ಬ್ರೇಕಿಂಗ್ ನ್ಯೂಸ್
23-06-22 10:22 pm Giridhar Shetty, Political Correspondent ದೇಶ - ವಿದೇಶ
ನವದೆಹಲಿ, ಜೂನ್ 23: ಒಂದು ಕಲ್ಲು, ಎರಡು ಹಕ್ಕಿ ಅನ್ನೋದು ಮಾಮೂಲಿ ನಾಣ್ಣುಡಿ. ಆದರೆ, ಬಿಜೆಪಿ ಈ ನಾಣ್ಣುಡಿಯನ್ನು ಒಂದು ಕಲ್ಲು, ನಾಲ್ಕಾರು ಹಕ್ಕಿ ಅನ್ನುವಂತೆ ಬದಲಿಸಿಕೊಂಡಿದೆ. ಹೌದು.. ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು ಮಹಿಳೆ ಅನ್ನುವ ಗುರಾಣಿಯನ್ನು ಮುಂದಿಟ್ಟು, ಹಿಂದಿನಿಂದಲೂ ಕಾಂಗ್ರೆಸ್ ಪರವಾಗಿದ್ದ ಮಧ್ಯ ಮತ್ತು ಪೂರ್ವ ಭಾರತದಲ್ಲಿ ನಿರ್ಣಾಯಕವಾಗಿರುವ ಬುಡಕಟ್ಟು ಜನರ ಬೆಂಬಲ ಗಳಿಸಲು ಬಿಜೆಪಿ ಹೊರಟಿದೆ. ಜಾರ್ಖಂಡ್, ಛತ್ತೀಸ್ ಗಢ, ಬಿಹಾರ, ಒಡಿಶಾ, ಗುಜರಾತ್, ಮಧ್ಯಪ್ರದೇಶ, ಈಶಾನ್ಯ, ಪೂರ್ವಾಂಚಲ ರಾಜ್ಯಗಳಲ್ಲಿ ಬಹುಸಂಖ್ಯೆಯಲ್ಲಿರುವ ಬುಡಕಟ್ಟು ಜನರಲ್ಲಿ ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಸ್ಥಾನಕ್ಕೆ ತಮ್ಮದೇ ಸಮುದಾಯದ ಮಹಿಳೆಯೊಬ್ಬರನ್ನು ಏರಿಸಿದ್ದೇವೆಂಬ ಹೆಗ್ಗಳಿಕೆಯನ್ನು ಬಿಜೆಪಿ ಹೆಗಲೇರಿಸಿಕೊಳ್ಳಲು ಮುಂದಾಗಿದೆ. ಆಮೂಲಕ ಎದುರಾಳಿ ಕಾಂಗ್ರೆಸ್ ಮಾತ್ರವಲ್ಲ, ವಿರೋಧಿ ಪಕ್ಷಗಳ ಪಾಲಿಗೆ ಅತ್ತ ನುಂಗಲೂ ಆಗದೆ, ಉಗುಳಲೂ ಆಗದ ಸಂದಿಗ್ಧ ಸ್ಥಿತಿಯನ್ನು ಬಿಜೆಪಿ ತಂದಿಟ್ಟಿದೆ.
ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಒಡಿಶಾ ಮೂಲದ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಹೆಸರು ಹೊರಬೀಳುತ್ತಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಒಡಿಶಾ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಬಿಜು ಪಟ್ನಾಯಕ್ ಅಂತೂ, ವಿರೋಧಿ ಪಕ್ಷಗಳು ತಮ್ಮ ಅಭ್ಯರ್ಥಿಯನ್ನೇ ನಿಲ್ಲಿಸಬಾರದು ಎಂಬ ಹೊಸ ಅಹವಾಲನ್ನು ಮುಂದಿಟ್ಟಿದ್ದಾರೆ.
ಹಾಗೆ ನೋಡಿದರೆ, ವಾಜಪೇಯಿ ಕಾಲದಿಂದಲೂ ಎನ್ ಡಿಎ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿ ಮಾಡುವ ಸಂದರ್ಭದಲ್ಲಿ ಇಂಥಹದ್ದೇ ಹಿಡನ್ ರಾಜಕೀಯವನ್ನೇ ದಾಳವಾಗಿಸಿತ್ತು. 2002ರಲ್ಲಿ ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಎತ್ತಿದ್ದ ಅಲ್ಪಸಂಖ್ಯಾತ ವ್ಯಕ್ತಿ ಅಬ್ದುಲ್ ಕಲಾಂ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿತ್ತು. ಆನಂತರ, 2017ರಲ್ಲಿ ಅಂಥಹದ್ದೇ ಅವಕಾಶ ಬಂದಾಗ ಬಿಹಾರ ರಾಜ್ಯಪಾಲ, ದಲಿತ ಸಮುದಾಯದ ರಾಮನಾಥ ಕೋವಿಂದ್ ಅವರನ್ನು ಕಣಕ್ಕಿಳಿಸಿತ್ತು. ಈ ಬಾರಿ ಮತ್ತೊಂದು ದಾಳ ಉರುಳಿಸಿದ್ದು, ಉತ್ತರ ಭಾರತದಲ್ಲಿ ಆಡಳಿತ ವಿರೋಧಿ ಅಲೆಯ ನಡುವೆಯೇ ಬಹುತೇಕ ರಾಜ್ಯಗಳಲ್ಲಿ ಪ್ರಾಬಲ್ಯ ಇರುವ ಬುಡಕಟ್ಟು ಸಮುದಾಯದ ಮಹಿಳೆಯನ್ನು ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿದೆ.
ಭಾರತದಲ್ಲಿ ಈವರೆಗಿನ 15 ರಾಷ್ಟ್ರಪತಿಗಳಲ್ಲಿ ಆ ಹುದ್ದೆಗೇರಿದ್ದು ಒಬ್ಬರು ಮಹಿಳೆ ಮಾತ್ರ. ಯುಪಿಎ ಕಾಲದಲ್ಲಿ ಪ್ರತಿಭಾ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಬುಡಕಟ್ಟು ಸಮುದಾಯದ ಯಾವುದೇ ವ್ಯಕ್ತಿಯೂ ದೇಶದ ಅತ್ಯುನ್ನತ ಹುದ್ದೆಗೇರಿದ್ದೇ ಇಲ್ಲ. ಇದೀಗ ಬುಡಕಟ್ಟು ಸಮುದಾಯದ ಮಹಿಳೆಯನ್ನು ಆ ಸ್ಥಾನಕ್ಕೇರಿಸಲು ಎನ್ ಡಿಎ ಮುಂದಾಗಿದ್ದರೆ ಅದರ ಹಿಂದೆ ದೊಡ್ಡ ಹಿಡನ್ ಲಾಭವನ್ನೆತ್ತುವ ಉದ್ದೇಶವೂ ಅಡಗಿದೆ. ಅದಲ್ಲದೆ, ಪ್ರತಿಪಕ್ಷ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಬಹುತೇಕ ಎನ್ ಡಿಎ ವಿರೋಧಿ ಪಕ್ಷಗಳ ಮತಗಳನ್ನೇ ಒಡೆಯಲು ತಂತ್ರ ಹೆಣೆದಿದೆ. ಹಾಗಾಗಿ ಪ್ರತಿಪಕ್ಷಗಳು ಒಂದು ಲೆಕ್ಕ ಹಾಕಿದರೆ, ಬಿಜೆಪಿ ಎಲ್ಲದಕ್ಕೂ ದೂರಗಾಮಿ ಲೆಕ್ಕವನ್ನೇ ಮುಂದಿಡುತ್ತದೆ. ಒಂದೇ ಕಲ್ಲಿನಲ್ಲಿ ನಾಲ್ಕಾರು ಹಕ್ಕಿಗಳನ್ನು ಒಡೆವ ತಂತ್ರಗಾರಿಕೆ.
ಎನ್ ಡಿಎ ಗೆಲ್ಲಲು 20 ಸಾವಿರ ಮತ ಬೇಕು
ರಾಷ್ಟ್ರಪತಿ ಸ್ಥಾನದ ಚುನಾವಣೆಯಲ್ಲಿ ಎಲ್ಲ ಸಂಸದರು ಮತ್ತು ದೇಶದ ಎಲ್ಲ ರಾಜ್ಯಗಳ ಶಾಸಕರಿಗೆ ಮತದಾನದ ಅವಕಾಶ ಇರುತ್ತದೆ. ಮತಗಳ ಮೌಲ್ಯವನ್ನು ಲೆಕ್ಕ ಹಾಕಿದರೆ, ಒಟ್ಟು 10.86 ಲಕ್ಷ ಮತಗಳ ಪೈಕಿ ಎನ್ ಡಿಎ ಪರವಾಗಿರುವುದು 5.23 ಲಕ್ಷ. ಹೀಗಾಗಿ ಎನ್ ಡಿಎ ಅಭ್ಯರ್ಥಿ ಬಹುಮತ ಪಡೆಯಲು 20 ಸಾವಿರಕ್ಕೂ ಹೆಚ್ಚು ಮತಗಳ ಅಗತ್ಯ ಇದೆ. ಇದಕ್ಕಾಗಿ ಯಾರೋ ಒಬ್ಬರನ್ನು ಕಣಕ್ಕಿಳಿಸಿ, ಸ್ಪರ್ಧೆ ಒಡ್ಡುವ ಲೆಕ್ಕಾಚಾರವನ್ನು ಬದಿಗಿಟ್ಟು ಇದನ್ನೇ ರಾಜಕೀಯ ದಾಳವಾಗಿಸಿ ಎದುರಾಳಿ ಮತಗಳನ್ನೇ ಒಡೆಯುವುದು ಬಿಜೆಪಿ ಸಂಚು. ಬಿಹಾರದ ಜೆಡಿಯು, ಎನ್ ಡಿಎ ಮೈತ್ರಿಕೂಟದ ಒಳಗೇ ಇರೋದ್ರಿಂದ ಅವರ ಬಹಿರಂಗ ಬೆಂಬಲ ಸಹಜ ಎನ್ನಬಹುದು. ಆದರೆ ಒಡಿಶಾದ ಬಿಜೆಡಿ ಯಾವ ಮೈತ್ರಿಕೂಟಕ್ಕೂ ಸೇರದೇ ಉಳಿದುಕೊಂಡಿದೆ. ಹಿಂದೆಲ್ಲಾ ರಾಷ್ಟ್ರೀಯ ವಿಚಾರಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರೂ, ಮೈತ್ರಿಕೂಟದಿಂದ ಹೊರಬಂದಿತ್ತು. ಈಗ ಅದೇ ರಾಜ್ಯದ ಬುಡಕಟ್ಟು ಮಹಿಳೆಯನ್ನು ಅಭ್ಯರ್ಥಿಯಾಗಿಸಿದ ಬೆನ್ನಲ್ಲೇ ಒಟ್ಟು 31,705 ಮತಗಳನ್ನು ಹೊಂದಿರುವ ಪಟ್ನಾಯಕ್ ಅವರ ಬಿಜೆಡಿ ಬಹಿರಂಗ ಬೆಂಬಲವನ್ನೇ ಘೋಷಿಸಿದೆ. ಯಾಕಂದ್ರೆ, ಒಡಿಶಾದಲ್ಲಿ ಕೆಲವು ಕಡೆ ಬುಡಕಟ್ಟು ಜನರದ್ದೇ ಪ್ರಾಬಲ್ಯ ಇದೆ.
ಜಾರ್ಖಂಡ್ ಸೊರೇನ್ ಪಾಲಿಗೆ ಇರಿಸುಮುರಿಸು
ಜಾರ್ಖಂಡಿನಲ್ಲಿ ಕಾಂಗ್ರೆಸ್ ಬೆಂಬಲದಲ್ಲಿ ಜೆಎಂಎಂ ಆಡಳಿತ ನಡೆಸುತ್ತಿದೆ. ಬುಡಕಟ್ಟು ಸಮುದಾಯದ ಹೇಮಂತ್ ಸೊರೇನ್ ಮುಖ್ಯಮಂತ್ರಿ. ಮೇಲಾಗಿ ರಾಜ್ಯದಲ್ಲಿ ಬುಡಕಟ್ಟು ವರ್ಗದ ಜನರೇ ಹೆಚ್ಚಿದ್ದಾರೆ. ರಾಜಕೀಯವಾಗಿ ವಿರೋಧಿ ಎನಿಸಿರುವ ಮೈತ್ರಿಕೂಟದ ಅಭ್ಯರ್ಥಿಯನ್ನು ಬಹಿರಂಗ ಬೆಂಬಲಿಸುವಂತೆಯೂ ಇಲ್ಲ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ಪಕ್ಷದ ಬಹಳಷ್ಟು ಸಂಸದರು ಮತ್ತು ಶಾಸಕರು ಬುಡಕಟ್ಟು ವರ್ಗದವರಿದ್ದಾರೆ. ಅವರ ಮತಗಳು ಮಹಿಳೆಯ ಪರ ಚದುರಿ ಹೋಗದು ಅನ್ನಲಾಗದು. ಯಾಕಂದ್ರೆ, ಜಾರ್ಖಂಡ್ ಸಿಎಂ ಸೊರೇನ್ ಮತ್ತು ದ್ರೌಪದಿ ಮುರ್ಮು ಸಂತಾಲಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಇದಲ್ಲದೆ, ಸೊರೇನ್ ಮತ್ತವರ ವರ್ಗದ ಸಮುದಾಯದ ಜನರು ಒಡಿಶಾದ ದ್ರೌಪದಿ ಮುರ್ಮು ಅವರ ತಾಯ್ನಾಡು ಮಯೂರ್ ಭಂಜ್ ಜಿಲ್ಲೆಯ ಜನರ ಜೊತೆ ಕೌಟುಂಬಿಕ ಸಂಬಂಧವನ್ನು ಹೊಂದಿದ್ದಾರೆ. ದ್ರೌಪದಿ ಆಯ್ಕೆ ಮೂಲಕ ಬಿಜೆಪಿ ಇವರೆಡೂ ರಾಜ್ಯಗಳಲ್ಲಿ ಜನರ ಪ್ರೀತಿ ಗಳಿಸುವ ದಾಳ ಉರುಳಿಸಿದೆ.
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಪಾಲಿಗೆ ಛಾಟಿ
ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಸರಕಾರ ಹೊಂದಿದೆ. ಆದರೆ, ರಾಷ್ಟ್ರಪತಿ ಸ್ಥಾನದ ಬುಡಕಟ್ಟು ದಾಳ ಅಲ್ಲಿನ ಕಾಂಗ್ರೆಸಿಗರನ್ನೇ ಎರಡು ಹೋಳಾಗುವಂತೆ ಮಾಡಿದೆ. ಛತ್ತೀಸ್ ಗಢದಲ್ಲಿ ಮೂವತ್ತು ಶೇಕಡಾ ಬುಡಕಟ್ಟು ವರ್ಗದ ಜನರಿದ್ದಾರೆ. ಅಷ್ಟೇ ಸಂಖ್ಯೆಯ ಶಾಸಕ, ಸಂಸದರೂ ಇದ್ದಾರೆ. ಇವರೆಲ್ಲ ಕಾಂಗ್ರೆಸ್ ಅಭ್ಯರ್ಥಿ ಯಶವಂತ್ ಸಿನ್ಹಾ ಪರವಾಗಿ ಓಟು ಹಾಕುತ್ತಾರೆ ಅನ್ನುವುದನ್ನು ನಿರೀಕ್ಷಿಸುವುದು ಕಷ್ಟ. ಬಿಜೆಪಿ ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರ ಕಳಕೊಂಡ ಬಳಿಕ ಈಗ ಮತ್ತೆ ಬುಡಕಟ್ಟು ದಾಳ ಉರುಳಿಸಿದೆ.
ಮಧ್ಯಪ್ರದೇಶದಲ್ಲೂ ಬುಡಕಟ್ಟು ನಿರ್ಣಾಯಕ
ಮಧ್ಯಪ್ರದೇಶದಲ್ಲಿ 21 ಶೇಕಡಾ ಬುಡಕಟ್ಟು ವರ್ಗದ ಜನರಿದ್ದಾರೆ. ಅಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ, ವಿರೋಧ ಪಕ್ಷ ಕಾಂಗ್ರೆಸಿನ ಶಾಸಕ, ಸಂಸದರು ಛತ್ತೀಸ್ ಗಢದ ರೀತಿಯಲ್ಲೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಬಂಡಾಯ ಶಾಸಕರನ್ನು ಬಳಸ್ಕೊಂಡೇ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಇದೀಗ ಬುಡಕಟ್ಟು ವರ್ಗದ ಶಾಸಕರು, ಸಂಸದರ ಮತಗಳನ್ನು ರಾಷ್ಟ್ರಪತಿ ಸ್ಥಾನದ ಆಯ್ಕೆಯಲ್ಲೂ ಕಬಳಿಸಲು ಬಿಜೆಪಿ ಮುಂದಾಗಿದೆ.
ಆಂಧ್ರ, ಈಶಾನ್ಯದಲ್ಲೂ ಬುಡಕಟ್ಟು ಪರ ಲಾಬಿ
ಆಂಧ್ರಪ್ರದೇಶದಲ್ಲಿ ವೈಎಸ್ಸಾರ್ ಕಾಂಗ್ರೆಸ್ ಆಡಳಿತದಲ್ಲಿದ್ದು, 45,800 ಮತಗಳನ್ನು ಹೊಂದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಬಹುತೇಕ ಎನ್ ಡಿಎ ಅಭ್ಯರ್ಥಿಯ ಕಡೆಗೇ ವೈಎಸ್ಸಾರ್ ಕಾಂಗ್ರೆಸ್ ಒಲವು ತೋರುವ ಸಾಧ್ಯತೆ ಹೆಚ್ಚು. ಇದೇ ರೀತಿಯ ವಾತಾವರಣ ಈಶಾನ್ಯ ರಾಜ್ಯಗಳ ಸ್ಥಿತಿ ಇದೆ. ಅಲ್ಲಿನ ನಾಲ್ಕು ರಾಜ್ಯಗಳಲ್ಲಿ ಒಟ್ಟು ಜನಸಂಖ್ಯೆಯ 65ರಿಂದ 95 ಶೇಕಡಾ ಬುಡಕಟ್ಟು ವರ್ಗದ ಜನರಿದ್ದಾರೆ. ಅಲ್ಲಿನ ಶಾಸಕರು, ಸಂಸದರು ತಮ್ಮದೇ ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಸ್ಥಾನಕ್ಕೇರಿಸಲು ಓಟ್ ಹಾಕುವ ನಿರೀಕ್ಷೆ ಬಿಜೆಪಿಯದ್ದು. ಇನ್ನು ಕಾಂಗ್ರೆಸ್ ಆಳ್ವಿಕೆಯ ರಾಜಸ್ಥಾನದಲ್ಲೂ 13.5 ಶೇಕಡಾ ಬುಡಕಟ್ಟು ವರ್ಗದ ಮತದಾರರಿದ್ದಾರೆ. ಇದೇ ವರ್ಷಾಂತ್ಯದಲ್ಲಿ ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ಅಸೆಂಬ್ಲಿಗೆ ಚುನಾವಣೆ ನಡೆಯಲಿದ್ದು, 2024ರ ಲೋಕಸಭಾ ಚುನಾವಣೆ ಮುನ್ನವೇ ಈ ಭಾಗದಲ್ಲಿ ಬುಡಕಟ್ಟು ವರ್ಗದ ಜನರನ್ನು ಓಲೈಸುವ ಕೆಲಸವನ್ನು ಬಿಜೆಪಿ ಮಾಡಿದೆ.
ಗುಜರಾತಿನಲ್ಲೂ ಆಡಳಿತ ವಿರೋಧಿ ಅಲೆ
ಇವೆಲ್ಲದಕ್ಕಿಂತಲೂ ಪ್ರಧಾನಿ ಮೋದಿಯ ರಾಜ್ಯ ಗುಜರಾತಿನಲ್ಲೂ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಅಲ್ಲಿಯೂ 14 ಶೇಕಡಾ ಬುಡಕಟ್ಟು ವರ್ಗದ ಜನರಿದ್ದಾರೆ. ಸುದೀರ್ಘ ಕಾಲದ ಬಿಜೆಪಿ ಆಡಳಿತದಿಂದಾಗಿ ಗುಜರಾತಿನಲ್ಲಿ ಆಡಳಿತ ವಿರೋಧಿ ಅಲೆ ಇದೆ. ಅದನ್ನು ಹಿಮ್ಮೆಟ್ಟಿಸುವುದೂ ಬಿಜೆಪಿಯ ದೊಡ್ಡ ಗುರಿಯಾಗಿದೆ. ಒಟ್ಟಿನಲ್ಲಿ 2024ರ ಚುನಾವಣೆ ಮೊದಲು ಬಿಜೆಪಿ ಪ್ರಬಲವಾಗಿರುವ ಮಧ್ಯಭಾರತದಲ್ಲಿ ಜನಮನ ಗೆಲ್ಲಲು ರಾಷ್ಟ್ರಪತಿ ಚುನಾವಣೆಯನ್ನು ಅಸ್ತ್ರವಾಗಿಸಿದೆ. ಬುಡಕಟ್ಟು ಮಹಿಳೆ ಅನ್ನುವ ಗುರಾಣಿಯನ್ನು ಮುಂದಿಟ್ಟು ಎದುರಾಳಿ ಕಾಂಗ್ರೆಸನ್ನು ಮಣ್ಣು ಮುಕ್ಕಿಸೋದು ಒಂದೆಡೆಯಾದರೆ, ನಗರ ಕೇಂದ್ರಿತ ಬಿಜೆಪಿಯನ್ನು ಹಳ್ಳಿಗಾಡಿನ ಜನರ ಮನದಾಳಕ್ಕೆ ಇಳಿಸಲು ದೇಶದ ಅತ್ಯುನ್ನತ ಹುದ್ದೆಯನ್ನೇ ರಾಜಕೀಯ ದಾಳವಾಗಿಸಿದ್ದು ಮತ್ತೊಂದು ನಡೆ.
The July 18 presidential election was an opportunity for India's fragmented political opposition to consolidate and expand its base across regions. But it has seemingly failed to rise to the occasion adequately.In 2002, the BJP-led ruling National Democratic Alliance (NDA) fielded India's 'Missile Man', APJ Abdul Kalam (a Muslim). During the last election in 2017, the coalition picked then-Bihar Governor Ram Nath Kovind (a Dalit). Given the NDA's penchant for political import and candidates that mean support even from some of the opposition constituents, a tribal face was a strong possibility this time. And the opposition was expected to be politically astute.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm