ಬ್ರೇಕಿಂಗ್ ನ್ಯೂಸ್
30-06-22 11:06 pm Giridhar S, Political Correspondent ದೇಶ - ವಿದೇಶ
ಮುಂಬೈ, ಜೂನ್ 30: ಶಿವಸೇನೆಯ ರೆಬಲ್ ಸ್ಟಾರ್ ಏಕನಾಥ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಅವರ ಜೊತೆಗೆ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಡಿಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ.
ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಏಕನಾಥ ಶಿಂಧೆ ಮಳೆ ವಿಕೋಪ ಮತ್ತು ಕೊರೊನಾ ವಿಚಾರದಲ್ಲಿ ಮೊದಲ ಸಂಪುಟ ಸಭೆಯನ್ನು ನಡೆಸಿದ್ದಾರೆ. ಈ ನಡುವೆ, ರಾಜ್ಯಪಾಲ ಕೋಶಿಯಾರಿ, ಅಧಿವೇಶನ ಕರೆದು ವಿಶ್ವಾಸ ಮತ ಸಾಬೀತು ಪಡಿಸುವಂತೆ ಏಕನಾಥ ಶಿಂಧೆಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಜುಲೈ 2 ಮತ್ತು 3ರಂದು ವಿಶೇಷ ಅಧಿವೇಶನ ಕರೆಯಲಾಗಿದೆ.
ಬಾಳಾ ಸಾಹೇಬರ ಪರಮ ಶಿಷ್ಯರಾಗಿದ್ದ ಏಕನಾಥ ಶಿಂಧೆ ಒಂದು ಕಾಲದಲ್ಲಿ ಠಾಕ್ರೆ ಕುಟುಂಬದ ಆಪ್ತರಾಗಿದ್ದರು. ಶಿವಸೇನೆಯ ಹಿರಿಯ ನಾಯಕರಾಗಿದ್ದ ಆನಂದ್ ದಿಘೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಶಿಂಧೆ, ಥಾಣೆಯಲ್ಲಿ ಒಂದೇ ಕ್ಷೇತ್ರವನ್ನು ಸತತ ನಾಲ್ಕು ಬಾರಿ ಪ್ರತಿನಿಧಿಸುತ್ತಾ ಬಂದಿದ್ದಾರೆ. ಒಂದು ಕಾಲದಲ್ಲಿ ಆಟೋ ಚಾಲಕನಾಗಿ, ಲಾರಿ ಚಾಲಕನಾಗಿ ವೃತ್ತಿ ಆರಂಭಿಸಿದ್ದ ಏಕನಾಥ ಶಿಂಧೆ, ಆನಂದ್ ದಿಘೆ ಅವರಿಂದ ಪ್ರೇರಣೆಗೊಂಡು ಜನಪರ, ಕಾರ್ಮಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಬೆಳಗಾವಿ ಗಡಿ ವಿಚಾರದಲ್ಲಿ ಹೋರಾಟ ಕೈಗೆತ್ತಿಕೊಂಡು 40 ದಿನಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದರು.
1997ರಲ್ಲಿ ಮೊದಲ ಬಾರಿಗೆ ಥಾಣೆ ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಗೆ ನಿಂತು ಗೆದ್ದ ಏಕನಾಥ ಶಿಂಧೆ 2005ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು. ಪ್ರಬಲ ಹಿಂದುತ್ವದ ಪ್ರತಿಪಾದನೆ, ಮರಾಠಾ ನಾಯಕರಾಗಿ ಗುರುತಿಸಲ್ಪಟ್ಟ ಏಕನಾಥ ಶಿಂಧೆ, ಬಾಳಾಸಾಹೇಬ್ ನಂತರ ಅವರ ರೀತಿಯಲ್ಲಿ ಶಿವಸೇನೆಯನ್ನು ಪಣಕ್ಕೊಡ್ಡಿದ್ದು ಶಿಂಧೆ ಮಾತ್ರ. ಇದೇ ರೀತಿಯ ಪ್ರಬಲ ಹಿಂದುತ್ವದ ಕಾರಣದಿಂದಲೇ ಶಿವಸೇನೆಯ ಸಂಸ್ಥಾಪಕರ ಪುತ್ರನನ್ನೇ ಪಟ್ಟದಿಂದ ಕೆಳಕ್ಕಿಳಿಸಿದ್ದಾರೆ. ಈಗ ಒಂದು ಕಾಲದ ಬಡ ಕುಟುಂಬದ ಹುಡುಗ, ಪಿಯುಸಿ ಮುಗಿಸಿ ಹೆಚ್ಚು ಓದಲಾಗದೆ ಥಾಣೆಗೆ ತೆರಳಿ ಬಾಳು ಕಟ್ಟಿಕೊಂಡಿದ್ದ ಏಕನಾಥ ಶಿಂಧೆ ಸಿಎಂ ಸ್ಥಾನ ಅಲಂಕರಿಸಿದ್ದಾರೆ.
From a rickshaw driver to the Maharashtra Chief Minister Eknath Sambhaji Shinde, a staunch Shiv Sainik, has come a long way. Shinde, who belongs to the politically influential Maratha community and hails from Satara district in the western Maharashtra, is the fourth CM after YB Chavan, Babasaheb Bhosale and Prithviraj Chavan to assume the top post. Shinde acceptedUddhav Thackeray as the Chief Minister of Maha Vikas Aghadi government and was sulking since day one but maintained his calm.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 12:32 pm
Mangalore Correspondent
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm