ಪರಿಸರ ಸೂಕ್ಷ್ಮ ವಲಯದ ನೆಪ ; ವಯನಾಡ್ ರಾಹುಲ್ ಕಚೇರಿಗೆ ನುಗ್ಗಿ ಎಸ್ಎಫ್ಐ ಕಾರ್ಯಕರ್ತರ ದಾಂಧಲೆ, ಕಚೇರಿ ಸಿಬಂದಿಗೆ ಹಲ್ಲೆ

25-06-22 04:39 pm       HK News Desk   ದೇಶ - ವಿದೇಶ

ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡ್ ಸಂಸತ್ ಕ್ಷೇತ್ರದ ಕಚೇರಿಗೆ ನುಗ್ಗಿ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕಚೇರಿಯ ಸಿಬಂದಿಗೆ ಹಲ್ಲೆಗೈದು ಪೀಠೋಪಕರಣಗಳನ್ನು ಪುಡಿ ಮಾಡಿದ್ದಾರೆ.

ವಯನಾಡ್, ಜೂನ್ 25: ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡ್ ಸಂಸತ್ ಕ್ಷೇತ್ರದ ಕಚೇರಿಗೆ ನುಗ್ಗಿ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕಚೇರಿಯ ಸಿಬಂದಿಗೆ ಹಲ್ಲೆಗೈದು ಪೀಠೋಪಕರಣಗಳನ್ನು ಪುಡಿ ಮಾಡಿದ್ದಾರೆ. ಘಟನೆ ಸಂಬಂಧಿಸಿ ಪೊಲೀಸರು ಹತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ರಾಷ್ಟ್ರೀಯ ಉದ್ಯಾನವನ, ಸಂರಕ್ಷಿತ ಪ್ರದೇಶಗಳ ಸುತ್ತ ಇರುವ ಒಂದು ಕಿಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಸುಪ್ರೀಂ ಕೋರ್ಟ್ ಘೋಷಣೆ ಮಾಡಿದ್ದನ್ನು ವಿರೋಧಿಸಿ ರಾಹುಲ್ ಗಾಂಧಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ವಯನಾಡಿನಲ್ಲಿ ರಾಷ್ಟ್ರೀಯ ಸಂರಕ್ಷಿತ ಪ್ರದೇಶದ ಸುತ್ತಮುತ್ತ ಹಲವಾರು ಮನೆಗಳು, ಜನವಸತಿ ಪ್ರದೇಶಗಳಿದ್ದು, ಈ ತೀರ್ಪಿನಿಂದ ತಮಗೆ ತೊಂದರೆಯಾಗುತ್ತೆ ಎನ್ನುವ ಭಯದಿಂದ ಪ್ರತಿಭಟನೆ ನಡೆಸಿದ್ದಾರೆ.

राहुल गांधी के वायनाड सांसद ऑफिस में तोड़फोड़, SFI के 8 कार्यकर्ता हिरासत  में - rahul gandhi''''s wayanad mp''''s office vandalized, 8 sfi workers  detained

Rahul Gandhi's Wayanad office vandalised, 8 SFI workers detained

Kerala 19 arrested for vandalizing Rahul Gandhi Wayanad office all accused  are activists of the ruling party student organization SFI. 19 arrested for  vandalizing Rahul Gandhi's Wayanad office - All Sarkari Naukari

Rahul Gandhi's Wayanad office vandalised: 19 SFI arrested in Kerala | India  News – India TV

IYC protests in Delhi demanding arrest of SFI members who vandalised Rahul  Gandhi's Wayanad office, IYC protests Delhi, arrest of SFI members, vandalised  Rahul Gandhi's Wayanad office, kerala

Rahul Gandhi: The rise of India's political scion - BBC News

ವಯನಾಡ್ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಈ ಬಗ್ಗೆ ಕ್ಷೇತ್ರವನ್ನು ಪ್ರತಿನಿಧಿಸುವ ರಾಹುಲ್ ಗಾಂಧಿ ಧ್ವನಿ ಎತ್ತಬೇಕು ಎಂದು ಕಮ್ಯುನಿಸ್ಟ್ ಪರ ಸಂಘಟನೆಗಳು ಒತ್ತಾಯಿಸುತ್ತಿವೆ. ರಾಹುಲ್ ಗಾಂಧಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಈ ರೀತಿಯ ನಿರ್ಬಂಧವನ್ನು ತೆರವುಗೊಳಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ರಾಹುಲ್ ಗಾಂಧಿ ನಮ್ಮ ನೋವಿಗೆ ಸ್ಪಂದಿಸಿಲ್ಲ ಎಂದು ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಕಾರ್ಯಕರ್ತರು ಶುಕ್ರವಾರ ರಾಹುಲ್ ಗಾಂಧಿಯ ಸಂಸತ್ ಸದಸ್ಯರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಆಗಸ್ಟಿನ್ ಎಂಬ ಸಿಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ.

Prime Minister of India

ಪರಿಸರ ಸೂಕ್ಷ್ಮ ಪ್ರದೇಶ ಎಂದು 2011ರಲ್ಲಿ ಆದೇಶ ಆಗಿದ್ದು, ಆನಂತರ ಇಷ್ಟೂ ವರ್ಷಗಳಲ್ಲಿ ಸ್ಥಳೀಯರು ಹಲವು ಸಂದರ್ಭಗಳಲ್ಲಿ ಪ್ರತಿಭಟನೆ ನಡೆಸುತ್ತ ಬಂದಿದ್ದರು. ಹೀಗೆ ಗುರುತಿಸಲ್ಪಟ್ಟ ಪ್ರದೇಶ ಜನನಿಬಿಡವಾಗಿದ್ದು ಜನರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಸಾಧ್ಯವಾಗದೇ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ಭಾಗದಲ್ಲಿ ಗಣಿಗಾರಿಕೆ, ಅಭಿವೃದ್ಧಿ ಚಟುವಟಿಕೆ ನಡೆಸುವುದಕ್ಕೆ ತೊಂದರೆಯಾಗಿದ್ದು, ಇದೇ ರೀತಿಯ ಸಮಸ್ಯೆ ಅನುಭವಿಸುತ್ತಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಇಡುಕ್ಕಿ, ವಯನಾಡ್, ಪತ್ತನಂತಿಟ್ಟ, ಕೊಟ್ಟಾಯಂ ಜಿಲ್ಲೆಗಳ ಜನರು ಹರತಾಳ ನಡೆಸುತ್ತಿದ್ದಾರೆ. 

The Students' Federation of India (SFI) took out a march and vandalised Congress MP Rahul Gandhi's office in Wayanad, Kerala. They barged into the office and destroyed pieces of equipment inside.The protest was carried out against Rahul Gandhi for allegedly not interfering in the Supreme Court order on the eco-sensitive zone (ESZ). After the protest, Congress stated that his office staff was also injured in the clash.