ಸಂಜಯ್ ರಾವುತ್ ಗೆ ಇಡಿ ಸಮಸ್ಸ್ ; ನೀವು ಏನೇ ಮಾಡಿದ್ರೂ ಗುವಾಹಟಿ ರೂಟಿನತ್ತ ತಿರುಗಲಾರೆ ಎಂದು ತಿರುಗೇಟು

27-06-22 09:26 pm       HK News Desk   ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು ಎದುರಾಗಿ ಬಹುತೇಕ ಶಾಸಕರು ಬಂಡಾಯ ಎದ್ದರೂ ಉದ್ಧವ್ ಠಾಕ್ರೆ ಪರವಾಗಿ ಗಟ್ಟಿ ನಿಂತು ಸಮರ್ಥನೆ ಮಾಡುತ್ತಿರುವುದು ಶಿವಸೇನೆ ವಕ್ತಾರ ಮತ್ತು ಸಂಸದ ಸಂಜಯ ರಾವುತ್.

ಮುಂಬೈ, ಜೂನ್ 27: ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು ಎದುರಾಗಿ ಬಹುತೇಕ ಶಾಸಕರು ಬಂಡಾಯ ಎದ್ದರೂ ಉದ್ಧವ್ ಠಾಕ್ರೆ ಪರವಾಗಿ ಗಟ್ಟಿ ನಿಂತು ಸಮರ್ಥನೆ ಮಾಡುತ್ತಿರುವುದು ಶಿವಸೇನೆ ವಕ್ತಾರ ಮತ್ತು ಸಂಸದ ಸಂಜಯ ರಾವುತ್. ಉದ್ಧವ್ ಠಾಕ್ರೆಯ ಬಲಗೈ ಎಂದೇ ಬಿಂಬಿತವಾಗಿರುವ ಸಂಜಯ ರಾವುತ್ ಮೇಲೆ ಕೇಂದ್ರ ಸರಕಾರ ಇಡಿಯನ್ನು ಛೂಬಿಟ್ಟಿದ್ದು, ನಾಳೆಯೇ (ಜೂನ್ 28) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೋಟೀಸ್ ಜಾರಿ ಮಾಡಿದೆ.

ರಾವುತ್ ಸೋದರ ಸಂಬಂಧಿ ಪ್ರವೀಣ್ ರಾವುತ್ ಮತ್ತು ಪಾತ್ರಾ ಚಾವುಲ್ ಮೇಲಿನ ಭೂಹಗರಣದ ಪ್ರಕರಣದಲ್ಲಿ ಸಂಜಯ್ ರಾವುತ್ ಮೇಲೆ ನೋಟೀಸ್ ಜಾರಿಗೊಳಿಸಲಾಗಿದೆ. ನೋಟಿಸ್ ಬಗ್ಗೆ ಕಿಡಿಕಾರಿರುವ ಸಂಜಯ್ ರಾವುತ್, ನಾವು ಬಾಳಾ ಸಾಹೇಬ್ ಪರ ಇರುವ ಶಿವಸೈನಿಕರು. ದೊಡ್ಡ ಯುದ್ಧವನ್ನು ಎದುರಿಸುತ್ತಿದ್ದೇವೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇವರು ಏನೇ ಮಾಡಿದ್ರೂ, ನಾನಂತೂ ಗುವಾಹಟಿ ರೂಟ್ ಹೋಗಲಾರೆ ಎಂದಿದ್ದಾರೆ.

Reduce gap for vaccination of students: Priyanka Chaturvedi - The Statesman

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ, ಇಡಿ ಅಧಿಕಾರಿಗಳು ಬಿಜೆಪಿ ಮೇಲೆ ನಿಜವಾದ ಭಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಕಟಕಿಯಾಡಿದ್ದಾರೆ. 

Shiv Sena MP Sanjay Raut has been summoned by the Enforcement Directorate (ED) on Tuesday in connection with the Pravin Raut and Patra Chawl land scam case amid the Maharashtra political crisis. Some of his properties had been attached by ED earlier.After the ED issued summons to Rawat in a money laundering case, he said that he 'won't go to Guwahati' and the ED can arrest him.