ರಾಷ್ಟ್ರಪತಿ ಚುನಾವಣೆಗೆ ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹೆಸರು ; ವಿಪಕ್ಷಗಳ ಕಸರತ್ತು !

20-06-22 09:08 pm       HK News Desk   ದೇಶ - ವಿದೇಶ

ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿರುವ ಬಿಜೆಪಿ ವಿರೋಧಿ ಪಕ್ಷಗಳು ಈಗ ಮಾಜಿ ಬಿಜೆಪಿ ನಾಯಕ, ಸದ್ಯ ಟಿಎಂಸಿಯಲ್ಲಿರುವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಸ್ಥಾನದ ಕಣಕ್ಕಿಳಿಸಲು ಮುಂದಾಗಿವೆ.

ನವದೆಹಲಿ, ಜೂನ್ 20: ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿರುವ ಬಿಜೆಪಿ ವಿರೋಧಿ ಪಕ್ಷಗಳು ಈಗ ಮಾಜಿ ಬಿಜೆಪಿ ನಾಯಕ, ಸದ್ಯ ಟಿಎಂಸಿಯಲ್ಲಿರುವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಸ್ಥಾನದ ಕಣಕ್ಕಿಳಿಸಲು ಮುಂದಾಗಿವೆ.

ಶರದ್ ಪವಾರ್, ಫಾರೂಕ್ ಅಬ್ದುಲ್ಲಾ ಬಳಿಕ ವಿಪಕ್ಷಗಳ ಮುಂಚೂಣಿ ಹೆಸರುಗಳಲ್ಲಿದ್ದ ಗಾಂಧೀಜಿ ಮೊಮ್ಮಗ, ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರೂ ರಾಷ್ಟ್ರಪತಿ ಅಭ್ಯರ್ಥಿಯಾಗುವುದರಿಂದ ಹಿಂದೆ ಸರಿದ ಬೆನ್ನಲ್ಲೇ ಯಶವಂತ್ ಸಿನ್ಹಾ ಹೆಸರು ಮುನ್ನೆಲೆಗೆ ಬಂದಿದೆ.

ಶರದ್ ಪವಾರ್ ನೇತೃತ್ವದಲ್ಲಿ ಜೂನ್ 21ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅದರಲ್ಲಿ ಯಶವಂತ್ ಸಿನ್ಹಾ ಹೆಸರು ಪರಿಗಣಿಸುವ ಸಾಧ್ಯತೆಯಿದೆ. ಸಿನ್ಹಾ ಹೆಸರಿಗೆ ಬಹುತೇಕ ವಿಪಕ್ಷಗಳು ಒಪ್ಪಿಗೆ ಸೂಚಿಸಿದ್ದು, ಈಗಿನ ಬಿಜೆಪಿಯನ್ನು ಕಟುವಾಗಿ ವಿರೋಧಿಸಿ ಪಕ್ಷದಿಂದ ಹೊರಬಂದಿದ್ದ ಸಿನ್ಹಾ ವಾಜಪೇಯಿ ಕಾಲದಲ್ಲಿ ಕೇಂದ್ರ ಸಚಿವರಾಗಿ ಹೆಸರು ಮಾಡಿದ್ದರು. 1990ರಲ್ಲಿ ಚಂದ್ರಶೇಖರ್ ಸರಕಾರದಲ್ಲಿ ಮತ್ತು ವಾಜಪೇಯಿ ಸರಕಾರದಲ್ಲಿ ವಿತ್ತ ಮಂತ್ರಿಯಾಗಿ ಕೆಲಸ ಮಾಡಿದ್ದರು. ಅಲ್ಲದೆ, ವಿದೇಶಾಂಗ ಮಂತ್ರಿಯಾಗಿಯೂ ಕೆಲಸ ಮಾಡಿದ್ದರು.

ಗೋಪಾಲಕೃಷ್ಣ ಗಾಂಧಿ ಪ್ರತಿಕ್ರಿಯಿಸಿ, ತನಗಿಂತ ಉತ್ತಮ ವ್ಯಕ್ತಿಗಳು ಬಹಳಷ್ಟು ಮಂದಿ ಇದ್ದಾರೆ. ಅವರನ್ನು ಪರಿಗಣಿಸಿ ಎಂದು ಸಲಹೆ ಮಾಡಿದ್ದರು. ಇದರ ಬೆನ್ನಲ್ಲೇ ಸಿನ್ಹಾ ಹೆಸರು ಮುನ್ನೆಲೆಗೆ ಬಂದಿದೆ.

Non-BJP parties are mulling putting up former union minister Yashwant Sinha as a possible joint candidate for the upcoming presidential election, a senior Trinamool Congress leader said on Monday. The name of the former BJP leader who joined the TMC last year has been proposed as a presidential poll candidate by a few opposition parties and three to four have seconded it, he said.