19 ವರ್ಷ ಮೋದಿ ವಿಷ ಕಂಠನಂತೆ ನೋವು ನುಂಗಿಕೊಂಡು ಬಂದಿದ್ದಾರೆ, ಕಡೆಗೂ ಗೆದ್ದಿದ್ದಾರೆ ; ಕ್ಲೀನ್ ಚಿಟ್ ಬಗ್ಗೆ ಅಮಿತ್ ಷಾ

25-06-22 10:35 pm       HK News Desk   ದೇಶ - ವಿದೇಶ

​​​​2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿರುವುದನ್ನು ಗೃಹ ಸಚಿವ ಅಮಿತ್ ಷಾ ವಿಶೇಷ ರೀತಿಯಲ್ಲಿ ವರ್ಣಿಸಿದ್ದಾರೆ.

ನವದೆಹಲಿ, ಜೂನ್ 25: 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿರುವುದನ್ನು ಗೃಹ ಸಚಿವ ಅಮಿತ್ ಷಾ ವಿಶೇಷ ರೀತಿಯಲ್ಲಿ ವರ್ಣಿಸಿದ್ದಾರೆ. ಸತ್ಯ ಯಾವತ್ತೂ ಹೊಳೆಯುವ ಚಿನ್ನದಂತೆ ಮಿರ ಮಿರನೆ ಹೊಳೆಯುತ್ತಿರುತ್ತದೆ. ಕಡೆಗೂ ಸತ್ಯ ಹೊರಬಂದಿದೆ, ಚಿನ್ನದ ಹೊಳಪಿನಂತೆ ಮೋದಿ ಮಿರುಗಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.

ರಾಜಕೀಯ ವಿರೋಧಿಗಳು ಏನೆಲ್ಲ ಆರೋಪಗಳನ್ನು ಮಾಡಿದರೂ, ಮೋದಿ 19 ವರ್ಷಗಳಿಂದ ವಿಷಕಂಠನ ರೀತಿ ಎಲ್ಲವನ್ನೂ ನುಂಗಿಕೊಂಡೇ ಬಂದಿದ್ದಾರೆ. ವಿಷವನ್ನೆಲ್ಲ ಗಂಟಲಿನಲ್ಲಿ ಕಟ್ಟಿಕೊಂಡು ನಡೆದು ಬಂದಿದ್ದಾರೆ. 19 ವರ್ಷಗಳ ಸುದೀರ್ಘ ಕಾಲ ನಡೆದ ಯುದ್ಧವದು. ರಾಜಕೀಯ ಕಾರಣಕ್ಕೆ ಏನೆಲ್ಲ ಆರೋಪ ಕೇಳಿಬಂದರೂ, ಅಂಥ ಮಹಾನ್ ನಾಯಕ ಏನೊಂದು ಮಾತನ್ನೂ ಹೇಳಿರಲಿಲ್ಲ. ಶಿವನು ವಿಷವನ್ನು ಕುಡಿದು ಯುದ್ಧವನ್ನು ಮಾಡಿದಂತೆ ಮೋದಿಯೂ ಅದೇ ಕಾಯಕ ಮಾಡಿದ್ದಾರೆ ಎಂದು ಅಮಿತ್ ಷಾ ಬಣ್ಣಿಸಿದ್ದಾರೆ.

India ready to provide all possible relief material to Afghanistan: PM Modi  - BusinessToday

ಕಡೆಯದಾಗಿ ಸತ್ಯ ಹೊರಬಂದಿದೆ. ಚಿನ್ನ ಹೊಳೆಯುವ ರೀತಿ ಮಿನುಗುತ್ತಲೇ ಬಂದಿದೆ. ಸಹಜವಾಗಿ ಆನಂದವನ್ನು ಜೊತೆಗಿಟ್ಟುಕೊಂಡು ಬಂದಿದೆ. ಸುದೀರ್ಘ ಕಾನೂನು ಹೋರಾಟ, ಏನೆಲ್ಲ ಆರೋಪಗಳು ಬಂದರೂ, ಎಲ್ಲವನ್ನೂ ಎದುರಿಸಿಕೊಂಡು ಬರಲು ಅಂಥ ಗಟ್ಟಿ ಹೃದಯವೇ ಬೇಕು. ಅದು ಮೋದಿಯವರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

Supreme Court: Latest news, Updates, Photos, Videos and more.

Supreme Court dismisses Zakia Jafri's plea of 'larger conspiracy' behind  Gujarat riots - The Hindu

2002ರ ಗಲಭೆಗೆ ಸಂಬಂಧಿಸಿ ಎಸ್ಐಟಿ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಝಾಕಿಯಾ ಜಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಅಲ್ಲದೆ, ಎಸ್ಐಟಿ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಕಾಂಗ್ರೆಸ್ ಸಂಸದ ಎಹ್ಸಾನ್ ಜಫ್ರಿ ಸೇರಿದಂತೆ 69 ಮಂದಿ 2002ರ ಫೆಬ್ರವರಿ 28ರಂದು ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದರು. ಎಹ್ಸಾನ್ ಜಫ್ರಿಯ ಪತ್ನಿ ಝಾಕಿಯಾ ಜಫ್ರಿ, ಪ್ರಕರಣದಲ್ಲಿ ಮೋದಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2002ರ ಫೆಬ್ರವರಿ 27ರಂದು ಗೋಧ್ರಾ ರೈಲ್ವೇ ನಿಲ್ದಾಣದಲ್ಲಿ 58 ಮಂದಿ ಯಾತ್ರಾರ್ಥಿಗಳಿದ್ದ ರೈಲಿಗೆ ಬೆಂಕಿ ಕೊಟ್ಟು ಕೊಲ್ಲಲಾಗಿತ್ತು. ಇದರ ಬೆನ್ನಲ್ಲೇ ಗುಜರಾತಿನಾದ್ಯಂತ ಹಿಂಸಾಚಾರ ಹೊತ್ತಿಕೊಂಡು ಸಾವಿರಕ್ಕೂ ಹೆಚ್ಚು ಮಂದಿ ಮಡಿದಿದ್ದರು.

Union Home Minister Amit Shah broke his silence a day after the Supreme Court upheld the Special Investigation Team's (SIT) clean chit to 64 people, including PM Narendra Modi, in the 2002 Gujarat riot case. The Home Minister spoke at length on the recent verdict by SC and said that the allegations levelled against PM Modi were politically motivated.While speaking to news agency ANI, Amit Shah said that a trio of opposition parties, ideologically motivated elements and some NGOs' were responsible for spreading allegations against Modi, who was then the Gujarat chief minister.