ರಿಲಯನ್ಸ್ ಜಿಯೋಗೆ ನೂತನ ಅಧ್ಯಕ್ಷನಾಗಿ ಮಗ ಆಕಾಶ್ ನೇಮಕ ;   ಮುಖೇಶ್ ಅಂಬಾನಿ ರಾಜೀನಾಮೆ !

28-06-22 08:56 pm       HK News Desk   ದೇಶ - ವಿದೇಶ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಅವರು ತಮ್ಮ ಸಮೂಹದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಮಂಡಳಿಗೆ ರಾಜೀನಾಮೆ ನೀಡಿದ್ದು, ಜಿಯೋ ಕಂಪನಿಯ ಆಡಳಿತವನ್ನು ತಮ್ಮ ಹಿರಿಯ ಮಗ ಆಕಾಶ್‌ಗೆ ಹಸ್ತಾಂತರಿಸಿದ್ದಾರೆ. 

ನವದೆಹಲಿ, ಜೂ 12: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಅವರು ತಮ್ಮ ಸಮೂಹದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಮಂಡಳಿಗೆ ರಾಜೀನಾಮೆ ನೀಡಿದ್ದು, ಜಿಯೋ ಕಂಪನಿಯ ಆಡಳಿತವನ್ನು ತಮ್ಮ ಹಿರಿಯ ಮಗ ಆಕಾಶ್‌ಗೆ ಹಸ್ತಾಂತರಿಸಿದ್ದಾರೆ. 

ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ, ರಿಲಯನ್ಸ್ ಜಿಯೋ ಇನ್ಫೋಕಾಮ್ ಜೂನ್ 27 ರಂದು ನಡೆದ ಸಭೆಯಲ್ಲಿ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದ ಆಕಾಶ್ ಎಂ ಅಂಬಾನಿ ಅವರನ್ನು ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಒಪ್ಪಿಗೆ ನೀಡಿದೆ" ಎಂದು ತಿಳಿಸಿದೆ.

Reliance Jio: From Telecom Operator to Solutions Provider

ಮುಕೇಶ್ ಅಂಬಾನಿ ಅವರು ತಮ್ಮ ಪುತ್ರ ಆಕಾಶ್ ಅಂಬಾನಿ ಅವರಿಗೆ ರಿಲಯನ್ಸ್ ಜಿಯೋ ಸಂಸ್ಥೆಯನ್ನು ಮುನ್ನೆಡೆಸಲು ಅವಕಾಶ ಕಲ್ಪಿಸಿಕೊಡಲು ಜೂನ್ 27, 2022 ರಂದು ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆಕಾಶ್ ಅಂಬಾನಿ ಅವರು ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಇತರ ನೇಮಕಾತಿಗಳಲ್ಲಿ, ಪಂಕಜ್ ಮೋಹನ್ ಪವಾರ್ ಅವರನ್ನು ಜೂನ್ 27 ರಿಂದ ಐದು ವರ್ಷಗಳ ಕಾಲ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ. ಅಲ್ಲದೆ ರಮೀಂದರ್ ಸಿಂಗ್ ಗುಜ್ರಾಲ್ ಮತ್ತು ಕೆವಿ ಚೌಧರಿ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

In the first clear signs of a succession plan being charted out at India's most valuable company, billionaire Mukesh Ambani resigned from the board of his $217-billion group's telecom arm, Reliance Jio, and handed over the firm's reins to elder son Akash.In a stock exchange filing, Reliance Jio Infocomm Ltd on Tuesday said the company's board at a meeting on June 27, "approved the appointment of Akash M Ambani, non-executive director, as chairman of the board of directors of the company." This comes after his father resigned with effect from the close of working hours on June 27, it said.