ಬ್ರೇಕಿಂಗ್ ನ್ಯೂಸ್
12-04-22 12:24 pm HK Desk news ಕರ್ನಾಟಕ
ವಿಜಯಪುರ, ಎ.12: ಶಾಲೆಯಲ್ಲಿ ನೈತಿಕ ಶಿಕ್ಷಣದ ಕ್ಲಾಸ್ ಮಾಡಬೇಕು ಅನ್ನೋ ಚಿಂತನೆಯಿದೆ. ಹಿಂದೆ ನೈತಿಕ ಶಿಕ್ಷಣದ ಕ್ಲಾಸ್ ಇತ್ತು. ಒಳ್ಳೊಳ್ಳೆ ಕಥೆ, ಮಹಾಭಾರತ, ರಾಮಾಯಣ, ಸತ್ಯ ಹರಿಶ್ಚಂದ್ರ, ಗಾಂಧೀಜಿ ಕಥೆ ಹೇಳಲಾಗುತ್ತಿತ್ತು. ನೈತಿಕವಾಗಿ ಮಕ್ಕಳನ್ನು ತಯಾರಿ ಮಾಡೋದು ನಡೀತ್ತಿತ್ತು. ಅದು ಇತ್ತಿಚಿನ ದಿನಗಳಲ್ಲಿ ಶಾಲೆಯಲ್ಲಿ ಬಿಟ್ಟು ಹೋಗಿದೆ. ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ತರಬೇಕು ಅಂತ ಜನರ ಆಶಯ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ನಾವು ಇವತ್ತು ಎಲ್ಲರೂ ಒದ್ದಾಡ್ತಿರೋದು ದ್ವಂದ್ವಗಳಲ್ಲಿ. ಮನಸ್ಸು ಸರಿಯಿಲ್ಲದೆ ಸೂಸೈಡ್ ಆಗ್ತಿರೋ ದ್ವಂದ್ವದಲ್ಲಿದ್ದೇವೆ. ಮನುಷ್ಯನಿಗೆ ಜೀವನದ ಕ್ಲಾರಿಟಿ ಕೊಟ್ಟು ಬದುಕಿಗೆ ಅರ್ಥ ಕೊಡಲಿಕ್ಕೆ ಭಗವದ್ಗೀತೆ ಯಾಕೆ ಶಿಕ್ಷಣದಲ್ಲಿ ಬರಬಾರದು. ಶಾಲೆಯಲ್ಲಿ ಹೇಗೆ ಭಗವದ್ಗೀತೆ ತರಬೇಕು ಅನ್ನೋದು ಇನ್ನೂ ನಿಶ್ಚಯ ಮಾಡಿಲ್ಲ. ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಅಂತ ತಜ್ಞರು ನಿಶ್ಚಯ ಮಾಡ್ತಾರೆ. ಈ ದೇಶದ ಸ್ವಾತಂತ್ರ್ಯ ಹೋರಾಟಗಾರರು ಭಗವದ್ಗೀತೆ ನಮಗೆ ಹೋರಾಟ ಶಕ್ತಿ ಕೊಡುತ್ತಿದೆ ಎನ್ನುತ್ತಿದ್ದರು. ಭಗವದ್ಗೀತೆ ನನಗೆ ಶಕ್ತಿ ತುಂಬಿದೆ ಅಂತ ಅಬ್ದುಲ್ ಕಲಾಂ ಅವರೂ ಹೇಳಿದ್ದಾರೆ. ಗಾಂಧೀಜಿಯಂತೂ 40 ಪುಟದ ಸಾಮಾನ್ಯ ಭಗವದ್ಗೀತೆ ಓದಿ ಮಹಾತ್ಮರಾಗಿದ್ದಾರೆ.
ಇಷ್ಟೆಲ್ಲಾ ಜನ ಭಗವದ್ಗೀತೆ ಬಗ್ಗೆ ಹೇಳಿದಾಗ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಬರುತ್ತೆ ಎಂದು ಕಾಂಗ್ರೆಸ್ ನವರು ಗುಲ್ಲೆಬ್ಬಿಸುತ್ತಿರುವುದು ಯಾಕೆ. ಪಠ್ಯದಲ್ಲಿ ಭಗವದ್ಗೀತೆ ಒಂದೇ ಇರಲ್ಲ. ಭಗವದ್ಗೀತೆ ಧಾರ್ಮಿಕ ವಿಚಾರವಂತೂ ಅಲ್ಲ. ಅಲ್ಲಿ ಯಾವುದೇ ದೇವರು, ಪೂಜೆ ಬಗ್ಗೆ ಹೇಳಲ್ಲ. ಭಗವದ್ಗೀತೆ ಸಾರವನ್ನು ಎಲ್ಲರ ಮನೆಯೆಲ್ಲಿ ಹಾಕುವಂತಿದೆ. ಅನೇಕ ಮುಸ್ಲಿಮ್ ಸ್ನೇಹಿತರ ಮನೆಯಲ್ಲೂ ಹಾಕಿಕೊಂಡಿದ್ದಾರೆ. ಭಗವದ್ಗೀತೆ ಜೀವನಕ್ಕೆ ಬೇಕಾದ ಆದರ್ಶವನ್ನು ಮಾತ್ರ ಹೊಂದಿದೆ ಎಂದು ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಹಿಂದೆ ಬಿಜೆಪಿ ಸರ್ಕಾರದಲ್ಲಿದ್ದ ಪರಿಷ್ಕರಣೆ ಆಗದೇ ಇದ್ದುದನ್ನು ಬರಗೂರು ರಾಮಚಂದ್ರಪ್ಪನವರು ಆನಂತರ ಬದಲಾವಣೆ ಮಾಡಿದ್ದರು. ಸರಿಯಾದ ಬದಲಾವಣೆಯನ್ನು ನಾವು ಕೂಡ ಒಪ್ಪಿಕೊಂಡಿದ್ದೇವೆ. ವಿರೋಧಕ್ಕಾಗಿ ವಿರೋಧ ಮಾಡಿಲ್ಲ, ಬರಗೂರು ರಾಮಚಂದ್ರಪ್ಪ ಮಾಡಿದ್ದು, ಕಾಂಗ್ರೆಸ್ ನವರು ಮಾಡಿದ್ದು ಅಂತ ನಾವು ರಾಜಕೀಯವಾಗಿ ಹೋಗಲಿಲ್ಲ. ಅಲ್ಲಿರುವಂತಹ ತಪ್ಪುಗಳನ್ನು ಪರಿಷ್ಕರಣೆ ಮಾಡೋಕೆ ಮತ್ತೊಂದು ಪರಿಷ್ಕರಣೆ ಸಮಿತಿ ಮಾಡಿದ್ದೇವೆ. ಟಿಪ್ಪು ಬಗ್ಗೆ ತಜ್ಞರು ಹೇಳೋದು ಏನಂದ್ರೆ ಆತನ ಬಗ್ಗೆ ಪಠ್ಯದಲ್ಲಿ ಕೊಟ್ಟಿರುವ ರೀತಿ ಸರಿಯಿಲ್ಲ. ಟಿಪ್ಪುವಿನ ಒಂದು ಮುಖವನ್ನು ತೋರಿಸಿದ್ದೀರಾ ಅಂತ. ಈ ಬಾರಿ ಟಿಪ್ಪು ಪಠ್ಯಕ್ರಮದಲ್ಲಿ ಏನೂ ಬದಲಾವಣೆ ಆಗಿಲ್ಲ. ಸ್ವಲ್ಪ ಮೋಡಿಫೈ ಮಾಡಲಾಗಿದೆ. ಟಿಪ್ಪುವನ್ನು ಸಂಪೂರ್ಣ ತೆಗೆದು ಹಾಕಿಲ್ಲ.
ಟಿಪ್ಪುವನ್ನು ಪಠ್ಯದಿಂದ ತೆಗೆಯಿರಿ ಅಂತ ಅಪ್ಪಚ್ಚು ರಂಜನ್ ಹೇಳಿದ್ದಾರೆ. ಪಠ್ಯದಲ್ಲಿ ಇಡುವುದಾದ್ರೆ ಟಿಪ್ಪುವಿನ ಎರಡೂ ಪಾರ್ಟು ಹಾಕಿ. ಹಿಂದೂಗಳ ಮೇಲೆ ಟಿಪ್ಪು ಮಾಡಿರೋ ದೌರ್ಜನ್ಯ ಬಗ್ಗೆ ಹಾಕಿ. ಕನ್ನಡ ಭಾಷೆ ತೆಗೆದು ಪರ್ಶಿಯನ್ ಭಾಷೆ ತಂದಿದ್ದು. ಕತ್ತಿ ಮೇಲೆ ಟಿಪ್ಪು ಬರೆದುಕೊಂಡಿದ್ದನ್ನು ಹಾಕಿ. ಅದು ಮಕ್ಕಳಿಗೆ ಗೊತ್ತಾಗಲಿ. ಒಂದೇ ಸೈಡ್ ನಲ್ಲಿ ಹಾಕಬೇಡಿ ಅಂದಿದ್ದಾರೆ. ಮುಂದಿನ ಪಠ್ಯ ಪರಿಷ್ಕರಣೆಯಲ್ಲಿ ಅದನ್ನು ತರುತ್ತೇವೆ ಅಂದರು ಶಿಕ್ಷಣ ಸಚಿವ.
The idea is to conduct moral education classes in schools. Earlier there was a class of moral education. good stories, mahabharata, ramayana, satya harishchandra, gandhiji were told. Morally preparing the children was going on. It has been abandoned in school in recent times. Education minister B C Nagesh said that it is the wish of the people to bring bhagavad gita in moral education.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm