ಬ್ರೇಕಿಂಗ್ ನ್ಯೂಸ್
20-06-22 08:45 pm HK News Desk ದೇಶ - ವಿದೇಶ
ಮುಂಬೈ, ಜೂನ್ 20: ಇಬ್ಬರು ಸೋದರರಿಗೆ ಸೇರಿದ ಎರಡು ಕುಟುಂಬಗಳ ಒಂಬತ್ತು ಮಂದಿ ವಿಷ ಸೇವಿಸಿ ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದ್ದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ ಗಡಿ ಜಿಲ್ಲೆ ಸಾಂಗ್ಲಿಯ ಮೀರಜ್ ತಾಲೂಕಿನ ಮೈಸಾಲ್ ಎನ್ನುವ ಗ್ರಾಮದಲ್ಲಿ ಇಬ್ಬರು ಸೋದರರ ಎರಡು ಮನೆಗಳಲ್ಲಿ ಘಟನೆ ನಡೆದಿದೆ. ವೃತ್ತಿಯಲ್ಲಿ ಪಶು ವೈದ್ಯರಾಗಿದ್ದ ಪೋಪಟ್ ಯಲ್ಲಪ್ಪ ವಾನ್ಮೋರ್(52) ಅವರ ಅಂಬಿಕಾನಗರದ ಮನೆಯಲ್ಲಿ ಆರು ಮಂದಿಯ ಶವ ಕಂಡುಬಂದಿದ್ದರೆ, ಇನ್ನೊಂದು ಸೋದರನ ಮನೆಯಲ್ಲಿ ಮತ್ತೆ ಮೂವರ ಶವ ಪತ್ತೆಯಾಗಿದೆ. ಸಂಗೀತಾ ಪೋಪಟ್ ವಾನ್ಮೋರ್ (48), ಅರ್ಚನಾ ಪೋಪಟ್ ವಾನ್ಮೋರ್(30), ಶುಭಮ್ ಪೋಪಟ್ ವಾನ್ಮೋರ್ (28), ಮಾನಿಕ್ ಯಲ್ಲಪ್ಪ ವಾನ್ಮೋರ್ (49), ರೇಖಾ ಮಾನಿಕ್ ವಾನ್ಮೋರ್(45), ಆದಿತ್ಯ ಮಾನಿಕ್ ವಾನ್ಮೋರ್ (15), ಅನಿತಾ ಮಾಣಿಕ್ ವಾನ್ಮೋರ್(28), ಅಕ್ಕತಾಯಿ ವಾನ್ಮೋರ್(72) ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ.
ಬ್ಯಾಂಕ್ ಸಾಲ ಹೊಂದಿದ್ದರಿಂದ ಎರಡು ಕುಟುಂಬಗಳು ಧೃತಿಗೆಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅಂಬಿಕಾ ನಗರದ ಮನೆಯಲ್ಲಿ ಬೆಳಗ್ಗಿನಿಂದಲೂ ಓಪನ್ ಆಗಿರಲಿಲ್ಲ. ಸ್ಥಳೀಯರು ಸಂಶಯದಿಂದ ಬಾಗಿಲು ಬಡಿದು ನೋಡಿದ್ದಾರೆ. ಯಾರೂ ಸ್ಪಂದಿಸದೇ ಇದ್ದಾಗ, ಬಾಗಿಲು ಮುರಿದು ನೋಡಿದ್ದು ಮನೆಮಂದಿ ಸಾವು ಕಂಡಿದ್ದರು. ಆನಂತರ ಇನ್ನೊಬ್ಬ ಸೋದರನ ರಾಜಧಾನಿ ಕಾರ್ನರ್ ಎನ್ನುವ ಜಾಗದ ಮನೆಯಲ್ಲಿ ಮೂರು ಶವಗಳು ಪತ್ತೆಯಾಗಿವೆ. ಎರಡೂ ಕಡೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶವಗಳನ್ನು ಪೋಸ್ಟ್ ಮಾರ್ಟಂ ಕಳಿಸಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕವೇ ಸಾವಿನ ಕಾರಣ ತಿಳಿಯಬೇಕಷ್ಟೆ ಎಂದಿದ್ದಾರೆ.
In a tragic incident reported from Mhaisal under Miraj taluka in the Sangli district of Maharashtra, nine members of two brothers' families died after allegedly consuming poison at their houses in separate places on Monday.While six of the family members were found dead in their house at Ambikanagar, the bodies of the other three were recovered from another house in Rajdhani Corner.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm