ಫಾರಿನ್ ಸುತ್ತಿದ್ದೇನೆ, ಶಾಸಕ, ಸಚಿವನಾಗಿದ್ದೇನೆ, ರಾಜ್ಯದಲ್ಲಿ ನಂಬರ್ ಟು ಆಗಿದ್ರೂ ದೇವಸ್ಥಾನಕ್ಕೆ ಬಿಡಲ್ಲ ; ಒಳಗೆ ಬರ್ತೀನೋ ಎಂದು ಆರತಿ ತಟ್ಟೆ ಹಿಡಿದು ಬರ್ತಾರೆ ! 

14-04-22 09:15 pm       HK Desk news   ಕರ್ನಾಟಕ

ನಾನು ಸಚಿವ, ಶಾಸಕ, ಡಿಸಿಎಂ ಆಗಿದ್ದೇನೆ. ರಾಜ್ಯದಲ್ಲಿ ನಂಬರ್ ಟು ಪೊಸಿಶನ್ ಹೋಗಿದ್ದೇನೆ. ಆದ್ರೂ ನನನ್ನು ದೇವಸ್ಥಾನದೊಳಗೆ ಸೇರಿಸಲ್ಲ. ಹೀಗೆಂದು ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯ ಬಗ್ಗೆ ಬೇಜಾರು ಮಾತಾಡಿದ್ದಾರೆ, ಮಾಜಿ ಡಿಸಿಎಂ ಜಿ.‌ಪರಮೇಶ್ವರ್.‌

ತುಮಕೂರು, ಎ.14: ನಾನು ಸಚಿವ, ಶಾಸಕ, ಡಿಸಿಎಂ ಆಗಿದ್ದೇನೆ. ರಾಜ್ಯದಲ್ಲಿ ನಂಬರ್ ಟು ಪೊಸಿಶನ್ ಹೋಗಿದ್ದೇನೆ. ಆದ್ರೂ ನನನ್ನು ದೇವಸ್ಥಾನದೊಳಗೆ ಸೇರಿಸಲ್ಲ. ಹೀಗೆಂದು ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯ ಬಗ್ಗೆ ಬೇಜಾರು ಮಾತಾಡಿದ್ದಾರೆ, ಮಾಜಿ ಡಿಸಿಎಂ ಜಿ.‌ಪರಮೇಶ್ವರ್.‌

ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಈ ಹೇಳಿಕೆ ನೀಡಿದ್ದಾರೆ.‌ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಸಂದರೂ, ಜಾತಿ ವ್ಯವಸ್ಥೆಯನ್ನು ತೊಲಗಿಸಲು ಪಣ ತೊಟ್ಟು ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ನೀಡಿದರೂ ನಮ್ಮಲ್ಲಿ ಸ್ಥಿತಿ ಬದಲಾಗಿಲ್ಲ. ನಾನು ದಲಿತ ಎಂಬ ಕಾರಣಕ್ಕೆ ದೇವಾಲಯದ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಬಹಿರಂಗವಾಗಿಯೇ ಪರಮೇಶ್ವರ್ ಬೇಸರ ಹೊರಗೆ ಹಾಕಿದ್ದಾರೆ.

ನಾನು ಹಲವು ದೇಶಗಳನ್ನು ಸುತ್ತಾಡಿ ಬಂದಿದ್ದೇನೆ, ನಾನು ಶಾಸಕನಾಗಿದ್ದೇನೆ. ಎರಡು ಬಾರಿ ಸಚಿವನಾಗಿದ್ದೇನೆ, ರಾಜ್ಯದ ಅಧಿಕಾರ ಕೇಂದ್ರದಲ್ಲಿ ನಂಬರ್ ಟು ಆಗಿದ್ದೇನೆ. ಆದರೆ ನನಗೆ ದೇವಸ್ಥಾನಕ್ಕೆ ಸೇರಿಸಲ್ಲ. ನಾನು ದೇವಸ್ಥಾನಕ್ಕೆ‌ ಹೋದ್ರೆ ಸ್ವಲ್ಪ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಎಂದು ಹೇಳಿ ಮಂಗಳಾರತಿ ತಟ್ಟೆ ತಂದು ಬಿಡ್ತಾರೆ. ನಾನು ಎಲ್ಲಿ ದೇವಾಲಯದೊಳಗೆ ಬಂದು ಬಿಡ್ತೀನೋ ಅಂತ ಹೀಗೆ ಮಾಡ್ತಾರೆ. ಇಂತಹ ಪರಿಸ್ಥಿತಿ ಈಗಲೂ ಸಮಾಜದಲ್ಲಿದೆ. ಅಂಬೇಡ್ಕರ್ ಹೆಸರಲ್ಲಿ ಜಯಂತಿ ಆಚರಣೆ ಮಾಡುತ್ತೇವೆ.‌ ಆದರೆ ಜಾತಿ ವ್ಯವಸ್ಥೆಯ ತಾರತಮ್ಯ ಬದಲಾಗದ ಹೊರತು ಅಂಬೇಡ್ಕರ್ ಹೆಸರಲ್ಲಿ ಕಾರ್ಯಕ್ರಮ ಮಾಡಿ ಪ್ರಯೋಜನ ಇಲ್ಲ ಎಂದು ಕಾರ್ಯಕ್ರಮದ ವೇದಿಕೆ ಭಾಷಣದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ‌

 A minister, a legislator, a DCM and gone to the number two position in the state, And it is not included in the temple. Former DCM G.Parameshwar said that the caste system is rooted in the society.