ಕೇಂದ್ರ ಸಚಿವ ಸುರೇಶ್ ಅಂಗಡಿ ವಿಧಿವಶ ! 

23-09-20 09:07 pm       Headline Karnataka News Network   ಕರ್ನಾಟಕ

ಬೆಳಗಾವಿ ಸಂಸದ, ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ವಿಧಿವಶರಾಗಿದ್ದಾರೆ. 

ಬೆಂಗಳೂರು, ಸೆಪ್ಟಂಬರ್ 23: ಬೆಳಗಾವಿ ಸಂಸದ, ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ವಿಧಿವಶರಾಗಿದ್ದಾರೆ. 

ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುರೇಶ್ ಅಂಗಡಿ ಮೃತರಾಗಿರುವ ಬಗ್ಗೆ ವೈದ್ಯರು ದೃಢ ಪಡಿಸಿದ್ದಾರೆ. 

2004, 2009, 2014 ಹಾಗೂ 2019ರಲ್ಲಿ ನಾಲ್ಕು ಬಾರಿ ಸಂಸದರಾಗಿದ್ದರು. 15 ದಿನಗಳ ಹಿಂದೆ, ಹೃದಯ ಸಂಬಂಧಿ ರೋಗದಿಂದ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಪಾಸಿಟಿವ್ ಆಗಿದ್ದರು, ಆದರೆ ಅದೇ ಕಾರಣದಿಂದ ಮೃತಪಟ್ಟಿದ್ದಾರೆಯೇ ಅನ್ನೋದು ದೃಢಪಟ್ಟಿಲ್ಲ. ಇತ್ತೀಚಿನ ದಿನದ ವರೆಗೂ ಬಹಳ ಆ್ಯಕ್ಟಿವ್ ಆಗಿದ್ದ ಸುರೇಶ್ ಅಂಗಡಿ ಮೃತರಾಗಿದ್ದು ಬಿಜೆಪಿ ಪಾಳಯದಲ್ಲಿ ದಿಗ್ಭ್ರಮೆ ಮೂಡಿಸಿದೆ. 

ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ. ಬೆಳಗಾವಿ ರಾಜಲಕ್ಷ್ಮಣ ಗೌಡ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಮಾಡಿಕೊಂಡಿದ್ದಲ್ಲದೆ ತುಂಬ ಸರಳ ವ್ಯಕ್ತಿತ್ವದಿಂದ ರಾಜ್ಯ ರಾಜಕೀಯದಲ್ಲಿ ಆಕರ್ಷಣೆ ಗಳಿಸಿದ್ದರು.

ಮೂಲತಃ ಶಿಕ್ಷಣೋದ್ಯಮಿ ಆಗಿದ್ದ ಸುರೇಶ್ ಅಂಗಡಿ, ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಬೆಳಗಾವಿ ಮೂಲಕ, ಮುಂಬೈ ಕರ್ನಾಟಕ ಭಾಗದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಬೆಳೆದಿದ್ದರು. 

ಕೊರೊನಾ ಪಾಸಿಟಿವ್ ಆಗಿದ್ದರೂ, ಯಾವುದೇ ರೋಗ ಲಕ್ಷಣಗಳು ಇಲ್ಲವೆಂದು ಸ್ವತಃ ಸುರೇಶ್ ಅಂಗಡಿ ಹೇಳಿದ್ದರು. ಸೆಪ್ಟಂಬರ್ 11ರಂದು ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಸಚಿವರು ಟ್ವೀಟ್ ಮೂಲಕ ತಿಳಿಸಿದ್ದರು. ಒಂದು ವಾರದಿಂದ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗಿತ್ತು.

Join our WhatsApp group for latest news updates (2)