ಬ್ರೇಕಿಂಗ್ ನ್ಯೂಸ್
21-06-22 08:54 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 21: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪಕ್ಷದ ಹಿಡಿತ ಕಳಕೊಂಡಿದ್ದಾರೆ. ಇತ್ತೀಚೆಗೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿಯ ಐವರು ಜಯ ಸಾಧಿಸಿದ ಬಳಿಕ ಶಿವಸೇನೆ ಪಕ್ಷದ ಒಳಗೆ ತಳಮಳ ಶುರುವಾಗಿತ್ತು. ಇದೀಗ ಶಿವಸೇನೆ ಸರಕಾರದಲ್ಲಿ ಸೈಡ್ ಲೈನ್ ಆಗಿದ್ದ ಏಕನಾಥ ಶಿಂಧೆ ರೆಬಲ್ ಆಗಿದ್ದು, ಒಂದಷ್ಟು ಶಾಸಕರನ್ನು ಜೊತೆಗಿಟ್ಟುಕೊಂಡು ಗುಜರಾತಿನ ಸೂರತ್ ನಲ್ಲಿ ರೆಸಾರ್ಟ್ ಸೇರಿದ್ದಾರೆ. ಇಷ್ಟಾಗುತ್ತಲೇ ಮಹಾ ವಿಕಾಸ್ ಅಘಾಡಿ ಸರಕಾರ ಪತನವಾಗುವ ಮಾತು ಕೇಳಿಬಂದಿದ್ದು, ಬಿಜೆಪಿ ಮತ್ತೆ ಸರಕಾರ ರಚಿಸುವತ್ತ ದೃಷ್ಟಿ ನೆಟ್ಟಿದೆ.
ಏಕನಾಥ್ ಶಿಂಧೆಯ ನಡೆಯಿಂದಾಗಿ ಮಹಾರಾಷ್ಟ್ರ ಸರಕಾರ ಬೀಳುತ್ತೆ ಅನ್ನುವ ವದಂತಿ ಹಬ್ಬಿರುವಾಗಲೇ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಕಾಂಗ್ರೆಸ್ ಮತ್ತು ಎನ್ ಸಿಪಿ ಮುಖಂಡರು ಸರಕಾರ ಬೀಳೋಕೆ ಬಿಡಲ್ಲ ಎನ್ನುವ ವಾದ ಮುಂದಿಟ್ಟಿದ್ದಾರೆ. ಆದರೆ, ಏಕನಾಥ್ ಶಿಂಧೆ ಗುಜರಾತಿಗೆ ತೆರಳಿರುವುದು ಸದ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸರಕಾರಕ್ಕೆ ಕಂಟಕ ಎನ್ನುವ ಮಾತು ಕೇಳಿಬರುವಂತಾಗಿದೆ. ಇದರ ಸುಳಿವು ಅರಿತಿರುವ ಶಿವಸೇನೆ ವಕ್ತಾರ ಸಂಜಯ ರಾವುತ್, ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣೆ ನಂತರ ಈ ರೀತಿಯ ಭಾನಗಡಿಗಳು ಬಹಳಷ್ಟು ನಡೆದಿರುವುದರಿಂದ ಅಲ್ಲಿನ ರಾಜಕೀಯ ವಿಶ್ಲೇಷಕರು ಏಕನಾಥ್ ಶಿಂಧೆಯ ಕಾರಣಕ್ಕೆ ಅಂಥಹದ್ದೇನೂ ನಡೆಯಲ್ಲ ಎನ್ನುತ್ತಿದ್ದಾರೆ. ಯಾಕಂದ್ರೆ, ಈ ಹಿಂದೆಯೂ 2019ರಲ್ಲಿ ಬಿಜೆಪಿ, ಎನ್ ಸಿಪಿಯ ಅಜಿತ್ ಪವಾರ್ ಜೊತೆ ಸೇರಿ ಸರಕಾರ ರಚನೆಗೆ ಮುಂದಾಗಿತ್ತು. ದೇವೇಂದ್ರ ಫಡ್ನವಿಸ್ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ, ಅಜಿತ್ ಪವಾರನ್ನು ಡಿಸಿಎಂ ಪಟ್ಟಕ್ಕೇರಿಸಿ, ಆನಂತರ ಎರಡು ದಿನದಲ್ಲೇ ಅಷ್ಟೇ ತರಾತುರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೂ ಆಗಿತ್ತು. ಅಜಿತ್ ಪವಾರ್ ಜೊತೆಗೆ ಬಂದಿದ್ದ ಶಾಸಕರು, ಮಾವ ಶರದ್ ಪವಾರ್ ಫೀಲ್ಡಿಗಿಳಿಯುತ್ತಿದ್ದಂತೆ ತೆಪ್ಪಗೆ ಅವರ ಜೊತೆಗೆ ತೆರಳಿದ್ದು ಬಿಜೆಪಿಯ ಪಾಲಿಗೆ ಮುಖಭಂಗಕ್ಕೀಡು ಮಾಡಿತ್ತು. ಹಾಗಾಗಿ ಬಿಜೆಪಿ ಸರಕಾರ ರಚನೆಗೆ ಮುಂದಾಗಿ ಕೈಸುಟ್ಟು ಕೊಂಡಿತ್ತು.
ಅದಕ್ಕೂ ಹಿಂದೆ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಮೈತ್ರಿಕೂಟ ಜೊತೆಯಾಗಿಯೇ ಚುನಾವಣೆ ಎದುರಿಸಿತ್ತು. ಹಿಂದುತ್ವದ ರಾಜಕಾರಣದಿಂದಾಗಿ ಎರಡೂ ಪಕ್ಷಗಳ ನಡುವೆ ಸಿದ್ಧಾಂತ, ತತ್ವಗಳಲ್ಲಿ ಸಾಮ್ಯತೆ ಇತ್ತು. ಹಾಗಾಗಿ, ಕಳೆದ ಬಾರಿ ಫಡ್ನವಿಸ್ ಸರಕಾರವೂ ಅವಧಿ ಪೂರ್ಣಗೊಳಿಸಿ ಮತ್ತೊಮ್ಮೆ ಬಹುಮತ ಪಡೆದಿತ್ತು. ಆದರೆ, ಚುನಾವಣೆಯಲ್ಲಿ ಜಯ ಸಿಗುತ್ತಿದ್ದಂತೆ ಶಿವಸೇನೆ ಮುಖ್ಯಮಂತ್ರಿ ಪದವಿ ತಮಗೆ ನೀಡುವಂತೆ ಪಟ್ಟು ಹಿಡಿದಿತ್ತು. ಬಿಜೆಪಿ ಹೆಚ್ಚು ಸ್ಥಾನ ಹೊಂದಿದ್ದರಿಂದ ಸಿಎಂ ಸ್ಥಾನ ನೀಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರಿಂದ ಉದ್ಧವ್ ಠಾಕ್ರೆ ಮೈತ್ರಿಯಿಂದ ಹೊರ ನಡೆದಿದ್ದರು. ಅಷ್ಟೇ ಅಲ್ಲ, ತಮ್ಮ ಬದ್ಧ ವೈರಿ, ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದ ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಹೊಸ ಮೈತ್ರಿ ಕುದುರಿಸಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಕಾಂಗ್ರೆಸ್ ಮತ್ತು ಎನ್ ಸಿಪಿ, ಉದ್ಧವ್ ಠಾಕ್ರೆ ಸಿಎಂ ಆಗುವುದಕ್ಕೆ ಬೆಂಬಲ ನೀಡಿತ್ತು. ಆ ಕಾರಣದಿಂದ ಅಚಾನಕ್ಕಾಗಿ ಮಹಾ ವಿಕಾಸ್ ಅಘಾಡಿ ಅನ್ನುವ ಮೈತ್ರಿಕೂಟ ಸ್ಥಾಪನೆಯಾಗಿತ್ತು.
ಶಿವಸೇನೆ ಶಾಸಕರಲ್ಲೇ ಅಸಮಾಧಾನ
ಅಧಿಕಾರಕ್ಕಾಗಿ ಕಾಂಗ್ರೆಸ್, ಎನ್ಸಿಪಿ ಜೊತೆಗೆ ಮೈತ್ರಿ ಹೊಂದಿದ್ದರೂ, ಶಿವಸೇನೆಯ ಶಾಸಕರು ಎಂದಿಗೂ ತಳಮಟ್ಟದಲ್ಲಿ ಅದರ ಜೊತೆ ಮೈತ್ರಿತ್ವ ಸಾಧಿಸಲೇ ಇರಲಿಲ್ಲ. ತತ್ವ, ಸಿದ್ಧಾಂತದ ನೆಲೆಯಲ್ಲಿ ಕಾಂಗ್ರೆಸ್ ಜೊತೆ ಸೇರಿದ್ದನ್ನು ಸಮರ್ಥಿಸಿಕೊಳ್ಳುವುದಕ್ಕೂ ಶಿವಸೇನೆ ಶಾಸಕರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಒಳಗಿಂದೊಳಗೇ ಅಸಮಾಧಾನ, ಬೇಗುದಿ ಇದ್ದರೂ, ಪಕ್ಷದ ಅಧಿಪತಿ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಸುಮ್ಮನಿದ್ದರು. ಆದರೆ, ಈ ರೀತಿಯ ಬೇಗುದಿ ಎಷ್ಟು ದಿನ ಕುದಿಯುತ್ತಿರುತ್ತೆ ಹೇಳಿ. ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ, ಅಧಿಕಾರ ಹೊಂದಿದ್ದ ಕಾಂಗ್ರೆಸ್, ಎನ್ ಸಿಪಿ, ಶಿವಸೇನೆ ಪರಿಷತ್ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದರಿಂದ ಹೆಚ್ಚು ಮಾನಸಿಕವಾಗಿ ಘಾಸಿ ಅನುಭವಿಸಿದ್ದು ಉದ್ಧವ್ ಠಾಕ್ರೆ.
ಏಕನಾಥ್ ಶಿಂಧೆಯ ಕಾರಣಕ್ಕೆ ಪರಿಷತ್ ನಲ್ಲಿ ಸೋಲಾಯಿತು, ಕೆಲವು ತಮ್ಮದೇ ಶಾಸಕರು ಬಿಜೆಪಿಗೆ ಕ್ರಾಸ್ ವೋಟು ಮಾಡಿದ್ದರು ಅನ್ನುವ ಸಿಟ್ಟು, ನೋವು ಉದ್ಧವ್ ಠಾಕ್ರೆಗಿತ್ತು. ಆದರೆ, ಪಕ್ಷದ ಒಳಗಿನ ವೈಮನಸ್ಸು, ಒಳಬೇಗುದಿ ಅರಿತಿದ್ದ ಠಾಕ್ರೆಗೆ ಇದಕ್ಕೇನೂ ಮಾಡಲಾಗದೆ ಚಡಪಡಿಸಿದ್ದರು. ಠಾಕ್ರೆಯ ಅಸಹಾಯಕತೆ, ಅನಾರೋಗ್ಯದಿಂದಾಗಿ ಪ್ರಭಾವ ಕುಂದಿಸಿಕೊಂಡಿದ್ದನ್ನು ಅರಿತಿದ್ದ ಏಕನಾಥ ಶಿಂಧೆ, ಇದೇ ತಕ್ಕ ಸಮಯ ಎಂದುಕೊಂಡು ಒಂದಷ್ಟು ಶಾಸಕರನ್ನು ಜೊತೆ ಸೇರಿಸಿಕೊಂಡು ಗುಜರಾತ್ ಹೋಗಿದ್ದಾರೆ.
ಇದೇ ವೇಳೆ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ದೆಹಲಿಗೆ ತೆರಳಿದ್ದು, ತುರ್ತಾಗಿ ಅಮಿತ್ ಷಾ ಭೇಟಿ ಮಾಡಲು ಮುಂದಾಗಿದ್ದಾರೆ. ರಾಜ್ಯದ ಅರಾಜಕತೆ ಸನ್ನಿವೇಶವನ್ನು ಬಳಸ್ಕೊಳ್ಳಲು ಅನುಮತಿ ಕೇಳಲು ಹೋಗಿದ್ದಾರೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಯಡಿಯೂರಪ್ಪ ಸರಕಾರ ರಚನೆಗೆ ಮುಂದಾಗಿ ಕೈಸುಟ್ಟುಕೊಂಡಿದ್ದ ರೀತಿ ಫಡ್ನವಿಸ್ ಕೂಡ ಒಂದು ಬಾರಿ ಕೈಸುಟ್ಟು ಅವಮಾನ ಅನುಭವಿಸಿದ್ದರು. ಈಗ ಮತ್ತೊಮ್ಮೆ ಅಂಥಹದ್ದೇ ರೀತಿಯ ಪ್ರಯತ್ನ ಆಗಿದ್ದಲ್ಲಿ ಅದಕ್ಕೆ ಅಮಿತ್ ಷಾ ಒಪ್ಪಿಗೆ ನೀಡುವ ಸಾಧ್ಯತೆ ಇಲ್ಲ. ಸರಕಾರ ಬೀಳಿಸಲು ಮುಂದಾದ ಶಾಸಕರ ಸಂಖ್ಯೆ ಅನುಸರಿಸಿ ರಾಜಕೀಯ ದಾಳ ಉರುಳಿಸಲು ಅಮಿತ್ ಷಾ ಮುಂದಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮಹಾರಾಷ್ಟ್ರ ಸರಕಾರ ಬೀಳುವುದಿದ್ದರೂ, ಅದಕ್ಕೆ ಶಿವಸೇನೆಯ ಶಾಸಕರೇ ಎರವಾಗಬೇಕೇ ಹೊರತು ಬಿಜೆಪಿ ಶಾಸಕರ ಕಾರಣಕ್ಕೆ ಅಲ್ಲ.
After the Rajya Sabha elections, the Bharatiya Janata Party (BJP) performed better than Maha Vikas Aghadi (MVA) in the Legislative Council elections as well. Out of the 10 Legislative Council seats in the state, the BJP managed to win all five seats it contested. On the other hand, NCP-Shiv Sena of MVA won two seats each and Congress one seat.This defeat has proved to be a major setback for the ruling government in Maharashtra.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm