ಬಿಜೆಪಿ ವಿರುದ್ಧವೇ ತಿರುಮಂತ್ರ ; ಒಂದು ಕಾಲದ ಬಿಜೆಪಿ ಪಾಲಿನ ಹುಲಿಯನ್ನೇ ರಾಷ್ಟ್ರಪತಿ ಕಣಕ್ಕಿಳಿಸಿದ ವಿಪಕ್ಷಗಳು, ಸಿನ್ಹಾ ನಡೆದು ಬಂದ ದಾರಿಯೇ ರೋಚಕ !

21-06-22 09:18 pm       HK News Desk   ದೇಶ - ವಿದೇಶ

ರಾಷ್ಟ್ರಪತಿ ಸ್ಥಾನಕ್ಕೆ ಅಂತೂ ಬಿಜೆಪಿಯೇತರ ಪಕ್ಷಗಳ ಕಡೆಯಿಂದ ಅಭ್ಯರ್ಥಿ ಫೈನಲ್ ಆಗಿದೆ. ಅಟಲ್ ಬಿಹಾರಿ ವಾಜಪೇಯಿ ಆಪ್ತರಾಗಿದ್ದ, ಮಾಜಿ ಹಣಕಾಸು ಸಚಿವ, ಸದ್ಯ ಬಿಜೆಪಿಯನ್ನು ಕಟುವಾಗಿ ವಿರೋಧಿಸುತ್ತಿರುವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕಣಕ್ಕಿಳಿಸಲು ವಿಪಕ್ಷಗಳು ಮುಂದಾಗಿವೆ.

ನವದೆಹಲಿ, ಜೂನ್ 21: ರಾಷ್ಟ್ರಪತಿ ಸ್ಥಾನಕ್ಕೆ ಅಂತೂ ಬಿಜೆಪಿಯೇತರ ಪಕ್ಷಗಳ ಕಡೆಯಿಂದ ಅಭ್ಯರ್ಥಿ ಫೈನಲ್ ಆಗಿದೆ. ಅಟಲ್ ಬಿಹಾರಿ ವಾಜಪೇಯಿ ಆಪ್ತರಾಗಿದ್ದ, ಮಾಜಿ ಹಣಕಾಸು ಸಚಿವ, ಸದ್ಯ ಬಿಜೆಪಿಯನ್ನು ಕಟುವಾಗಿ ವಿರೋಧಿಸುತ್ತಿರುವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕಣಕ್ಕಿಳಿಸಲು ವಿಪಕ್ಷಗಳು ಮುಂದಾಗಿವೆ.

ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ಸೇರಿದ 18 ಪಕ್ಷಗಳ ನಾಯಕರು, ತೃಣಮೂಲ ಕಾಂಗ್ರೆಸ್ ಸೂಚನೆಯಂತೆ ಯಶವಂತ್ ಸಿನ್ಹಾ ಅವರ ಹೆಸರನ್ನು ಅಂತಿಮಗೊಳಿಸಲು ಒಪ್ಪಿಕೊಂಡಿವೆ. ಬಿಜೆಪಿ ತ್ಯಜಿಸಿ ತೃಣಮೂಲ ಕಾಂಗ್ರೆಸ್ ಸೇರಿದ್ದ ಸಿನ್ಹಾ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ಸೋಮವಾರ ತಮ್ಮ ಹೆಸರು ಕೇಳಿಬರುತ್ತಿದ್ದಂತೆ, ಟ್ವೀಟ್ ಮಾಡಿದ್ದ ಯಶವಂತ ಸಿನ್ಹಾ ತಾವು ರಾಷ್ಟ್ರದ ಮಹತ್ವದ ಜವಾಬ್ದಾರಿಗಾಗಿ ಪಕ್ಷ ತ್ಯಜಿಸಲು ಮುಂದಾಗಿದ್ದೇನೆ ಎನ್ನುವ ಮೂಲಕ ತನ್ನ ಒಪ್ಪಿಗೆ ಸೂಚಿಸಿದ್ದರು.

NCP chief Sharad Pawar test positive for Covid-19 | India News - Times of  India

1937, ನವೆಂಬರ್ 6ರಂದು ಜನಿಸಿದ್ದ ಯಶವಂತ್ ಸಿನ್ಹಾ ಪಾಟ್ನಾದಲ್ಲಿಯೇ ಶಾಲೆ, ಕಾಲೇಜು ಶಿಕ್ಷಣ ಪಡೆದಿದ್ದರು. ಆನಂತರ ಪಾಟ್ನಾ ಯುನಿವರ್ಸಿಟಿಯಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂಎ ಪದವಿ ಗಳಿಸಿದ್ದರು. 1958-60ರಲ್ಲಿ ಎರಡು ವರ್ಷಗಳ ಕಾಲ ರಾಜಕೀಯ ಶಾಸ್ತ್ರ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. 1960ರಲ್ಲಿ ಐಎಎಸ್ ಪೂರೈಸಿದ್ದ ಸಿನ್ಹಾ ಆನಂತರ ವಿವಿಧ ಇಲಾಖೆಗಳಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಬಿಹಾರದಲ್ಲಿ ಹಣಕಾಸು ಇಲಾಖೆಯ ಮುಖ್ಯಾಧಿಕಾರಿ ಮತ್ತು ಕೇಂದ್ರ ವಾಣಿಜ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದರು. 1971ರಲ್ಲಿ ಜರ್ಮನಿಯ ರಾಯಭಾರ ಕಚೇರಿಯಲ್ಲಿ ಮೊದಲ ಸೆಕ್ರಟರಿಯಾಗಿಯೂ ಹುದ್ದೆ ನಿಭಾಯಿಸಿದ್ದರು.

1970ರ ಕಾಲದಲ್ಲಿ ಜಯಪ್ರಕಾಶ್ ನಾರಾಯಣ ಅವರ ಸಾಮಾಜಿಕ ಚಳವಳಿಯಿಂದ ಸಿನ್ಹಾ ಪ್ರಭಾವಿತರಾಗಿದ್ದರು. ಆದರೆ, ಆಗಲೇ ತನ್ನ ಅಧಿಕಾರಿ ಕೆಲಸ ಬಿಟ್ಟು ರಾಜಕೀಯ ಸೇರಿರಲಿಲ್ಲ. 1984ರಲ್ಲಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿ ವಾಜಪೇಯಿ ಜೊತೆ ಕೈಜೋಡಿಸಿದ್ದರು. 1986ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ 88ರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. 89ರಲ್ಲಿ ಪಕ್ಷದ ಜನರಲ್ ಸೆಕ್ರೆಟರಿಯಾಗಿ ನೇಮಕಗೊಂಡಿದ್ದರು. 90-91ರಲ್ಲಿ ಚಂದ್ರಶೇಖರ್ ಸರಕಾರದ ಒಂದು ವರ್ಷದ ಆಳ್ವಿಕೆಯಲ್ಲಿ ಹಣಕಾಸು ಮಂತ್ರಿಯಾಗಿದ್ದರು. ಆಬಳಿಕ 1966ರಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿಯೂ ಕೆಲಸ ಮಾಡಿದ್ದರು. 1999-2004ರ ವಾಜಪೇಯಿ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ ಯಶವಂತ್ ಸಿನ್ಹಾ ವಿಶಿಷ್ಟ ಛಾಪು ಮೂಡಿಸಿದ್ದರು.

Gujarat: PM Modi, BJP chief Amit Shah posters blackened

ವಾಜಪೇಯಿ ಸರಕಾರದ ಬಳಿಕ ಪಕ್ಷದಲ್ಲಿ ನೇಪಥ್ಯಕ್ಕೆ ಸರಿದಿದ್ದ ಯಶವಂತ್ ಸಿನ್ಹಾ ಮೋದಿ- ಅಮಿತ್ ಷಾ ಜೋಡಿಯ ವಿರುದ್ಧ ಸಿಡಿದು ನಿಂತಿದ್ದರು. 2018ರಲ್ಲಿ ಪಕ್ಷದ ಬೆಳವಣಿಗೆಯಿಂದ ಬೇಸತ್ತು ಬಿಜೆಪಿ ತ್ಯಜಿಸಿದ್ದರು. ಇದೇ ವೇಳೆ, ಸಿನ್ಹಾ ಅವರ ಮಗ ಜಯಂತ್ ಸಿನ್ಹಾ ಜಾರ್ಖಂಡ್ ನ ಹಜಾರ್ ಬಾಗ್ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿದ್ದರು. ಆನಂತರ, 2021ರಲ್ಲಿ ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಗೆ ಮೊದಲೇ ಟಿಎಂಸಿ ಸೇರಿದ್ದ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಒಂದು ಕಾಲದಲ್ಲಿ ಬಿಜೆಪಿ ಪಾಲಿನ ಹುಲಿಯಂತಿದ್ದ ನಾಯಕನನ್ನೇ ವಿಪಕ್ಷಗಳು ಈಗ ಬಿಜೆಪಿ ವಿರುದ್ಧವೇ ರಾಷ್ಟ್ರಪತಿ ಸ್ಥಾನದ ಕಣಕ್ಕಿಳಿಸಿದ್ದು ವಾಸ್ತವದ ವಿಡಂಬನೆಯಷ್ಟೇ. 

It is more or less a foregone conclusion that the election for the next President of India on June 18 would swing the BJP’s way. But picking the right candidate was always going to be important for the Opposition as lessons from the consensus-building exercise will be carried to the 2024 election season. And 18 Opposition parties have chosen Yashwant Sinha, former Union minister and close confidante of the late Atal Bihari Vajpayee whose name commands immense respect in the political circles.