ದ್ರೌಪದಿ ಅಧ್ಯಕ್ಷೆಯಾದರೆ, ಪಾಂಡವರು, ಕೌರವರು ಯಾರು? ಪ್ರಶ್ನೆ ಮಾಡಿದ್ದ ರಾಮಗೋಪಾಲ್ ವರ್ಮಾ ವಿರುದ್ಧ ಕೇಸು ದಾಖಲು

25-06-22 03:46 pm       HK News Desk   ದೇಶ - ವಿದೇಶ

ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಚಿತ್ರ ನಿರ್ದೇಶಕ ರಾಮಗೋಪಾಲ್ ವರ್ಮಾ ವಿರುದ್ಧ ತೆಲಂಗಾಣ ಬಿಜೆಪಿ ನಾಯಕ ಜಿ.ನಾರಾಯಣ ರೆಡ್ಡಿ ಪೊಲೀಸ್ ದೂರು ನೀಡಿದ್ದಾರೆ.

ಹೈದರಾಬಾದ್, ಜೂನ್ 25: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಚಿತ್ರ ನಿರ್ದೇಶಕ ರಾಮಗೋಪಾಲ್ ವರ್ಮಾ ವಿರುದ್ಧ ತೆಲಂಗಾಣ ಬಿಜೆಪಿ ನಾಯಕ ಜಿ.ನಾರಾಯಣ ರೆಡ್ಡಿ ಪೊಲೀಸ್ ದೂರು ನೀಡಿದ್ದಾರೆ. ಬಿಜೆಪಿ ನಾಯಕರ ಆಕ್ರೋಶ ಕೇಳಿಬರುತ್ತಿದ್ದಂತೆ ರಾಮಗೋಪಾಲ್ ತನ್ನ ಟ್ವಿಟರ್ ಖಾತೆಯಲ್ಲಿ ಕ್ಷಮೆಯನ್ನೂ ಕೇಳಿದ್ದಾರೆ.

ಜೂನ್ 22ರಂದು ಟ್ವೀಟ್ ಮಾಡಿದ್ದ ರಾಮಗೋಪಾಲ್ ವರ್ಮಾ, ದ್ರೌಪದಿ ಅಧ್ಯಕ್ಷರಾದರೆ, ಇಲ್ಲಿ ಪಾಂಡವರು ಯಾರು ? ಅದಕ್ಕಿಂತಲೂ ಮುಖ್ಯವಾಗಿ ಕೌರವರು ಯಾರು ? ಪಾಂಡವರು ಮತ್ತು ಕೌರವರು ಹಸ್ತಿನಾಪುರದ ರಾಜ ಕುಟುಂಬಕ್ಕೆ ಸೇರಿದವರಾಗಿದ್ದು, ಮಹಾಭಾರತದಲ್ಲಿ ದ್ರೌಪದಿಯನ್ನು ಪಾಂಡವರು ಮದುವೆಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

Unemployed suffering under TRS rule: BJP

ಬಿಜೆಪಿ ನಾಯಕ ನಾರಾಯಣ ರೆಡ್ಡಿ ತಮ್ಮ ದೂರಿನಲ್ಲಿ ಹಿರಿಯ ರಾಜಕಾರಣಿ ಮತ್ತು ರಾಜ್ಯಪಾಲರಾಗಿ ಕರ್ತವ್ಯ ನಿಭಾಯಿಸಿರುವ ದ್ರೌಪದಿ ಮುರ್ಮು ಬಗ್ಗೆ ವರ್ಮಾ ಅವಹೇಳನಕಾರಿ ಮಾತನಾಡಿದ್ದಾರೆ. ಮಹಿಳೆಯನ್ನು ಅಗೌರವ ಸೂಚಿಸುವ ರೀತಿ ವರ್ತಿಸಿದ್ದಾರೆ. ಎಸ್ಸಿ-ಎಸ್ಟಿ ಕಾಯ್ದೆಯಡಿ ವರ್ಮಾ ವಿರುದ್ಧ ಪ್ರಕರಣ ದಾಖಲಿಸಬೇಕು. ಆರೋಪಿ ವಿರುದ್ಧ ಕಠಿಣ ಶಿಕ್ಷೆ ಜಾರಿಗೊಳಿಸಬೇಕು ಎಂದು ಹೈದರಾಬಾದಿನ ಅಬಿದ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Profile | The importance of being Droupadi Murmu - The Hindu

ಈ ಬಗ್ಗೆ ಮತ್ತೆ ಟ್ವೀಟ್ ಮಾಡಿರುವ ರಾಮಗೋಪಾಲ್ ವರ್ಮಾ, ತಾನೇನೂ ಯಾವುದೇ ದುರುದ್ದೇಶ ಇಟ್ಟುಕೊಂಡು ಈ ಮಾತು ಹೇಳಿಲ್ಲ. ತಮಾಷೆಯಾಗಿ ಹೇಳಿದ್ದಷ್ಟೇ. ಮಹಾಭಾರತದಲ್ಲಿ ದ್ರೌಪದಿ ನನ್ನ ಫೇವರಿಟ್ ಪಾತ್ರ. ಯಾವುದೇ ಜನರ ಭಾವನೆಗಳಿಗೆ ಹಾನಿಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಬಾಲಿವುಡ್ ನಟ ಗುಲ್ಶನ್ ದೇವಯ್ಯ ಟ್ವೀಟ್ ಮಾಡಿ, ದ್ರೌಪದಿ ಪ್ರಕರಣದಲ್ಲಿ ದುರ್ಯೋಧನ ಯಾರು? ಮಹಾಭಾರತದಲ್ಲಿ ದುರ್ಯೋಧನ ಪಾತ್ರವೂ ಮುಖ್ಯ. ಆತನ ಸೋದರ ದುಶ್ಶಾಸನ ದ್ರೌಪದಿಯ ಸೀರೆ ಎಳೆದಿದ್ದ ಎಂದು ಕುಟುಕಿದ್ದಾರೆ.

Bharatiya Janata Party leader from Telangana G Narayan Reddy has reportedly lodged a complaint with the Abids police station against filmmaker Ram Gopal Varma for his allegedly derogatory tweets on the Presidential election nominee, Droupadi Murmu. The Hyderabad police on Friday said they will soon register a criminal case against him.