ಬ್ರೇಕಿಂಗ್ ನ್ಯೂಸ್
08-07-22 01:50 pm HK News Desk ದೇಶ - ವಿದೇಶ
ಟೋಕಿಯೋ, ಜುಲೈ 8: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ಶಿಂಜೋ ಅಬೆ ಕೋಮಾ ಸ್ಥಿತಿಗೆ ಜಾರಿದ್ದಾರೆ. ಅವರ ಸ್ಥಿತಿಯ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ವೈದ್ಯರು ಅವರನ್ನು ಬದುಕಿಸಲು ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ಜಪಾನ್ ಪ್ರಧಾನಿ ಫಿಮಿಯೋ ಕಿಶಿದಾ ತಿಳಿಸಿದ್ದಾರೆ.
ಪಶ್ಚಿಮ ಜಪಾನಿನ ನಾರಾ ಸಿಟಿಯಲ್ಲಿ ಘಟನೆ ನಡೆದಿದ್ದು, ಜಪಾನ್ ಸಂಸತ್ತಿನ ಮೇಲ್ಮನೆಯ ಚುನಾವಣೆ ಪ್ರಚಾರಾರ್ಥ ಶಿಂಜೋ ಅಬೆ ಕಾರ್ಯಕರ್ತರ ಜೊತೆ ತೆರಳಿದ್ದರು. ಶಿಜೋ ಅಬೆ ಮಾತನಾಡುತ್ತಿದ್ದಾಗಲೇ ವ್ಯಕ್ತಿಯೊಬ್ಬ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಸದ್ದೇ ಇಲ್ಲದೆ ಎರಡು ಗುಂಡು 67 ವರ್ಷದ ಶಿಂಜೋ ಎದೆಯ ಒಳಗೆ ಹೊಕ್ಕಿದ್ದು, ಅವರು ರಕ್ತ ಕಾರುತ್ತಾ ನೆಲಕ್ಕೆ ಬೀಳುವಾಗಲೇ ಅಲ್ಲಿದ್ದವರಿಗೆ ಗೊತ್ತಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯಕ್ಕೆ ಪೆಟ್ಟು ಬಿದ್ದು ತೀವ್ರ ಶಾಕ್ ಆಗಿದೆ ಎನ್ನುವ ಮಾಹಿತಿಯನ್ನು ವೈದ್ಯರು ತಿಳಿಸಿದ್ದಾರೆ.
ಅಬೆ ಅವರ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಅವರನ್ನು ಬದುಕಿಸಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆದರೆ ಅಭಿಮಾನಿಗಳ ಪ್ರಾರ್ಥನೆಯಷ್ಟೇ ಅವರನ್ನು ಬದುಕಿಸಬಹುದಷ್ಟೇ ಎಂದು ಜಪಾನ್ ಪ್ರಧಾನಿ ಕಿಶಿದಾ ಹೇಳಿದ್ದಾರೆ. ಭದ್ರತಾ ಸಿಬಂದಿಯ ಕಣ್ತಪ್ಪಿಸಿ 41 ವರ್ಷದ ವ್ಯಕ್ತಿಯೊಬ್ಬ ಒಳಗೆ ನುಗ್ಗಿ ಬಂದು ಗನ್ ಶೂಟ್ ಮಾಡಿದ್ದಾನೆ. ಆತನನ್ನು ಕೂಡಲೇ ಭದ್ರತಾ ಪಡೆ ಬಂಧಿಸಿದ್ದು, ಆಗಂತುಕನನ್ನು ನಾರಾ ನಗರದ ನಿವಾಸಿ ತೆತ್ಸುಯಾ ಯಮಗಮಿ ಎಂದು ಗುರುತಿಸಿದ್ದಾರೆ. ಶಿಂಜೋ ಅಬೆ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದ ಕಾರಣಕ್ಕಾಗಿ ವ್ಯಕ್ತಿ ಗುಂಡು ಹಾರಿಸಿದ್ದಾನೆ ಎನ್ನಲಾಗುತ್ತಿದೆ.
ಸುದೀರ್ಘ ಆಡಳಿತ ನಡೆಸಿದ್ದ ಶಿಂಜೋ ಅಬೆ
ಶಿಂಜೋ ಅಬೆ ಜಪಾನಿನ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರಾಗಿದ್ದು, ಮೊದಲ ಬಾರಿಗೆ 1993ರಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಆನಂತರ 2006ರಲ್ಲಿ ಒಂದು ವರ್ಷ ಕಾಲ ಜಪಾನ್ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. 2012ರಲ್ಲಿ ಮತ್ತೆ ಪ್ರಧಾನಿಯಾಗಿದ್ದಲ್ಲದೆ, ಹೊಸ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿ ಅದಕ್ಕೆ ‘’ಅಬೆನಾಮಿಕ್ಸ್’’ ಎಂದು ಹೆಸರಿಟ್ಟು ಜನಪ್ರಿಯತೆ ಗಳಿಸಿದ್ದರು. ಅಲ್ಲದೆ, ಅವರ ಆಡಳಿತಾವಧಿಯಲ್ಲಿ ಭಾರೀ ಹಣಕಾಸು ಜಪಾನಿಗೆ ಹರಿದು ಬಂದಿತ್ತು. 2017ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಲ್ಲದೆ, ಜಪಾನ್ ಇತಿಹಾಸದಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬ ನಾಲ್ಕನೇ ಬಾರಿ ಪ್ರಧಾನಿ ಸ್ಥಾನಕ್ಕೇರಿದ ಶ್ರೇಯವನ್ನು ಪಡೆದಿದ್ದರು. 2020ರಲ್ಲಿ ಅನಾರಾಗ್ಯ ಮತ್ತು ಆಪ್ತ ಗೆಳೆಯರಿಗೆ ಒಳಿತಾಗುವಂತೆ ನಡೆಸಿಕೊಂಡ ಆರೋಪದಿಂದಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಸುದೀರ್ಘ ಅವಧಿಯಲ್ಲಿ ಆಡಳಿತ ನಡೆಸಿದ್ದಕ್ಕಾಗಿ ಶಿಂಜೋ ಅಬೆ ಜಪಾನಿನಲ್ಲಿ ಖ್ಯಾತಿ ಹೊಂದಿದ್ದಾರೆ.
ಶಿಂಜೋ ಅಬೆ ಜೊತೆಗೆ ಪ್ರಧಾನಿ ಮೋದಿ ಉತ್ತಮ ಸಂಬಂಧ ಹೊಂದಿದ್ದರು. ಅವರಿಗೆ ಗುಂಡೇಟು ಬಿದ್ದ ಸುದ್ದಿ ಬರುತ್ತಿದ್ದಂತೆ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ದೇವರು ಅವರಿಗೆ ಆರೋಗ್ಯ ಕರುಣಿಸಲಿ ಎಂದು ಹಾರೈಸಿದ್ದಾರೆ.
Deeply distressed by the attack on my dear friend Abe Shinzo. Our thoughts and prayers are with him, his family, and the people of Japan.
— Narendra Modi (@narendramodi) July 8, 2022
Mr Abe was shot at twice while he was giving a speech in the southern city of Nara on Friday morning.He immediately collapsed and was rushed to the nearest hospital. Pictures taken at the scene showed him bleeding.Security officials at the scene tackled the gunman, and the 41-year-old suspect is now in police custody.In an emotional press conference a few hours later, prime minister Fumio Kishida told reporters that Mr Abe was in a "very grave condition".
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm