ಹಿಮಾಚಲದಲ್ಲಿ ಬಸ್ ಪ್ರಪಾತಕ್ಕೆ ಬಿದ್ದು ಶಾಲಾ ಮಕ್ಕಳು ಸೇರಿ 16 ಮಂದಿ ಸಾವು

04-07-22 01:04 pm       HK News Desk   ದೇಶ - ವಿದೇಶ

ಹಿಮಾಚಲ ಪ್ರದೇಶದ ಕಣಿವೆ ಪ್ರದೇಶದಲ್ಲಿ ಖಾಸಗಿ ಬಸ್ ಉರುಳಿ ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದ್ದು ದುರಂತದಲ್ಲಿ ಶಾಲಾ ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ.

ನವದೆಹಲಿ, ಜುಲೈ 4: ಹಿಮಾಚಲ ಪ್ರದೇಶದ ಕಣಿವೆ ಪ್ರದೇಶದಲ್ಲಿ ಖಾಸಗಿ ಬಸ್ ಉರುಳಿ ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದ್ದು ದುರಂತದಲ್ಲಿ ಶಾಲಾ ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ. ಕುಲು ಜಿಲ್ಲೆಯ ಜಾಂಗ್ಲಾ ಗ್ರಾಮದ ಸೈಂಜ್ ಕಣಿವೆ ಪ್ರದೇಶದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದೆ.

ಬಸ್ಸಿನಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳೇ ಇದ್ದರು ಎನ್ನಲಾಗುತ್ತಿದೆ. ಭಾನುವಾರದ ರಜೆ ಮುಗಿಸಿ ಸೋಮವಾರ ಬೆಳಗ್ಗೆ ಶಾಲಾ ಮಕ್ಕಳು ಎಂದಿನಂತೆ ಬಸ್ಸಿನಲ್ಲಿ ಶಾಲೆಗೆ ಹೊರಟಿದ್ದರು. ಈ ವೇಳೆ, ಬಸ್ ಚಾಲಕನ ನಿಯಂತ್ರಣ ತಪ್ಪಿ ಕಣಿವೆ ಪ್ರದೇಶದಲ್ಲಿ ಪ್ರಪಾತಕ್ಕೆ ಬಿದ್ದಿದ್ದು ಹಲವರು ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿ ಘಟನೆ ನಡೆದಿದೆ. ದುರ್ಗಮ ಪ್ರದೇಶ ಆಗಿರುವುದರಿಂದ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು. ಪ್ರಧಾನಿ ಮೋದಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಬೆಳ್ಳಂಬೆಳಗ್ಗೆ ಹೃದಯ ಕಲಕುವ ಘಟನೆ. ಮೃತ ಕುಟುಂಬಗಳಿಗೆ ನನ್ನ ಸಾಂತ್ವನ ಹೇಳುತ್ತೇನೆ ಎಂದಿದ್ದಾರೆ. ಅಲ್ಲದೆ, ಮೃತರ ಕುಟುಂಬಗಳಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ. 

At least 10 people, including school children, were killed and dozen injured after a private bus skilled rolled off a cliff in Himachal Pradesh's Kullu district on Monday morning.