ಬ್ರೇಕಿಂಗ್ ನ್ಯೂಸ್
08-07-22 10:11 pm HK News Desk ದೇಶ - ವಿದೇಶ
ಶ್ರೀನಗರ, ಜುಲೈ 8: ಜಮ್ಮು ಕಾಶ್ಮೀರದ ಪವಿತ್ರ ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ ಉಂಟಾಗಿದ್ದು, ಪವಿತ್ರ ಯಾತ್ರೆಗೆ ಹೊರಟಿದ್ದ 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಕನಿಷ್ಠ 15 ಮಂದಿ ಸಾವಿಗೀಡಾಗಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ.
ಗುಹಾಲಯ ಇರುವಲ್ಲಿಯೇ ಸಂಜೆ 5.30ರ ಸುಮಾರಿಗೆ ಮೇಘ ಸ್ಫೋಟ ಉಂಟಾಗಿದ್ದು, ಭಾರೀ ಪ್ರಮಾಣದಲ್ಲಿ ನೀರು ಒಮ್ಮೆಲೇ ಪರ್ವತ ಪ್ರದೇಶಗಳಿಂದ ಧುಮ್ಮಿಕ್ಕಿ ಬಂದಿದೆ. ಈ ವೇಳೆ, ಯಾತ್ರಾರ್ಥಿಗಳಾಗಿ ಕಾಲ್ನಡಿಗೆಯಲ್ಲಿ ಹೊರಟಿದ್ದವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅಲ್ಲಲ್ಲಿ ಹಾಕಿದ್ದ ಹಲವಾರು ಟೆಂಟ್ ಗಳು ಕೊಚ್ಚಿ ಹೋಗಿವೆ. ಪ್ರತೀ ಟೆಂಟ್ ನಲ್ಲಿ 5-6 ಮಂದಿ ಇರುತ್ತಿದ್ದರು.
ಎನ್ ಡಿಆರ್ ಎಫ್ ಮೂಲಗಳ ಪ್ರಕಾರ, ಈವರೆಗೆ 15 ಮಂದಿ ಮೃತರಾಗಿರುವುದು ದೃಢಪಟ್ಟಿದೆ. ಗಾಯಾಳುಗಳನ್ನು ಏರ್ ಲಿಫ್ಟ್ ಮಾಡುವ ಯತ್ನದಲ್ಲಿ ಸೇನೆ ಮತ್ತು ಎನ್ ಡಿಆರ್ ಎಫ್ ಪಡೆಗಳು ತೊಡಗಿವೆ. ದುರಂತದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಮುಂದಿನ ಸನ್ನಿವೇಶ ನೋಡಿಕೊಂಡು ಯಾತ್ರೆ ಆರಂಭಿಸುವ ಸಾಧ್ಯತೆಯಿದೆ ಎಂದು ಅಲ್ಲಿನ ಸೇನಾ ಮೂಲಗಳು ತಿಳಿಸಿವೆ.
ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮೃತರ ಕುಟುಂಬಗಳ ಬಗ್ಗೆ ಕಂಬನಿ ಮಿಡಿದಿರುವ ಮೋದಿ, ದುರಂತದ ಬಗ್ಗೆ ರಕ್ಷಣಾ ಕಾರ್ಯ ಕೈಗೊಳ್ಳಲು ಎಲ್ಲ ರೀತಿಯ ನೆರವನ್ನೂ ನೀಡಲಾಗುವುದು ಎಂದು ಹೇಳಿದ್ದಾರೆ. ಹವಾಮಾನ ಮಾಹಿತಿ ಪ್ರಕಾರ, ಪಹಲ್ ಗಾಮ್, ಚಂದನ್ ವಾರಿ, ಜೋಜಿ ಲಾ, ಶೇಷ್ ನಾಗ್, ಪೋಶ್ ಪತ್ರಿ, ಪಂಚ್ ತರ್ನಿ, ಸಂಗಮ್ ಪ್ರದೇಶಗಳಲ್ಲಿ ಇನ್ನೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಕಳೆದ ಜೂನ್ 30ರಂದು 43 ದಿನಗಳ ಅಮರನಾಥ ಯಾತ್ರೆಯನ್ನು ಆರಂಭಿಸಲಾಗಿತ್ತು. ಈಗಾಗಲೇ ಲಕ್ಷಕ್ಕೂ ಹೆಚ್ಚು ಮಂದಿ ಅಮರನಾಥ ಗುಹಾ ದರ್ಶನ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ನುನ್ವಾನ್-ಪಹಲ್ಗಾಮ್ ಪ್ರದೇಶದಿಂದ ಮತ್ತು ಬಾಲ್ತಾಲ್- ಗಂದೇರ್ ಬಾಲ್ ಪ್ರದೇಶದಿಂದ ಪ್ರತ್ಯೇಕವಾಗಿ ಸೇನಾ ಭದ್ರತೆಯ ಮೂಲಕ ಅಮರನಾಥ ಯಾತ್ರೆ ಆರಂಭಿಸಲಾಗಿತ್ತು. ಮಂಗಳವಾರದಿಂದ ಪ್ರತಿಕೂಲ ಹವಾಮಾನದ ಕಾರಣ ತಾತ್ಕಾಲಿಕವಾಗಿ ಯಾತ್ರೆ ನಿಲ್ಲಿಸಲಾಗಿತ್ತು. ಆದರೆ ಅರ್ಧಕ್ಕೆ ತಲುಪಿದವರು ಟೆಂಟ್ ಗಳಲ್ಲಿ ರಕ್ಷಣೆ ಪಡೆದುಕೊಂಡಿದ್ದರು.
At least 15 people have been killed and 40 are missing following a cloudburst near the holy cave shrine of Amarnath in Jammu and Kashmir. The Indian Army has joined the rescue operations along with teams of National Disaster Response Force, state disaster response force, and police.The cloudburst took place at around 5:30 pm on Friday, resulting in heavy discharge of water near the cave shrine. A sudden wave of water from above and sides of the cave, after heavy rain in the upper reaches, washed away three langars.
06-05-25 08:18 pm
Bangalore Correspondent
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm