕದಲ್ಲಿ ವೈದಿಕ ಧರ್ಮದ ಕೊರತೆಗಳು, ಅದರಿಂದಾಗಿ ಭಾರತದಲ್ಲಿ ಇತರ ಧರ್ಮಗಳ ಬೆಳವಣಿಗೆ, ಯಜ್ಞಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಹಾರ ಧಾನ್ಯಗಳನ್ನು ಬಳಸಿದ್ದರಿಂದ ಜನರಿಗೆ ಆಹಾರ ಕೊರತೆಯಾಗಿತ್ತು ಇತ್ಯಾದಿ ವಿಚಾರಗಳಿದ್ದವು. ಇದಕ್ಕೆ ಬಿಜೆಪಿ ಮತ್ತು ಬಲಪಂಥೀಯರಿಂದ ವಿರೋಧವೂ ವ್ಯಕ್ತವಾಗಿತ್ತು.
Yet another controversial move by the Karnataka government after the hijab row and the ban on Muslim traders near Hindu temples, the state plans to revise school textbooks and delete some 'sensitive' chapters, including the one on Tipu Sultan which shows him in a positive light.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm