ಅಗ್ನಿಪಥ್ ಅಗ್ನಿಕುಂಡ ; ಬಿಹಾರದಲ್ಲಿ 700 ಕೋಟಿ ರೈಲ್ವೆ ಆಸ್ತಿ ನಾಶ, 718 ಪ್ರತಿಭಟನಾಕಾರರ ಬಂಧನ ! 

19-06-22 01:02 pm       HK News Desk   ದೇಶ - ವಿದೇಶ

ನಾಲ್ಕು ದಿನಗಳಲ್ಲಿ ಬಿಹಾರದಲ್ಲಿ 11 ಇಂಜಿನ್‌ಗಳ ಜೊತೆಗೆ 60 ರೈಲುಗಳ ಬೋಗಿಗಳನ್ನು ಪ್ರತಿಭಟನಾಕಾರರು ಸುಟ್ಟಿದ್ದಾರೆ. ಪ್ರತಿಭಟನೆ ಕಿಚ್ಚಿಗೆ ಸುಮಾರು 700 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸುಟ್ಟು ಹೋಗಿದೆ.

ಪಾಟ್ನಾ, ಜೂ 19: ನಾಲ್ಕು ದಿನಗಳಲ್ಲಿ ಬಿಹಾರದಲ್ಲಿ 11 ಇಂಜಿನ್‌ಗಳ ಜೊತೆಗೆ 60 ರೈಲುಗಳ ಬೋಗಿಗಳನ್ನು ಪ್ರತಿಭಟನಾಕಾರರು ಸುಟ್ಟಿದ್ದಾರೆ. ಪ್ರತಿಭಟನೆ ಕಿಚ್ಚಿಗೆ ಸುಮಾರು 700 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸುಟ್ಟು ಹೋಗಿದೆ. ಇದಲ್ಲದೇ ರೈಲ್ವೇ ನಿಲ್ದಾಣಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ, ರೈಲ್ವೆ ಸೇರಿದ ಇತರೆ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

ಬಿಹಾರ ರಾಜ್ಯದ 15 ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಒಂದು ಸಾಮಾನ್ಯ ಕೋಚ್ ನಿರ್ಮಿಸಲು 80 ಲಕ್ಷ ರೂಪಾಯಿ ಸ್ಲೀಪರ್ ಕೋಚ್ ನಿರ್ಮಾಣಕ್ಕೆ 1.25 ಕೋಟಿ ರೂಪಾಯಿ ಮತ್ತು ಎಸಿ ಕೋಚ್‌ ನಿರ್ಮಿಸಲು 3.5 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಒಂದು ರೈಲ್ ಇಂಜಿನ್ ನಿರ್ಮಿಸಲು 20 ಕೋಟಿ ರೂ. 12 ಬೋಗಿಗಳ ಪ್ಯಾಸೆಂಜರ್ ರೈಲಿಗೆ 40 ಕೋಟಿ ರೂ. ಮತ್ತು 24 ಬೋಗಿಗಳ ರೈಲಿಗೆ 70 ಕೋಟಿ ರೂಪಾಯಿಯನ್ನು ಸರ್ಕಾರ ವೆಚ್ಚ ಮಾಡುತ್ತದೆ.

Bihar: 718 people arrested so far for damaging government properties in  protest against Agneepath scheme - FINAX NEWS

ಈಸ್ಟ್-ಸೆಂಟ್ರಲ್ ರೈಲ್ವೇ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರೇಂದ್ರ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಆಸ್ತಿ ಹಾನಿಯ ಅಂದಾಜನ್ನು ಇನ್ನೂ ಮಾಡಲಾಗುತ್ತಿದೆ, ಆದರೆ ಸುಮಾರು 700 ಕೋಟಿ ರುಪಾಯಿಗಳಷ್ಟು ಆಸ್ತಿ ಹಾನಿಯಾಗಿದೆ. ಐದು ರೈಲುಗಳು, 60 ಬೋಗಿಗಳು ಮತ್ತು 11 ಇಂಜಿನ್‌ಗಳು ಸುಟ್ಟುಹೋಗಿವೆ ಎಂದು ಅವರು ಹೇಳಿದರು, ರೈಲ್ವೆಯು ಆಸ್ತಿ ಹಾನಿಗೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸುತ್ತಿದೆ.

Bihar Police arrest 718 protesters files 138 FIR amid Agnipath Agniveer  Protest - अग्निपथ अग्निवीर प्रदर्शन: बिहार में अब तक 718 गिरफ्तारी, 138  एफआईआर दर्ज

ಇದಲ್ಲದೇ, ರೈಲ್ವೇ ಪ್ರಕಾರ 60 ಲಕ್ಷ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ. ಹಳಿಗಳ ಮೇಲಿನ ಅಡಚಣೆ ಮತ್ತು ರೈಲುಗಳ ರದ್ದತಿಯು ರೈಲ್ವೆಗೆ ದೊಡ್ಡ ಆರ್ಥಿಕ ಹೊಡೆತವನ್ನು ಉಂಟುಮಾಡಿದೆ, ಆದರೂ ಇಲಾಖೆಯು ಅಧಿಕೃತ ಅಂದಾಜನ್ನು ನೀಡಲು ಇನ್ನೂ ಸಾಧ್ಯವಾಗಿಲ್ಲ.

Bihar Agneepath Protest 61 arrested FIR on two coaching centre in Taregna  railway station blown up vandalized patna - Bihar Agneepath Protest:  तारेगना रेलवे स्टेशन पर बवाल में 61 गिरफ्तार, दो कोचिंग

ಪ್ರತಿಭಟನೆ, ಹಿಂಸಾಚಾರದ ವರದಿಗಳು ಬಿಹಾರದಿಂದ ಇನ್ನೂ ಬರುತ್ತಿವೆ, ಪ್ರತಿಭಟನಾಕಾರರು ರೈಲುಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಶನಿವಾರ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ 25 ಎಫ್‌ಐಆರ್‌ ದಾಖಲಿಸಲಾಗಿದೆ ಮತ್ತು ಬಿಹಾರದಲ್ಲಿ 250 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

Agnipath Protest: Railway property worth 700 crores destroyed in Agnipath  fire in Bihar, 718 arrested so far | The Indian Nation

718 ಪ್ರತಿಭಟನಾಕಾರರ ಬಂಧನ; 

ಮೂರು ದಿನಗಳಲ್ಲಿ ಒಟ್ಟು 138 ಎಫ್‌ಐಆರ್‌ಗಳು ದಾಖಲಾಗಿದ್ದು, 718 ಮಂದಿಯನ್ನು ಬಂಧಿಸಲಾಗಿದೆ. ಸಿಸಿಟಿವಿ ಮತ್ತು ವಿಡಿಯೋ ದೃಶ್ಯಾವಳಿಗಳ ಆಧಾರದ ಮೂಲಕ ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸಲಾಗುತ್ತಿದೆ.

Agneepath protests: 250 arrested in Bihar on fourth day of violenceSEDI  News | SEDI News

ಪ್ರತಿಭಟನೆಯನ್ನು ಕೈಬಿಡುವಂತೆ ಸರ್ಕಾರ ಮನವಿ ಮಾಡುತ್ತಿದೆ. ಇನ್ನೂ ಅಗ್ನಿಪಥ್ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕೇಂದ್ರ ಹೇಳಿದೆ. ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಅಗ್ನಿಪಥ್ ಸೇವೆಯ ವಯೋಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸಲಾಗಿದೆ.

Altogether 718 people were identified and arrested as the police lodged as many as 138 separate FIRs against the protesters for vandalizing government property and causing mayhem across the state in the last four days of protests against the Centre’s Agnipath scheme for recruitment in armed forces for 4 years only.