ನೈಜೀರಿಯಾದ ಕ್ಯಾಥೋಲಿಕ್ ಚರ್ಚ್​ನಲ್ಲಿ ಭೀಕರ ಹತ್ಯಾಕಾಂಡ ; 50 ಜನರ ಬಲಿ 

06-06-22 10:59 am       HK News Desk   ದೇಶ - ವಿದೇಶ

ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಯೋರ್ವ ಸಾಮೂಹಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ.

ಅಬುಜಾ, ಜೂ 06: ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಯೋರ್ವ ಸಾಮೂಹಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ.

ಭಾನುವಾರ ಬೆಳಗಿನ ಜಾವ ಚರ್ಚ್‍ನಲ್ಲಿ ಪ್ರಾರ್ಥನೆ ಮಾಡಲು ಅನೇಕ ಮಂದಿ ಆಗಮಿಸಿದ್ದರು. ಈ ವೇಳೆ ಮುತ್ತಿಗೆ ಹಾಕಿ ಬಂದೂಕುಧಾರಿ ಆರಂಭದಲ್ಲಿ ಹೊರಗಡೆ ದಾಳಿ ನಡೆಸಿ ನಂತರ ಒಳಗಡೆ ದಾಳಿ ನಡೆಸಿದ್ದಾನೆ. ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮನೆಬಂದಂತೆ ಗುಂಡು ಹಾರಿಸಿದ್ದಾನೆ. 

Over 50 feared dead in Nigeria church attack, officials say | FOX40

ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ, ಬಂದೂಕುಧಾರಿ ಚರ್ಚ್ ಕಟ್ಟಡದ ಹೊರಗೆ ಮತ್ತು ಒಳಗೆ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಯಾರು ಎನ್ನುವುದು ತಿಳಿದು ಬಂದಿಲ್ಲ.

Gunmen kill 'many' worshippers in Nigeria Catholic church attack | Arab News

ನಂತರ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಒಂಡೋ ರಾಜ್ಯ ಗವರ್ನರ್ ಅರಕುನ್ರಿನ್ ಒಲುವರೊಟಿಮಿ ಅಕೆರೆಡೊಲು ಅವರು, ಇದೊಂದು ದೊಡ್ಡ ಹತ್ಯಾಕಾಂಡ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

At least 50 people killed in shooting at church in Nigeria

ದಾಳಿಕೋರರ ಗುರುತು ಮತ್ತು ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ. “ಚರ್ಚ್​​ನಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗ ಅಪರಿಚಿತ ಬಂದೂಕುಧಾರಿಗಳು ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ ಮಾಡಿದರು. ಈ ವೇಳೆ ಅನೇಕರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. ಪ್ಯಾರಿಷ್‌ನ ಬಿಷಪ್ ಮತ್ತು ಪಾದ್ರಿಗಳು ದಾಳಿಯಿಂದ ಹಾನಿಗೊಳಗಾಗದೆ ಬದುಕುಳಿದಿದ್ದಾರೆ” ಎಂದು ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ವಕ್ತಾರ ರೆವರೆಂಡ್ ಆಗಸ್ಟೀನ್ ಇಕ್ವು ಹೇಳಿದ್ದಾರೆ.

ನೈಜೀರಿಯಾ ಇಸ್ಲಾಮಿಕ್ ಬಂಡಾಯದ ವಿರುದ್ಧ ಹೋರಾಡುತ್ತಿದೆ ;

 ಅಧ್ಯಕ್ಷ ಮುಹಮ್ಮದ್ ಬುಹಾರಿ ದಾಳಿಯನ್ನು ಖಂಡಿಸಿದ್ದು, ಇದು ಹೇಯ ಕೃತ್ಯ ಎಂದು ಕರೆದಿದ್ದಾರೆ. ಪೋಪ್ ಫ್ರಾನ್ಸಿಸ್ ಸಂತ್ರಸ್ತರಿಗಾಗಿ ಪ್ರಾರ್ಥಿಸಿದ್ದಾರೆ ಎಂದು ವ್ಯಾಟಿಕನ್ ಹೇಳಿದೆ. ನೈಜೀರಿಯಾ ಈಶಾನ್ಯದಲ್ಲಿ ಇಸ್ಲಾಮಿಕ್ ದಂಗೆ ಮತ್ತು ಸುಲಿಗೆ ದಾಳಿ ಮತ್ತು ಅಪಹರಣಗಳನ್ನು ನಡೆಸುವ ಸಶಸ್ತ್ರ ಗ್ಯಾಂಗ್‌ಗಳ ವಿರುದ್ಧ ಹೋರಾಡುತ್ತಿದೆ. ಈ ದಾಳಿಗಳು ಹೆಚ್ಚಾಗಿ ವಾಯುವ್ಯದಲ್ಲಿ ಸಂಭವಿಸುತ್ತವೆ. ಆದರೆ ನೈಋತ್ಯದಲ್ಲಿ ಇಂತಹ ದಾಳಿಗಳು ಕಡಿಮೆ.

At least 50 people including women and children were killed and others injured after gunmen attacked a Catholic church in Nigeria's Ondo state during mass yesterday, according to media reports. The attack took place in Owo, a town in Ondo state, as many worshippers gathered at the church during the morning mass on Sunday.  According to local news agency, the gunmen first detonated explosives near the church altar before firing at the worshipers and killing scores of them on the spot.