ಮಹಾರಾಷ್ಟ್ರ ಸರಕಾರ ಅಂತೂ ಪತನ, ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜಿನಾಮೆ ; ಬಿಜೆಪಿ ಸರಕಾರ ರಚನೆಯತ್ತ ದಾಪುಗಾಲು!

29-06-22 10:25 pm       HK News Desk   ದೇಶ - ವಿದೇಶ

ಅಂತೂ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರ ಪತನಗೊಂಡಿದೆ. ವಿಶ್ವಾಸ ಮತ ಸಾಬೀತು ಪಡಿಸುವ ರಾಜ್ಯಪಾಲರ ಸೂಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸುತ್ತಿದ್ದಂತೆಯೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಮುಂಬೈ, ಜೂನ್ 29: ಅಂತೂ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರ ಪತನಗೊಂಡಿದೆ. ವಿಶ್ವಾಸ ಮತ ಸಾಬೀತು ಪಡಿಸುವ ರಾಜ್ಯಪಾಲರ ಸೂಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸುತ್ತಿದ್ದಂತೆಯೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಜೂನ್ 30ರಂದು ವಿಶ್ವಾಸ ಮತ ಸಾಬೀತು ಮಾಡುವಂತೆ ರಾಜ್ಯಪಾಲರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸೂಚಿಸಿದ್ದರು. ಆದರೆ, ರಾಜ್ಯಪಾಲರ ಈ ನಡೆಗೆ ಶಿವಸೇನೆ ಮುಖಂಡ ಸಂಜಯ ರಾವುತ್, ಸಿಎಂ ಠಾಕ್ರೆ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ಪ್ರಶ್ನಿಸುವುದಾಗಿ ಹೇಳಿದ್ದರು. ಅದರಂತೆ, ಇಂದು ಇಡೀ ದಿನ ಸುಪ್ರೀಂ ಕೋರ್ಟಿನಲ್ಲಿ ಹಿರಿಯ ವಕೀಲರಿಂದ ಜಟಾಪಟಿ ನಡೆದಿತ್ತು. ರಾತ್ರಿಯೇ ತೀರ್ಪು ನೀಡುವುದಾಗಿ ಸುಪ್ರೀ ಕೋರ್ಟ್ ಹೇಳಿದ್ದರಿಂದ ಕುತೂಹಲ ಉಂಟಾಗಿತ್ತು.

Supreme Court: Latest news, Updates, Photos, Videos and more.

ಇದೀಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪರ- ವಿರೋಧ ವಕೀಲರ ವಾದ ಆಲಿಸಿದ ಬಳಿಕ ರಾಜ್ಯಪಾಲರ ನಡೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದಾರೆ. ಶಿವಸೇನೆಯ 40ಕ್ಕೂ ಹೆಚ್ಚು ಶಾಸಕರು ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿರುವುದರಿಂದ ಠಾಕ್ರೆ ಸರಕಾರ ಬಹುಮತ ಕಳಕೊಂಡಿತ್ತು. ವಾರ ಕಾಲ ಗುವಾಹಟಿಯಲ್ಲಿ ಬಂಡಾಯ ಶಾಸಕರು ಬೀಡು ಬಿಟ್ಟಿದ್ದರು. ಕಾಂಗ್ರೆಸ್, ಎನ್ ಸಿಪಿ ಜೊತೆಗಿನ ಮೈತ್ರಿಯಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದರು. ಇದೀಗ ಠಾಕ್ರೆ ರಾಜಿನಾಮೆ ನೀಡಿರುವುದರಿಂದ

Maharashtra political crisis: Eknath Shinde with 33 Sena MLAs, 7  Independents leaves Gujarat for Assam - India News
ಶಿವಸೇನೆಯ ಬಂಡಾಯ ಶಾಸಕರು ಬಿಜೆಪಿ ಜೊತೆ ಸೇರಿ ಹೊಸ ಸರಕಾರ ಸ್ಥಾಪನೆ ಮಾಡಲಿದ್ದಾರೆ. ಬಂಡಾಯ ಶಾಸಕರ ಜೊತೆ ಶಿವಸೇನೆಯ ಎಂಟು ಮಂದಿ ಸಚಿವರೂ ಸೇರಿಕೊಂಡಿದ್ದರು. ಉದ್ಧವ್ ಠಾಕ್ರೆ ಮತ್ತು ಅವರ ಮಗ ಆದಿತ್ಯ ಠಾಕ್ರೆ ಮಾತ್ರ ಉಳಿದುಕೊಂಡಿದ್ದರು. ಏನೇ ಮನವಿ ಮಾಡಿಕೊಂಡರೂ, ಬಂಡಾಯ ಶಾಸಕರು ಪಟ್ಟು ಸಡಿಲ ಮಾಡದೇ ಇದ್ದುದರಿಂದ ಸರಕಾರ ಅಂತೂ ಪತನಗೊಂಡಿದೆ.

Uddhav Thackeray resigned as Maharashtra Chief Minister on Wednesday, June 29. Uddhav Thackeray’s announcement followed soon after the Supreme Court rejected MVA government’s plea seeking a stay on floor test in the Maharashtra Assembly.