ಓಎನ್ ಜಿಸಿ ಹೆಲಿಕಾಪ್ಟರ್ ಅರಬ್ಬೀ ಸಮುದ್ರಕ್ಕೆ ಬಿದ್ದು ದುರಂತ ; ನಾಲ್ವರು ಸಿಬಂದಿ ಸಾವು

28-06-22 08:11 pm       HK News Desk   ದೇಶ - ವಿದೇಶ

ಸಮುದ್ರ ಮಧ್ಯೆ ಓಎನ್ ಜಿಸಿ ಸಂಸ್ಥೆಯ ಬಾಂಬೆ ಹೈ ರಿಗ್ ಬಳಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಸಮುದ್ರಕ್ಕೆ ಬಿದ್ದು ಉಂಟಾದ ಅಪಘಾತದಲ್ಲಿ ನಾಲ್ಕು ಮಂದಿ ಓಎನ್ ಜಿಸಿ ಸಂಸ್ಥೆಯ ಸಿಬಂದಿ ಸಾವು ಕಂಡಿದ್ದಾರೆ.

ಮುಂಬೈ, ಜೂನ್ 28: ಸಮುದ್ರ ಮಧ್ಯೆ ಓಎನ್ ಜಿಸಿ ಸಂಸ್ಥೆಯ ಬಾಂಬೆ ಹೈ ರಿಗ್ ಬಳಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಸಮುದ್ರಕ್ಕೆ ಬಿದ್ದು ಉಂಟಾದ ಅಪಘಾತದಲ್ಲಿ ನಾಲ್ಕು ಮಂದಿ ಓಎನ್ ಜಿಸಿ ಸಂಸ್ಥೆಯ ಸಿಬಂದಿ ಸಾವು ಕಂಡಿದ್ದಾರೆ.

ಓಎನ್ ಜಿಸಿ ಸಂಸ್ಥೆಗೆ ಸೇರಿದ ಪವನ್ ಹನ್ಸ್ ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ ಹಾಗೂ ಏಳು ಮಂದಿ ಇತರ ಸಿಬಂದಿ ಇದ್ದರು. ಹೆಲಿಕಾಪ್ಟರ್ ಸಮುದ್ರಕ್ಕೆ ಬಿದ್ದ ಕೂಡಲೇ ಅದನ್ನು ಕೆಲ ಹೊತ್ತು ಮುಳುಗದಂತೆ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ, ಅದರಲ್ಲಿದ್ದ
ಎಲ್ಲ ಒಂಬತ್ತು ಸಿಬಂದಿಯನ್ನು ರಕ್ಷಣೆ ಮಾಡಿದ್ದು, ನಾಲ್ಕು ಮಂದಿ ಪ್ರಜ್ಞೆ ತಪ್ಪಿದ್ದರು.

Mumbai: Chopper with 9 on board makes emergency landing in sea, four  injured | Cities News,The Indian Express

ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರನ್ನು ನೇವಿ ಹೆಲಿಕಾಪ್ಟರ್ ಮೂಲಕ ತುರ್ತಾಗಿ ಮುಂಬೈನ ಸೇನಾ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ನಾಲ್ಕು ಮಂದಿಯೂ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಈ ಪೈಕಿ ಮೂವರು ಓಎನ್ ಜಿಸಿ ಸಿಬಂದಿಯಾಗಿದ್ದು, ಒಬ್ಬರು ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.

4 dead as ONGC chopper falls into sea off Mumbai coast - Rediff.com India  News

ಬೆಳಗ್ಗೆ 11.30ಕ್ಕೆ ಹೆಲಿಕಾಪ್ಟರನ್ನು ಏನೋ ತಾಂತ್ರಿಕ ದೋಷದ ಕಾರಣಕ್ಕೆ ತುರ್ತಾಗಿ ಲ್ಯಾಂಡ್ ಮಾಡಲಾಗಿತ್ತು. ಆದರೆ, ಅರಬ್ಬೀ ಸಮುದ್ರದ ಮಧ್ಯೆಯೇ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಸಿಬಂದಿಯನ್ನು ರಕ್ಷಿಸುವ ಕಾರ್ಯ ನಡೆದಿತ್ತು. ತೀರದಿಂದ 50 ನಾಟಿಕಲ್ ಮೈಲು ದೂರದಲ್ಲಿರುವ ಬಾಂಬೆ ಹೈ ಪ್ರದೇಶದಲ್ಲಿ ಓಎನ್ ಜಿಸಿ ರಿಗ್ ಇದ್ದು, ಅಲ್ಲಲ್ಲಿ ಸ್ಥಾವರ, ಸ್ಟೋರೇಜ್ ಏರಿಯಾ ಇದೆ. ಅತ್ತಿತ್ತ ಸಿಬಂದಿಯನ್ನು ಒಯ್ಯುವುದು ಇತ್ಯಾದಿ ಕೆಲಸಕ್ಕೆ ಕಾಪ್ಟರ್ ಬಳಸಲಾಗುತ್ತಿದೆ. ಏಳು ಮಂದಿ ಸಿಬಂದಿಯನ್ನು ಒಯ್ಯುತ್ತಿದ್ದಾಗ ಹೆಲಿಕಾಪ್ಟರ್ ತುರ್ತಾಗಿ ನೀರಿನಲ್ಲೇ ಲ್ಯಾಂಡ್ ಆಗಿತ್ತು. ಆದರೆ ಈ ವೇಳೆ, ಸಿಬಂದಿಯನ್ನು ಬಚಾವ್ ಮಾಡುವುದು ವಿಳಂಬವಾಗಿದ್ದರಿಂದ ಉಸಿರು ಕಟ್ಟಿ ನಾಲ್ವರು ಸಾವು ಕಂಡಿದ್ದಾರೆ. 

Four people were killed after a helicopter operating for the Oil and Natural Gas Commission (ONGC) made an emergency landing off the Mumbai coast on Tuesday.The chopper, with nine people on board, ditched in the sea 60 nautical miles away from Mumbai near Sagar Kiran rig on Tuesday morning.“A Pawan Hans helicopter with seven ONGC passengers and two crew members crashed near Sagar Kiran oil rig. In the rescue operations, three ONGC employees and both crew members were saved.