ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಕಪ್ಪು ಹಣ ; 2021ರಲ್ಲಿ ಹದಿನಾಲ್ಕು ವರ್ಷಗಳಲ್ಲೇ ಗರಿಷ್ಠ ಹೂಡಿಕೆ ! ಸ್ವಿಸ್ ಹಣ ತರುವುದು ಕನಸು ಮಾತ್ರ !

17-06-22 10:27 pm       HK News Desk   ದೇಶ - ವಿದೇಶ

ಸ್ವಿಸ್ ಬ್ಯಾಂಕ್ ನಲ್ಲಿ ಭಾರತದ ರಾಜಕಾರಣಿಗಳು, ಅಧಿಕಾರಿ ವರ್ಗ ಅಕ್ರಮ ಹಣ ಕೂಡಿಡುತ್ತಿರುವುದು, ಅದನ್ನು ಮತ್ತೆ ಭಾರತಕ್ಕೆ ತರುವುದು ಇತ್ಯಾದಿ ವಿಚಾರ ಕೆಲವು ವರ್ಷಗಳ ಹಿಂದೆ ದೇಶದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆನಂತರ ಅಷ್ಟೇ ವೇಗದಲ್ಲಿ ಮಾಯವೂ ಆಗಿತ್ತು.

ನವದೆಹಲಿ, ಜೂನ್ 17: ಸ್ವಿಸ್ ಬ್ಯಾಂಕ್ ನಲ್ಲಿ ಭಾರತದ ರಾಜಕಾರಣಿಗಳು, ಅಧಿಕಾರಿ ವರ್ಗ ಅಕ್ರಮ ಹಣ ಕೂಡಿಡುತ್ತಿರುವುದು, ಅದನ್ನು ಮತ್ತೆ ಭಾರತಕ್ಕೆ ತರುವುದು ಇತ್ಯಾದಿ ವಿಚಾರ ಕೆಲವು ವರ್ಷಗಳ ಹಿಂದೆ ದೇಶದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆನಂತರ ಅಷ್ಟೇ ವೇಗದಲ್ಲಿ ಮಾಯವೂ ಆಗಿತ್ತು. ಇವೆಲ್ಲದರ ಮಧ್ಯೆ 2021ರ ಒಂದೇ ವರ್ಷದಲ್ಲಿ ಕಳೆದ 14 ವರ್ಷಗಳಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಭಾರತೀಯರು ತಮ್ಮ ಅಕ್ರಮ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನುವ ಮಾಹಿತಿ ಹೊರಬಿದ್ದಿದೆ.

ಸ್ವಿಜರ್ಲೇಂಡಿನ ಸೆಂಟ್ರಲ್ ಬ್ಯಾಂಕ್ ವಾರ್ಷಿಕ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಭಾರತೀಯರ ಹೂಡಿಕೆಯಲ್ಲಿ 14 ವರ್ಷಗಳಲ್ಲೇ ಗರಿಷ್ಠ ಎನ್ನುವಷ್ಟು 2021ರಲ್ಲಿ ಏರಿಕೆ ಆಗಿರುವುದನ್ನು ತೋರಿಸಿದೆ. 2021ರಲ್ಲಿ 3.83 ಬಿಲಿಯನ್ ಸ್ವಿಸ್ ಫ್ರಾಂಕ್ ಅಂದರೆ, 30,500 ಕೋಟಿ ರೂಪಾಯಿ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಹೂಡಿಕೆ ಮಾಡಿದ್ದಾರೆ.

Second year in a row, Indian funds in Swiss banks rise; at 14-yr high in  2021 | Business News,The Indian Express

2020 ರಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಭಾರತ ಮೂಲದವರು 20,700 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ್ದರು. 2018 ಮತ್ತು 19ರಲ್ಲಿ ಸ್ವಿಸ್ ಬ್ಯಾಂಕ್ ಹೂಡಿಕೆ ಪ್ರಮಾಣ ಕಡಿಮೆಯಾಗಿತ್ತು. 2006ರಲ್ಲಿ ಅತ್ಯಂತ ಗರಿಷ್ಠ ಎಂದರೆ, 6.5 ಬಿಲಿಯನ್ ಸ್ವಿಸ್ ಫ್ರಾಂಕ್ ಹೂಡಿಕೆ ಆಗಿತ್ತು. ಆನಂತರದ ವರ್ಷಗಳಲ್ಲಿ ಸ್ವಲ್ಪ ಮಟ್ಟಿಗೆ ಹೂಡಿಕೆಯಲ್ಲಿ ಕಡಿಮೆಯಾಗಿತ್ತು. 2011, 2013, 2017, 2020 ಮತ್ತು 21ರಲ್ಲಿ ಹೂಡಿಕೆಯಲ್ಲಿ ಭಾರೀ ಹೆಚ್ಚಳ ಆಗಿರುವುದು ಕಂಡುಬಂದಿದೆ.

50% increase in Indian funds in Swiss banks

ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ಕೂಡಿಟ್ಟ ಕಪ್ಪು ಹಣವನ್ನು ಮರಳಿ ತರಬೇಕೆಂಬ ಭಾರೀ ಆಗ್ರಹದ ಹಿನ್ನೆಲೆಯಲ್ಲಿ 2016ರಲ್ಲಿ ಭಾರತ ಮತ್ತು ಸ್ವಿಜರ್ಲೇಂಡ್ ನಡುವೆ ಒಪ್ಪಂದ ಏರ್ಪಟ್ಟಿತ್ತು. ಹಣಕಾಸು ಹೂಡಿಕೆದಾರರ ಮಾಹಿತಿಯನ್ನು ವಿನಿಮಯ ನಡೆಸಲು ಒಪ್ಪಂದ ಆಗಿತ್ತು. ಆದರೆ ಅದರ ಮಾಹಿತಿಯನ್ನು ಸೋರಿಕೆ ಮಾಡುವಂತಿಲ್ಲ. ಅದರಂತೆ, ಪ್ರತಿ ವರ್ಷ ತನ್ನಲ್ಲಿ ಹೂಡಿಕೆ ಮಾಡಿದವರ ಮಾಹಿತಿಯನ್ನು ಸ್ವಿಸ್ ಬ್ಯಾಂಕ್, ಭಾರತ ಸರಕಾರಕ್ಕೆ ನೀಡುತ್ತಿದೆ. ಸ್ವಿಸ್ ಬ್ಯಾಂಕಿನಲ್ಲಿ ಹೂಡಿಕೆದಾರರ ಪೈಕಿ ಬ್ರಿಟನ್ ಪ್ರಜೆಗಳು ಮುಂಚೂಣಿಯಲ್ಲಿದ್ದರೆ, ನಂತರದ ಸ್ಥಾನದಲ್ಲಿ ಅಮೆರಿಕನ್ನರು ಇದ್ದಾರೆ. 

Money parked by Indians in Swiss Banks jumped to a 14-year-high of CHF 3.83 billion in 2021 on the back of rise in holdings and customer deposits, latest data from Zurich-based Swiss National Bank (SNB) released on Thursday showed.The money parked by Indians had shown a decline in 2018 and 2019 but has again picked up. Marking the second consecutive year of rise, aggregate funds by Indians increased from 2.55 billion Swiss francs in 2020.