ಬ್ರೇಕಿಂಗ್ ನ್ಯೂಸ್
19-04-22 01:13 pm HK Desk news ಕರ್ನಾಟಕ
ಬೆಳಗಾವಿ, ಎ.19 : ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಉಡುಪಿ ಪೊಲೀಸರು ಹಿಂಡಲಗಾ ಗ್ರಾಪಂ ಅಧಿಕಾರಿಗಳು, ಅಧ್ಯಕ್ಷ, ಉಪ ಗುತ್ತಿಗೆದಾರರು, ಪಿಡಿಓ ಗುರಿಯಾಗಿಸಿ ತನಿಖೆ ನಡೆಸುತ್ತಿದ್ದು ವಿಚಾರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರ ಇಡೀ ದಿನ ಹಿಂಡಲಗಾ ಗ್ರಾಮ ಪಂಚಾಯತಿಯಲ್ಲಿ ತನಿಖೆ ಕೈಗೊಂಡು ಈಗಿನ ಪಿಡಿಒ ವಸಂತಕುಮಾರಿ ಮತ್ತು ಈ ಹಿಂದಿನ ಪಿಡಿಒ ಗಂಗಾಧರ ನಾಯಕ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಗುತ್ತಿಗೆ ಸಂಬಂಧಿತ ಪಂಚಾಯತಿ ಕಚೇರಿಯ ಕಡತಗಳನ್ನ ಪರಿಶೀಲನೆ ನಡೆಸಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ ಕೆಲಸ ಮಾಡಿದ್ದಾಗ ಹಿಂಡಲಗಾ ಪಿಡಿಓ ಆಗಿದ್ದ ಗಂಗಾಧರ ನಾಯಿಕ ಅವರಿಂದ ಮಾಹಿತಿ ಪಡೆದಿದ್ದಾರೆ. ಸಂತೋಷ್ ಪಾಟೀಲ್ ಕಾಮಗಾರಿ ಕೈಗೊಳ್ಳುವ ಮುನ್ನ ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆದಿದ್ದರಾ? ಎಲ್ಲೆಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ನಡೆದಿರುವುದು ನಿಜವೇ? ವರ್ಕ್ ಆರ್ಡರ್ ಇಲ್ಲದೇ ಅನುಮತಿ ಹೇಗೆ ಕೊಟ್ಟಿದ್ದೀರಿ..? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಇಂದು ಉಡುಪಿ ಪೊಲೀಸರು, ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಮನೆಗೆ ಭೇಟಿ ನೀಡಿದ್ದು ವಿಚಾರಣೆ ನಡೆಸಿದ್ದಾರೆ. ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ನೇತೃತ್ವದ ಪೊಲೀಸರ ತಂಡ ಹಿಂಡಲಗಾದ ಲಕ್ಷ್ಮೀ ನಗರದ ಸಮರ್ಥ ಕಾಲೋನಿಯ ನಾಗೇಶ್ ಮನ್ನೋಳಕರ್ ನಿವಾಸದಲ್ಲಿ ವಿಚಾರಣೆ ನಡೆಸುತ್ತಿದೆ. ಸಂತೋಷ ಪಾಟೀಲ್ ಮಾಡಿದ್ದಾರೆ ಎನ್ನಲಾದ 108 ಕಾಮಗಾರಿಗಳ ಬಗ್ಗೆ ಗ್ರಾಪಂ ಅಧ್ಯಕ್ಷರಿಂದಲೇ ನೇರವಾಗಿ ಮಾಹಿತಿ ಪಡೆಯುತ್ತಿದ್ದಾರೆ. ನಾಗೇಶ್ ಮನ್ನೋಳಕರ್ ಹೇಳಿಕೆಯ ಜೊತೆ ಮನೆಯಲ್ಲಿ ಕೆಲವು ದಾಖಲೆಗಳನ್ನೂ ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ, ಸಂತೋಷ್ ಪಾಟೀಲ್ ಕೈಕೆಳಗೆ ಕೆಲಸ ಮಾಡಿದ್ದ 12 ಮಂದಿ ಉಪ ಗುತ್ತಿಗೆದಾರರು ಕೂಡ ಗ್ರಾಪಂ ಅಧ್ಯಕ್ಷ ನಾಗೇಶ್ ಮುನ್ನೋಳ್ಕರ್ ಮನೆಗೆ ಆಗಮಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂತೋಷ ಪಾಟೀಲ್ ಸೂಚನೆ ಮೇರೆಗೆ ತಾವು ಕಾಮಗಾರಿ ಮಾಡಿದ್ದಾಗಿ 12 ಉಪ ಗುತ್ತಿಗೆದಾರರು ಹೇಳಿಕೆ ನೀಡಿದ್ದು ಅದೇ ಮನೆಯಲ್ಲಿ ಪೊಲೀಸರು 12 ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಹಿಂದೆ ಸಂತೋಷ್ ಪಾಟೀಲಗೆ ತಾನೇ ಹೇಳಿಸಿ ಕಾಮಗಾರಿ ಮಾಡಿಸಿದ್ದಾಗಿ ಗ್ರಾಪಂ ಅಧ್ಯಕ್ಷ ನಾಗೇಶ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.
Udupi police visit Santosh home town Belagavi and enquire panchayat officials over his suicide. On Monday night, a suicide note was allegedly sent from Patil’s phone number to journalists and friends via WhatsApp. In it, Patil purportedly holds Eshwarappa, Karnataka’s rural development and panchayat raj (RDPR) minister, to be solely responsible for his death.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm