ಗುಂಡೇಟು ಬಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಸ್ತಂಗತ ; ರಕ್ಷಣಾ ಇಲಾಖೆಯಲ್ಲಿದ್ದ ವ್ಯಕ್ತಿಯಿಂದಲೇ ಕೃತ್ಯ

08-07-22 05:37 pm       HK News Desk   ದೇಶ - ವಿದೇಶ

ಗುಂಡೇಟು ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ಟೋಕಿಯೋ, ಜುಲೈ 8: ಗುಂಡೇಟು ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ನಾರಾ ಪ್ರಾಂತ್ಯದ ಕಾಶಿಹರದಲ್ಲಿರುವ ಟರ್ನರ್ಸ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ನಾಲ್ಕೂವರೆ ಗಂಟೆಗಳ ವೈದ್ಯರ ಪರಿಶ್ರಮದ ಬಳಿಕವೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಎದೆಗೆ ಗುಂಡು ತಗಲಿದ ಕಾರಣ ನಿರಂತರ ರಕ್ತ ಚೆಲ್ಲುತ್ತಿತ್ತು. ಬದಲಿ ರಕ್ತ ನೀಡುವ ಪ್ರಯತ್ನವೂ ಫಲಗೂಡಲಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ಬೆಳಗ್ಗೆ ಡೆಮಾಕ್ರಟಿಕ್ ಪಾರ್ಟಿ ನಾಯಕರೂ ಆಗಿರುವ ಶಿಂಜೋ ಅಬೆ, ನಾರಾ ನಗರದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ, ವ್ಯಕ್ತಿಯೊಬ್ಬ ಭದ್ರತಾ ಪಡೆಯ ಕಣ್ತಪ್ಪಿಸಿ ಶಿಂಜೋ ಅಬೆಯತ್ತ ಗುಂಡು ಹಾರಿಸಿದ್ದಾನೆ. ಅದರ ಬೆನ್ನಲ್ಲೇ 41 ವರ್ಷದ ಆರೋಪಿ ತೆತ್ಸುಯಾ ಯಮಗಮಿ ಎಂಬಾತನನ್ನು ಬಂಧಿಸಲಾಗಿತ್ತು. ಜಪಾನ್ ನೌಕಾ ಸೇನೆಯಲ್ಲಿ ಕೆಲಸ ಮಾಡಿದ್ದ ಯಮಗಮಿ ಮೂರು ವರ್ಷಗಳ ಸೇವೆ ನಿರ್ವಹಿಸಿ 2005ರಲ್ಲಿ ಇಲಾಖೆಯಿಂದ ಹೊರಬಂದಿದ್ದ. ಮರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ ನಲ್ಲಿ ಯಮಗಮಿ ಕೆಲಸ ನಿರ್ವಹಿಸಿದ್ದ. ಇಂದು ಬೆಳಗ್ಗೆ ಅಬೆಯನ್ನು ಕೊಲ್ಲುವ ಉದ್ದೇಶದಿಂದ ಸಣ್ಣ ಹ್ಯಾಂಡ್ ಮೇಡ್ ಗನ್ ಹಿಡಿದು ಬಂದಿದ್ದು, ಶಿಂಜೋ ಅಬೆ ಭಾಷಣ ಮಾಡುತ್ತಿದ್ದಾಗಲೇ ಗುಂಡು ಹಾರಿಸಿದ್ದ. ಶಿಂಜೋ ಅಬೆ ಭಾಷಣ ಮಾಡೋ ವರೆಗೂ ಅಲ್ಲಿಯೇ ಕಾದು ಕುಳಿತು ಬಳಿಕ ಗುಂಡು ಹಾರಿಸಿದ್ದನ್ನು ಸಿಸಿಟಿವಿ ಆಧರಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Japan PM to address nation on shooting of former PM Shinzo Abe | The Star

Japan Former PM Shinzo Abe Death: Former Japan Prime Minister Shinzo Abe  passed away, had a cardiac arrest after being shot twice - Thelocalreport.in

Priyanka Gandhi arrives in Lucknow on two-day visit - The Economic Times

ಶಿಂಜೋ ಅಬೆಯ ದುರಂತ ಸಾವಿನ ಬಗ್ಗೆ ಭಾರತ ಸೇರಿದಂತೆ ಜಗತ್ತಿನ ರಾಷ್ಟ್ರಗಳ ನಾಯಕರು ಕಂಬನಿ ಮಿಡಿದಿದ್ದಾರೆ. ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ, ಶಿಂಜೋ ಅಬೆಯನ್ನು ಹತ್ಯೆ ಮಾಡಿರುವುದು ಅತ್ಯಂತ ಹೇಯ ಮತ್ತು ದುಃಖಕರ. ಹಿಂಸೆ ಹೇಡಿಗಳ ಭಾಷೆಯಷ್ಟೇ, ಅದರಿಂದ ಒಳ್ಳೆಯತನವನ್ನು ಸೋಲಿಸಲಾಗದು. ಶಿಂಜೋ ಅಬೆಯವರು ಅದ್ಭುತ ವ್ಯಕ್ತಿಯಾಗಿದ್ದು, ಶಾಂತಿ ಮತ್ತು ಕರುಣೆಯನ್ನು ಪ್ರತಿಪಾದಿಸಿದ್ದರು. ಅವರ ವಿಶೇಷ ವ್ಯಕ್ತಿತ್ವವನ್ನು ಜಗತ್ತು ನೆನಪಿಡಲಿದೆ ಎಂದು ಹೇಳಿದ್ದಾರೆ.

West wants to defeat Russia on battlefield? 'Let them try': Putin | Russia-Ukraine  war News | Al Jazeera

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪ್ರತಿಕ್ರಿಯಿಸಿ, ಶಿಂಜೋ ಅಬೆ ಅಗಲಿಕೆ ತುಂಬಲಾರದ ನಷ್ಟ. ಆ ರೀತಿಯ ವ್ಯಕ್ತಿ ಇನ್ನೊಬ್ಬ ಸಿಗಲಾರ. ಅವರಿದ್ದಾಗ ಉಭಯ ರಾಷ್ಟ್ರಗಳ ಸಂಬಂಧ ಉತ್ತಮವಾಗಿತ್ತು. ಅವರೊಬ್ಬ ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಇಟಲಿ, ಅಮೆರಿಕ, ಉತ್ತರ ಕೊರಿಯಾ, ಜರ್ಮನ್ ಸೇರಿದಂತೆ ಹಲವು ದೇಶಗಳ ನಾಯಕರು ಸಂತಾಪ ಹೇಳಿದ್ದಾರೆ.

Tributes to Shinzo Abe have continued to pour in from politicians around the world, many of whom recalled their visits with the former leader and expressed their shock at his killing.“On behalf of the French people, I send my condolences to the Japanese authorities and people after the assassination of Shinzo Abe. Japan has lost a great Prime Minister, who dedicated his life to his country and worked to bring balance to the world,” Macron tweeted.