ಬ್ರೇಕಿಂಗ್ ನ್ಯೂಸ್
26-06-22 08:39 pm HK News Desk ದೇಶ - ವಿದೇಶ
ಮುಂಬೈ, ಜೂನ್ 26: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕಾನೂನು ಸಂಘರ್ಷದತ್ತ ಸಾಗಿದೆ. ತಮ್ಮ ವಿರುದ್ಧ ಅನರ್ಹತೆ ನೋಟೀಸ್ ನೀಡಿರುವುದನ್ನು ಪ್ರಶ್ನಿಸಿ ಶಿವಸೇನೆಯ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ಅಜಯ್ ಚೌಧರಿಯನ್ನು ನೇಮಕ ಮಾಡಿರುವುದನ್ನೂ ಏಕನಾಥ್ ಶಿಂಧೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ಅನರ್ಹತೆ ನಿರ್ಧಾರ ತೆಗೆದುಕೊಳ್ಳದಂತೆ ಡೆಪ್ಯುಟಿ ಸ್ಪೀಕರ್ ಗೆ ನಿರ್ದೇಶನ ನೀಡುವಂತೆ ಕೋರ್ಟಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ, ಏಕನಾಥ ಶಿಂಧೆ ಗುಂಪಿಗೆ ಮಹಾರಾಷ್ಟ್ರದ ಮತ್ತೊಬ್ಬ ಸಚಿವ ಸೇರ್ಪಡೆಯಾಗಿದ್ದಾರೆ. ಉನ್ನತ ಶಿಕ್ಷಣ ಸಚಿವ ಉದಯ್ ಸಾಮಂತ್ ಗುವಾಹಟಿಯ ಹೊಟೇಲ್ ತಲುಪಿದ್ದಾರೆ. ಇದರೊಂದಿಗೆ ಬಂಡಾಯ ಶಾಸಕರ ಗುಂಪಿನಲ್ಲಿ ಮಹಾರಾಷ್ಟ್ರದ ಎಂಟನೇ ಸಚಿವ ಸೇರ್ಪಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
40 ಶಾಸಕರು ಜೀವಂತ ಶವಗಳು
ಮಹಾರಾಷ್ಟ್ರ ಸರಕಾರದ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹತಾಶಗೊಂಡಿರುವ ಶಿವಸೇನೆಯ ವಕ್ತಾರ ಮತ್ತು ಸಂಸದ ಸಂಜಯ ರಾವುತ್, ಬಂಡಾಯ ಶಾಸಕರ ಬಗ್ಗೆ ತೀವ್ರ ಗರಂ ಆಗಿದ್ದಾರೆ. ಗುವಾಹಟಿಯಲ್ಲಿ ಅಡಗಿರುವ 40 ಶಾಸಕರು ಜೀವಂತ ಶವಗಳು. ಅವರ ಆತ್ಮಗಳು ಸತ್ತಿವೆ. ಅವರು ಹಿಂತಿರುಗಿದ ಬಳಿಕ ಶವಗಳನ್ನು ಪೋಸ್ಟ್ ಮಾರ್ಟಂ ನಡೆಸಲು ಅಸೆಂಬ್ಲಿಗೆ ಕಳಿಸಿಕೊಡುತ್ತೇವೆ. ಈಗಾಗಲೇ ಬೆಂಕಿ ಹತ್ತಿಕೊಂಡಿದ್ದು ಅದು ಯಾವ ಸ್ವರೂಪ ಪಡೆಯಲಿದೆ ಅನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಬಂಡಾಯ ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಹೊಸ ಜನಾದೇಶ ಪಡೆಯಲಿ. ಈ ಹಿಂದೆ ನಾರಾಯಣ ರಾಣೆ, ಛಗನ್ ಭುಜಬಲ್ ಮತ್ತವರ ಬೆಂಬಲಿಗರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಬಿಜೆಪಿ ಸೇರಿ ಚುನಾವಣೆ ಎದುರಿಸಿದ್ದರು. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಕಾಂಗ್ರೆಸ್ ಬಿಡುವ ಮುನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಹಾಗೆಯೇ ಇವರು ಕೂಡ ಮಾಡಲಿ. ಶಿವಸೇನಾ ಕಾರ್ಯಕರ್ತರು ಅವರ ಬಗ್ಗೆ ಕರುಣೆ ಹೊಂದಿದ್ದಾರೆ. ಹೀಗಾಗಿ ಇನ್ನೂ ಅವರಿಗೆ ಸಮಯ ನೀಡುತ್ತೇವೆ. ಅದರ ಜೊತೆಗೆ ಪಕ್ಷವನ್ನು ಹೆಬ್ಬಾವಿನ ಹಿಡಿತದಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಎರಡು ವರ್ಷಗಳ ಕಾಲ ಪಕ್ಷದಲ್ಲಿದ್ದು ಸಚಿವ ಸ್ಥಾನವನ್ನು ಪಡೆದು ಅಧಿಕಾರ ಅನುಭವಿಸಿದ್ದಾರೆ. ಈಗ ಸಡನ್ನಾಗಿ ಇವರಿಗೇನಾಗಿದೆ ಅನ್ನೋದು ತಿಳಿಯುತ್ತಿಲ್ಲ. ಇವರೇನು ಡ್ರಗ್ಸ್ ತೆಗೆದುಕೊಂಡಿದ್ದಾರೆಯೇ ಎಂದು ರಾವುತ್ ಪ್ರಶ್ನಿಸಿದ್ದಾರೆ.
ಬಂಡಾಯ ಶಾಸಕರಿಗೆ ವೈ ಪ್ಲಸ್ ಭದ್ರತೆ
ಇದೇ ವೇಳೆ, ಏಕನಾಥ್ ಶಿಂಧೆ ಜೊತೆಗೆ ಗುರುತಿಸಿರುವ 15 ಶಾಸಕರ ಮನೆ, ಕಚೇರಿಗಳಿಗೆ ಕೇಂದ್ರ ಸರಕಾರ ವೈ ಪ್ಲಸ್ ಸೆಕ್ಯುರಿಟಿ ನೀಡಿದೆ. ಬಂಡಾಯ ಶಾಸಕರ ಭದ್ರತೆಯನ್ನು ಮಹಾರಾಷ್ಟ್ರ ಸರಕಾರ ಹಿಂಪಡೆದಿದ್ದರಿಂದ ಮತ್ತು ಶಿವಸೇನಾ ಕಾರ್ಯಕರ್ತರು ಶಾಸಕರ ಕಚೇರಿಗಳಿಗೆ ದಾಳಿ ನಡೆಸುತ್ತಿರುವುದರಿಂದ ಕುಟುಂಬಗಳಿಗೆ ಭದ್ರತೆ ನೀಡುವಂತೆ ಏಕನಾಥ ಶಿಂಧೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಸುಪ್ರೀಂ ಕೋರ್ಟಿಗೂ ಇದೇ ಕೋರಿಕೆಯನ್ನು ಸಲ್ಲಿಸಿದ್ದರು. ಇದನ್ನು ಮನ್ನಿಸಿ, 15 ಮಂದಿ ಶಾಸಕರು ಮತ್ತು ಅವರ ಮನೆಗಳಿಗೆ ಸಿಆರ್ ಪಿಎಫ್ ಯೋಧರನ್ನು ಒಳಗೊಂಡ ವೈ ಪ್ಲಸ್ ಭದ್ರತೆಯನ್ನು ನೀಡಿದೆ. ಶಿಂಧೆ ಜೊತೆಗೆ ಗುರುತಿಸಲ್ಪಟ್ಟ ದಾದರ್ ಶಾಸಕ ಸಾದ ಸರ್ವಂಕರ್ ಸೇರಿದಂತೆ ಬಂಡಾಯ ಶಾಸಕರ ಮನೆಗಳಿಗೆ ಸಿಆರ್ ಪಿಎಫ್ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
The Shiv Sena on Sunday said the ongoing crisis in Maharashtra was not political but legal. A total of 16 rebel MLAs are facing disqualification notices on grounds of “anti-party activities”, said Sena MP Arvind Sawant.“So far, we have been talking, but you were not getting authentic information.The MP further said the party was here to clarify its legal position and the status of proceedings against the 16 rebels. The SC lawyer present alongside Sawant said there were many judgments under which a legislator could be disqualified.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm