ಬ್ರೇಕಿಂಗ್ ನ್ಯೂಸ್
28-06-22 09:14 pm HK News Desk ದೇಶ - ವಿದೇಶ
ಉದಯಪುರ, ಜೂನ್ 28: ಬಿಜೆಪಿ ನಾಯಕಿ ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಹಾಡಹಗಲೇ ಕತ್ತು ಕೊಯ್ದು ಕೊಲೆಗೈದಿದ್ದಲ್ಲದೆ, ಕೊಲೆಯ ಕೃತ್ಯವನ್ನು ಮೊಬೈಲಿನಲ್ಲಿ ಚಿತ್ರೀಕರಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ದುಷ್ಕೃತ್ಯದ ಬೆನ್ನಲ್ಲೇ ಉದಯಪುರದಲ್ಲಿ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿದೆ.
ಟೈಲರ್ ಕೆಲಸ ಮಾಡುತ್ತಿದ್ದ ಕನ್ನಯ್ಯ ಲಾಲ್ ಕೊಲೆಯಾದ ಯುವಕ. ಉದಯಪುರ್ ನಗರದ ಧನ್ ಮಂಡಿ ಏರಿಯಾದಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ ಅಂಗಿ ಹೊಲಿಸುವುದಕ್ಕೆ ಅಳತೆ ನೀಡುವುದಕ್ಕಾಗಿ ಇಬ್ಬರು ಅಪರಿಚಿತರು ಟೈಲರ್ ಅಂಗಡಿಗೆ ಬಂದಿದ್ದರು. ಅಳತೆ ತೆಗೆಯಲು ಮುಂದಾಗುತ್ತಿದ್ದಂತೆ ಒಬ್ಬಾತ ಕತ್ತಿ ತೆಗೆದು ತಲೆಯನ್ನು ಕಡಿದಿದ್ದಾನೆ. ಇದನ್ನು ಆತನ ಜೊತೆಗೆ ಬಂದಿದ್ದ ಇನ್ನೊಬ್ಬ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾನೆ.

ಕೊಲೆ ಕೃತ್ಯ ನಡೆಸಿದವನನ್ನು ರಿಯಾಜ್ ಅಖ್ತರ್ ಎಂದು ಪೊಲೀಸರು ಗುರುತಿಸಿದ್ದು, ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯನ್ನು ಗೋಸ್ ಮಹಮ್ಮದ್ ಎಂದು ಗುರುತಿಸಿದ್ದಾರೆ. ಕೊಲೆ ಕೃತ್ಯ ನಡೆಸಿದ್ದಲ್ಲದೆ, ಅದರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಇದೇ ರೀತಿ ಪ್ರಧಾನಿ ಮೋದಿಗೂ ಗತಿಯಾಗಲಿದೆ. ಇದೇ ರೀತಿಯ ಶಿಕ್ಷೆಯನ್ನು ಕೊಡದೆ ಬಿಡಲಾರೆವು ಎಂದು ಬೆದರಿಕೆ ಒಡ್ಡಿದ್ದಾರೆ. ಘಟನೆ ನಡೆದ ಒಂದು ಗಂಟೆಯ ಅಂತರದಲ್ಲಿ ಇಬ್ಬರು ಹಂತಕರನ್ನೂ ಪೊಲೀಸರು ಬಂಧಿಸಿದ್ದಾರೆ.

ಘಟನೆ ಬಗ್ಗೆ ಆಕ್ರೋಶಿತರ ಗುಂಪು ಪ್ರತಿಭಟನೆ ನಡೆಸಿದ್ದು ರಸ್ತೆಯಲ್ಲಿ ಟೈರ್ ಸುಟ್ಟು ಹಿಂಸಾಚಾರ ನಡೆಸಿದೆ. ಅಲ್ಲದೆ, ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದೆ. ಉದಯಪುರ್ ನಗರದ ಹಲವೆಡೆ ಉದ್ರಿಕ್ತ ಸ್ಥಿತಿ ನೆಲೆಸಿದ್ದು, 144 ಸೆಕ್ಷನ್ ಮತ್ತು ಕರ್ಫ್ಯೂ ಹೇರಲಾಗಿದೆ. ಅಲ್ಲದೆ, ಉದಯಪುರ್ ನಗರದಲ್ಲಿ 24 ಗಂಟೆ ಕಾಲ ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ. ಉದಯಪುರ್ ನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ. ಇಡೀ ರಾಜಸ್ಥಾನದಾದ್ಯಂತ ಅಲರ್ಟ್ ಘೋಷಣೆ ಮಾಡಲಾಗಿದೆ.
![]()
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಘಟನೆಯನ್ನು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ವಿಧಿಸದೆ ಬಿಡುವುದಿಲ್ಲ. ಇದು ಸಾಮಾನ್ಯ ರೀತಿಯ ಕೃತ್ಯ ಅಲ್ಲ. ಅತ್ಯಂತ ಅಮಾನುಷ ಕೃತ್ಯ. ಆದರೆ ಜನರು ಶಾಂತಿ ಕಾಪಾಡಬೇಕು. ವಿಡಿಯೋವನ್ನು ಷೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
A man was allegedly beheaded by two men in broad daylight in Udaipur's Maldas area on Tuesday. Soon after, the men posted a video on social media boasting about the beheading and threatened PM Modi’s life as well, said the police. The two accused were arrested within hours of the incident.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 08:58 pm
HK News Staffer
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm