ರಜೆಯಲ್ಲಿ ತೆರಳಿದ್ದ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಕೊಂದ ಉಗ್ರರು ; ಕಾಶ್ಮೀರ ಕಣಿವೆಯಲ್ಲಿ ನಿಲ್ಲದ ನರಮೇಧ ! 

18-06-22 12:40 pm       HK News Desk   ದೇಶ - ವಿದೇಶ

ರಜೆಯಲ್ಲಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಉಗ್ರರು ಅಪಹರಿಸಿ ಕೊಂದು ಹಾಕಿದ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. 

ಶ್ರೀನಗರ, ಜೂನ್ 18 : ರಜೆಯಲ್ಲಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಉಗ್ರರು ಅಪಹರಿಸಿ ಕೊಂದು ಹಾಕಿದ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. 

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಫಾರೂಕ್ ಅಹ್ಮದ್ ಮಿರ್ ಉಗ್ರರಿಂದ ಹತರಾದ ಅಧಿಕಾರಿ. ರಜೆಯ ಕಾರಣ ಸಾಂಬೋರ್ ಜಿಲ್ಲೆಯ ಪಾಂಪೋರಾದ ಮನೆಯಲ್ಲಿದ್ದ ಅವರನ್ನು ಉಗ್ರರು ಅಪಹರಿಸಿ, ಬಯಲು ಪ್ರದೇಶಕ್ಕೆ ಕೊಂಡೊಯ್ದು ಗುಂಡಿಟ್ಟು ಕೊಂದಿದ್ದಾರೆ. ಕೆಲವು ಮೂಲಗಳ ಪ್ರಕಾರ, ಶುಕ್ರವಾರ ಬೆಳಗ್ಗೆ ಡ್ಯೂಟಿಗೆಂದು ಮನೆಯಿಂದ ಹೊರಟಿದ್ದ ಫಾರೂಕ್ ಅಹ್ಮದ್ ಅವರನ್ನು ನಡುದಾರಿಯಲ್ಲಿ ಅಡ್ಡಗಟ್ಟಿದ ಉಗ್ರರು ಗುಂಡು ಹಾರಿಸಿ ಕೊಂದಿದ್ದಾರೆ. 

Off-Duty Cop Shot Dead By Terrorists In Jammu And Kashmir's Pampore

ಫಾರೂಕ್ ಅಹ್ಮದ್ ಅವರನ್ನು ಇಂಡಿಯನ್ ರಿಸರ್ವ್ ಪೊಲೀಸ್ (ಐಆರ್ ಪಿ ) ಬೆಟಾಲಿಯನ್ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಕಳೆದ ಎರಡು ತಿಂಗಳಲ್ಲಿ ಪೊಲೀಸರು, ಸರಕಾರಿ ಅಧಿಕಾರಿಗಳನ್ನು ಗುರಿಯಾಗಿಸಿ ಉಗ್ರರು ಕೊಲ್ಲುತ್ತಿದ್ದಾರೆ. 

Off-duty cop shot dead by terrorists in Pampore: police

ಸೇನೆ ಒಂದೆಡೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರೂ, ರಜೆಯಲ್ಲಿ ತೆರಳಿದ ಮತ್ತು ಕರ್ತವ್ಯದಲ್ಲಿದ್ದ ಪೊಲೀಸರನ್ನು ಗುರಿಯಾಗಿಸಿ ಕೊಲ್ಲುತ್ತಿರುವುದು ಅಲ್ಲಿನ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

An off-duty police officer was killed in Pampore area of Jammu and Kashmir today. The body of Farooq Ahmad Mir, a Jammu and Kashmir police sub- inspector (ministerial wing) was found in the fields this morning. It is suspected that terrorists kidnapped the sub-inspector from his home at Samboora in Pampore and killed him in the nearby fields.According to Kashmir Zone Police, preliminary investigation revealed that the fallen police officer had left his home for work in his paddy fields yesterday evening, where he was shot dead by terrorists using a pistol.