ಚಿಕಾಗೋ ಸ್ವಾತಂತ್ರ್ಯ ಪೆರೇಡ್ ಮೇಲೆ ಶೂಟೌಟ್ ; ಆರು ಮಂದಿ ಸಾವು, 30ಕ್ಕೂ ಹೆಚ್ಚು ಗಾಯ, ಅಮೆರಿಕದಲ್ಲಿ ಗನ್ ಲೈಸನ್ಸ್ ಕಾರಣಕ್ಕೇ ದುರಂತ !  

05-07-22 04:06 pm       HK News Desk   ದೇಶ - ವಿದೇಶ

ಅಮೆರಿಕದ ಚಿಕಾಗೋ ನಗರದಲ್ಲಿ ದೇಶದ ಸ್ವಾತಂತ್ರ್ಯ ದಿನದ ಪರೇಡ್ ನಡೆಯುತ್ತಿರುವಾಗಲೇ ಯುವಕನೊಬ್ಬ ರೈಫಲ್ ಹಿಡಿದು ಯದ್ವಾತದ್ವಾ ಗುಂಡು ಹಾರಿಸಿದ್ದು, ಆರು ಮಂದಿ ಸ್ಥಳದಲ್ಲೇ ಸಾವು ಕಂಡ ದುರಂತ ಘಟನೆ ನಡೆದಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಮಕ್ಕಳು, ವೃದ್ಧರು, ಮಹಿಳೆಯರು ಗಾಯಗೊಂಡಿದ್ದಾರೆ.

ಚಿಕಾಗೋ, ಜುಲೈ 5: ಅಮೆರಿಕದ ಚಿಕಾಗೋ ನಗರದಲ್ಲಿ ದೇಶದ ಸ್ವಾತಂತ್ರ್ಯ ದಿನದ ಪರೇಡ್ ನಡೆಯುತ್ತಿರುವಾಗಲೇ ಯುವಕನೊಬ್ಬ ರೈಫಲ್ ಹಿಡಿದು ಯದ್ವಾತದ್ವಾ ಗುಂಡು ಹಾರಿಸಿದ್ದು, ಆರು ಮಂದಿ ಸ್ಥಳದಲ್ಲೇ ಸಾವು ಕಂಡ ದುರಂತ ಘಟನೆ ನಡೆದಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಮಕ್ಕಳು, ವೃದ್ಧರು, ಮಹಿಳೆಯರು ಗಾಯಗೊಂಡಿದ್ದಾರೆ.

ಜುಲೈ 4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಸಂಭ್ರಮಿಸಲಾಗುತ್ತದೆ. ಅದರಂತೆ, ಚಿಕಾಗೋ ನಗರದ ಹೈಲ್ಯಾಂಡ್ ಪಾರ್ಕ್ ನಲ್ಲಿ ಜುಲೈ 4ರ ಸ್ಥಳೀಯ ಕಾಲಮಾನ ಬೆಳಗ್ಗೆ 10.30ರ ಸುಮಾರಿಗೆ ನೂರಾರು ಮಂದಿ ಸೇರಿ ಸಂಗೀತ ವಾದ್ಯಗಳ ನುಡಿಯೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಸ್ವಾತಂತ್ರ್ಯ ಪೆರೇಡ್ ನೋಡುವುದಕ್ಕಾಗಿ ಬಹಳಷ್ಟು ಮಂದಿ ವೃದ್ಧರು, ಮಕ್ಕಳು, ಮಹಿಳೆಯರು ಅಲ್ಲಿ ಸೇರಿದ್ದರು. ಇದೇ ಸಂದರ್ಭದಲ್ಲಿ 22 ವರ್ಷದ ಯುವಕನೊಬ್ಬ ಕೈಯಲ್ಲಿ ರೈಫಲ್ ಹಿಡಿದು ಕಟ್ಟಡದ ಮೇಲೆ ನಿಂತು ಪ್ರೋಗ್ರಾಂ ನಡೆಯುತ್ತಿದ್ದಲ್ಲಿಗೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಮಡಿದವರಲ್ಲಿ 76 ವರ್ಷದ ವೃದ್ಧ ವ್ಯಕ್ತಿಯೂ ಇದ್ದರು. ಅವರು ವೀಲ್ ಚೇರ್ ನಲ್ಲಿ ಕುಳಿತು ಕಾರ್ಯಕ್ರಮ ನೋಡುತ್ತಿದ್ದರು. ಗಾಯಗೊಂಡವರಲ್ಲಿ 12 ಮಂದಿಯ ಸ್ಥಿತಿ ಗಂಭೀರ ಇದೆ.

An aerial view of the parade route after a mass shooting at a Fourth of July parade route in the Chicago suburb of Highland Park, Illinois, US, July 4, 2022. REUTERSAn aerial view of the parade route after a mass shooting at a Fourth of July parade route in the Chicago suburb of Highland Park, Illinois, US, July 4, 2022. REUTERS22-year-old Robert E. Crimo III has been identified as a person of interested by the Highland Park Police Department in the July 4 shooting that has left at least six deadAn aerial view of the parade route after a mass shooting at a Fourth of July parade route in the Chicago suburb of Highland Park, Illinois, US, July 4, 2022. REUTERS

A woman wipes her tears after a mass shooting in Highland Park, Illinois.

ಶೂಟೌಟ್ ಸದ್ದು ಕೇಳುತ್ತಲೇ ಜನರು ಎಲ್ಲೆಂದರಲ್ಲಿ ಓಡಿದ್ದಾರೆ. ಈ ವೇಳೆ, ಗುಂಡು ಹಲವರಿಗೆ ತಾಗಿದ್ದು, 5 ವರ್ಷದ ಮಕ್ಕಳು ಸೇರಿ ಮಹಿಳೆಯರು, ವೃದ್ಧರು ಗಾಯಗೊಂಡಿದ್ದಾರೆ. ಯುವಕ ದೂರದ ಕಟ್ಟಡದ ಮೇಲೆ ನಿಂತು ಗುಂಡು ಹಾರಿಸಿದ್ದಾನೆ. ಹಾಗಾಗಿ ಹೆಚ್ಚಿನ ದುರಂತ ಆಗಿಲ್ಲ. ಆರೋಪಿ ರಾಬರ್ಟ್ ಕ್ರಿಮೋ ಎಂಬ 22 ವರ್ಷದ ಯುವಕನನ್ನು ಕೆಲವೇ ಹೊತ್ತಿನಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ಯಾಕಾಗಿ ಗುಂಡು ಹಾರಾಟ ನಡೆಸಿದ್ದಾನೆ ಅನ್ನುವುದು ಗೊತ್ತಾಗಿಲ್ಲ. ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವರು ಮೊಬೈಲಿನಲ್ಲಿ ಸ್ಥಳದ ಚಿತ್ರೀಕರಣ ನಡೆಸುತ್ತಿದ್ದರು. ಹೀಗಾಗಿ ಒಮ್ಮಿಂದೊಮ್ಮೆಲೇ ಶೂಟೌಟ್ ನಡೆಯುತ್ತಲೇ ಜನರು ದಿಕ್ಕಾಪಾಲಾಗಿ ಓಡಿದ್ದೂ ರೆಕಾರ್ಡ್ ಆಗಿದೆ. ಹೆಚ್ಚಿನವರಿಗೆ ಎಲ್ಲಿ ಏನಾಗುತ್ತಿದೆ ಅನ್ನುವುದೇ ತಿಳಿಯದೆ ಓಡಿದ್ದರು.

A tricycle is seen near the scene of a mass shooting at a Fourth of July parade route in the wealthy Chicago suburb of Highland Park, Illinois, U. S.Abandoned belongings on the sidewalk in downtown Highland Park, after six people were killed in a shooting during a Fourth of July parade on Monday.

Six dead, over 36 injured in shooting at Chicago during US Independence Day parade

ಆದರೆ ಅಮೆರಿಕದಲ್ಲಿ ಗನ್ ಲೈಸನ್ಸ್ ಸುಲಭದಲ್ಲಿ ಸಿಗುತ್ತಿರುವುದೇ ಇಂತಹ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಅಮೆರಿಕದ ಟೆಕ್ಸಾಸ್ ನಲ್ಲಿ ಕಳೆದ ಮೇ ತಿಂಗಳಲ್ಲಿ ಇದೇ ರೀತಿ ಯುವಕನೊಬ್ಬ ಶಾಲಾ ಆವರಣದಲ್ಲಿ ಶೂಟ್ ಮಾಡಿ, 21 ಜನರ ಸಾವಿಗೆ ಕಾರಣನಾಗಿದ್ದ. ಅದೇ ತಿಂಗಳಲ್ಲಿ ನ್ಯೂಯಾರ್ಕಿನಲ್ಲಿ ನಡೆದ ಶೂಟೌಟ್ ಘಟನೆಯಲ್ಲಿ ಹತ್ತು ಮಂದಿ ಸಾವು ಕಂಡಿದ್ದರು. ರೈಫಲ್ ಹಿಡಿದು ಯದ್ವಾತದ್ವಾ ಶೂಟ್ ಮಾಡುತ್ತಿರುವುದು ಅಮೆರಿಕದಲ್ಲಿ ಭಾರೀ ಅಪರಾಧ ಕೃತ್ಯವಾಗಿದ್ದು, ಅಲ್ಲಿನ ಸರಕಾರಕ್ಕೇ ಸವಾಲಾಗಿ ಪರಿಣಮಿಸಿದೆ.

A gunman on a rooftop opened fire on a U. S. Independence Day parade in suburban Chicago on Monday, killing at least six people, wounding at least 30 and sending hundreds of marchers, parents with strollers and children on bicycles fleeing in terror, police said.Authorities said a 22-year-old man named as a person of interest in the shooting was taken into police custody Monday evening after an hourslong manhunt.