ಬ್ರೇಕಿಂಗ್ ನ್ಯೂಸ್
09-07-22 11:52 am HK News Desk ದೇಶ - ವಿದೇಶ
ನವದೆಹಲಿ, ಜುಲೈ 9: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಗಲಿಕೆ ಹಿನ್ನೆಲೆಯಲ್ಲಿ ಅವರ ಜೊತೆಗಿನ ಸುದೀರ್ಘ ಒಡನಾಟ, ಭಾರತದ ಜೊತೆಗಿನ ಮೈತ್ರಿತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಾಪ ಸೂಚಕ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಮಹೋನ್ನತ ನಾಯಕನ ಅಗಲಿಕೆಯ ಶೋಕಾಚರಣೆಗಾಗಿ ದೇಶಾದ್ಯಂತ ತ್ರಿವರ್ಣ ಧ್ವಜವನ್ನು ಅರ್ಧಕ್ಕಿಳಿಸಿ ಶನಿವಾರ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಲು ಘೋಷಣೆ ಮಾಡಿದ್ದಾರೆ.
ಶಿಂಜೋ ಅಬೆ ಜಪಾನ್ ಕಂಡ ಅತಿ ಶ್ರೇಷ್ಠ ನಾಯಕ, ಮಹೋನ್ನತ ರಾಜನೀತಿಜ್ಞರಾಗಿದ್ದರು. ಭಾರತ- ಜಪಾನ್ ಮಧ್ಯೆ ಬಾಂಧವ್ಯ ವ್ಯದ್ಧಿಯ ಚಾಂಪ್ಯನ್ ಆಗಿದ್ದರು. ಆದರೆ, ಅವರು ಈಗ ನಮ್ಮೊಂದಿಗಿಲ್ಲ. ಜಗತ್ತು ಶ್ರೇಷ್ಠ ದಾರ್ಶನಿಕರೊಬ್ಬರನ್ನು ಕಳಕೊಂಡಿದೆ. ಮೇಲಾಗಿ ನಾನೊಬ್ಬ ಪ್ರೀತಿಯ ಗೆಳೆಯನನ್ನು ಕಳಕೊಂಡಿದ್ದೇನೆ.
ಮೊದಲ ಬಾರಿಗೆ 2007ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಜಪಾನ್ ಭೇಟಿಯ ವೇಳೆ ಶಿಂಜೋ ಅಬೆ ಅವರನ್ನು ಮುಖಾಮುಖಿ ಭೇಟಿಯಾಗಿದ್ದೆ. ಮೊದಲ ಭೇಟಿಯ ಬಳಿಕ ಒಡಮೂಡಿದ ಮೈತ್ರಿ ನಮ್ಮ ನಡುವೆ ಬೆಳೆಯುತ್ತಾ ಬಂದು ಅಧಿಕೃತ ಪ್ರೋಟೋಕಾಲ್ ಆಗುವಷ್ಟರ ಮಟ್ಟಿಗೆ ಬೆಳೆದಿತ್ತು. ನಾವು ಕ್ಯೋಟೋದಲ್ಲಿ ತೋಜಿ ಟೆಂಪಲ್ ಭೇಟಿ, ಶಿಂಕನ್ ಸೆನ್ ನಗರಕ್ಕೆ ಜೊತೆಯಾಗಿ ರೈಲು ಪ್ರಯಾಣ, ಅಹ್ಮದಾಬಾದ್ ನಲ್ಲಿ ಸಬರ್ಮತಿ ಆಶ್ರಮ ಭೇಟಿ, ಕಾಶಿಯಲ್ಲಿ ಗಂಗಾ ಆರತಿ ನೆರವೇರಿಸಿದ್ದು, ಟೋಕ್ಯೋದಲ್ಲಿ ಚಹಾ ಕೂಟದಲ್ಲಿ ಪಾಲ್ಗೊಂಡಿದ್ದು ಹೀಗೆ ನಾವು ಜೊತೆಯಾಗಿ ಪಾಲ್ಗೊಂಡ ಕೂಟಗಳು ಮರೆಯಲಾಗದ್ದು.
ಜಪಾನ್- ಭಾರತ ಮೈತ್ರಿಗೆ ನೀಡಿದ ಕೊಡುಗೆಗಾಗಿ 2021ರಲ್ಲಿ ಶಿಂಜೋ ಅಬೆ ಅವರಿಗೆ ದೇಶದ ಪ್ರತಿಷ್ಠಿತ ಗೌರವಗಳಲ್ಲಿ ಒಂದಾದ ಪದ್ಮವಿಭೂಷಣ ಪುರಸ್ಕಾರ ನೀಡಲಾಗಿತ್ತು. ಶಿಂಜೋ ಅಬೆ ಸ್ಯಾನ್ ಅವರು ಅಪರಿಮಿತ ದೂರದೃಷ್ಟಿ ಉಳ್ಳವರಾಗಿದ್ದರು. ಬಹು ಮಾದರಿಯ ದೂರದೃಷ್ಟಿ ಅವರ ಆಡಳಿತದಲ್ಲಿ ಕಾಣುವಂತಾಗಿತ್ತು. ರಾಜಕೀಯ, ಸಾಮಾಜಿಕ, ಆರ್ಥಿಕ, ಅಂತಾರಾಷ್ಟ್ರೀಯ ಸಂಬಂಧ, ವಿಚಾರಗಳ ಬಗ್ಗೆ ದಿಟ್ಟ ನಿರ್ಧಾರ ತಳೆಯುವ ಪರಿ, ಅವರ ಚಾಣಾಕ್ಷ ನೀತಿಗಳ ಕಾರಣಕ್ಕೆ ಅವರನ್ನು ಜಗತ್ತಿನ ಜನರು ವಿಭಿನ್ನ ರೀತಿ ನೋಡುವಂತಾಗಿತ್ತು. ಅಬೆನಾಮಿಕ್ಸ್ ಎಂದೇ ಹೆಸರು ಮಾಡಿದ್ದ ಅವರ ರಾಜಕೀಯ ಮತ್ತು ಆರ್ಥಿಕ ನೀತಿಗಳು ಜಪಾನ್ ಪ್ರಜೆಗಳಲ್ಲಿ ಮತ್ತೊಂದು ಬಗೆಯಲ್ಲಿ ಕನಸು ಬಿತ್ತಿದ್ದವು. ಉದ್ಯಮ ಸ್ಥಾಪನೆ, ಹೊಸ ಆವಿಷ್ಕಾರಗಳಿಗೆ ಹೊಸ ನೀತಿಗಳು ಪ್ರೇರಣೆಯಾಗಿದ್ದವು.
ಶಿಂಜೋ ಅಬೆ ಅವರು ನಮಗೆ ನೀಡಿರುವ ಅತಿ ಶ್ರೇಷ್ಟ ಕೊಡುಗೆ ಏನಂದ್ರೆ, ಅತ್ಯಂತ ಸಹಿಷ್ಣು ಪರ ನೀತಿ. ಇದಕ್ಕಾಗಿ ಇಡೀ ಜಗತ್ತು ಅವರಿಗೆ ಋಣಿಯಾಗಿರಬೇಕು. ಜಗತ್ತಿನಲ್ಲಿ ಆಗುತ್ತಿದ್ದ ಪಲ್ಲಟಗಳು, ಬಿಸಿಯೇರಿಸುತ್ತಿದ್ದ ಕ್ಷಣಗಳ ಮಧ್ಯೆ ಒಬ್ಬ ನಾಯಕನಾಗಿ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದ ಪರಿ, ಅವರ ದೂರದೃಷ್ಟಿತ್ವವನ್ನು ಜಗತ್ತು ನೆನಪಿಡಬೇಕು. ಉಳಿದೆಲ್ಲ ನೀತಿಜ್ಞರು ಹೇಳುವ ಮೊದಲೇ 2007ರಲ್ಲಿ ಭಾರತದ ಸಂಸತ್ತಿನಲ್ಲಿ ಶಿಂಜೋ ಅಬೆ ಮಾಡಿದ್ದ ಭಾಷಣ ಪ್ರಾದೇಶಿಕ ಮೈತ್ರಿಯ ಅಗತ್ಯಗಳ ಬಗ್ಗೆ ಹೇಳಿತ್ತು. ಇಂಡೋ-ಪೆಸಿಫಿಕ್ ರಾಷ್ಟ್ರಗಳು ರಾಜಕೀಯ, ಆರ್ಥಿಕ ನೀತಿಗಳ ಬಗ್ಗೆ ಗಟ್ಟಿ ತಳಹದಿ ಹಾಕುವ ಅಗತ್ಯತೆ ಕುರಿತು ಹೇಳಿದ್ದರು. ಇಂಡೋ ರೀಜನ್ ಈ ಶತಮಾನದಲ್ಲಿ ಜಗತ್ತಿಗೆ ಹೊಸ ಸ್ವರೂಪವನ್ನು ಕೊಡಲು ಸಾಧ್ಯ ಎಂಬುದನ್ನು ಹೇಳಿದ್ದರು.
ದಿ ಕ್ವಾಡ್ ಒಕ್ಕೂಟ, ಏಶ್ಯನ್ ರಾಷ್ಟ್ರಗಳ ಒಕ್ಕೂಟ, ಇಂಡೋ ಪೆಸಿಫಿಕ್ ರಾಷ್ಟ್ರಗಳ ಬಂಧುತ್ವ, ಏಶ್ಯಾ-ಆಫ್ರಿಕಾ ಅಭಿವೃದ್ಧಿ ಪರ್ವ ಮತ್ತು ದುರಂತಗಳ ಸಂದರ್ಭದಲ್ಲಿ ಕೊಡು-ಕೊಳ್ಳುವ ಮೈತ್ರಿತ್ವ ಇತ್ಯಾದಿಯೆಲ್ಲ ರೂಪುಗೊಳ್ಳಲು ಶಿಂಜೋ ಅಬೆ ಅವರ ಕೊಡುಗೆ ದೊಡ್ಡದು. ತಮ್ಮಲ್ಲೇ ವಿರೋಧ ಎದುರಾದರೂ ಲೆಕ್ಕಿಸದೆ, ಇಂಡೋ ರೀಜನಲ್ಲಿ ರಕ್ಷಣೆ, ಮೂಲಸೌಕರ್ಯದಲ್ಲಿ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದರು. ಆ ಕಾರಣದಿಂದಾಗಿ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಎದುರಾದ ಪರಿಣಾಮಗಳು ವಿಭಿನ್ನವಾಗಿದ್ದವು.
ಕಳೆದ ಮೇ ತಿಂಗಳಲ್ಲಿ ಕೊನೆಯ ಬಾರಿಗೆ ಜಪಾನ್ ಭೇಟಿ ನೀಡಿದ್ದಾಗಲೂ ಅಬೆ ಸ್ಯಾನ್ ಅವರನ್ನು ಭೇಟಿಯಾಗುವ ಅವಕಾಶ ಒದಗಿತ್ತು. ಜಪಾನ್- ಇಂಡಿಯಾ ಅಸೋಸಿಯೇಶನ್ ಹೆಸರಲ್ಲಿ ಅವರನ್ನು ಭೇಟಿಯಾಗಿದ್ದೆ. ತಮ್ಮ ವಿಭಿನ್ನ ವ್ಯಕ್ತಿತ್ವ, ಚರಿಷ್ಮಾದಿಂದಾಗಿ ಪ್ರಧಾನಿ ಸ್ಥಾನ ಇಲ್ಲದಿದ್ದರೂ ನನ್ನನ್ನು ಬಹುವಾಗಿ ಆಕರ್ಷಿಸಿದ್ದರು. ಭಾರತ- ಜಪಾನ್ ಮೈತ್ರಿ ಬಲಗೊಳಿಸುವ ವಿಚಾರದಲ್ಲಿ ಅವರಲ್ಲಿ ಅಪರಿಮಿತ ಕನಸುಗಳಿದ್ದವು. ಐಡಿಯಾಗಳಿದ್ದವು. ಅದನ್ನೆಲ್ಲ ಹೇಳಿಕೊಂಡಿದ್ದರು. ಕೊನೆಗೆ ಅವರನ್ನು ಗುಡ್ ಬೈ ಎಂದು ಹೇಳಿ ಬಂದಿದ್ದೆ. ಏನೋ ಅದೇ ನಮ್ಮ ಕೊನೆಯ ಭೇಟಿ ಎಂದು ಮೊದಲೇ ನಿಗದಿಯಾಗಿತ್ತೋ ಏನೋ..
ಶ್ರೇಷ್ಠ ಗೆಳೆಯ, ಮಾರ್ಗದರ್ಶಕ, ಬುದ್ಧಿವಂತ ನಾಯಕನೊಬ್ಬನನ್ನು ಕಳಕೊಂಡಿದ್ದೇನೆ. ನಿಮ್ಮ ಅಗಲಿಕೆಯನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾವು ಭಾರತೀಯರು ನಮ್ಮದೇ ಕುಟುಂಬ ಸದಸ್ಯರನ್ನು ಕಳಕೊಂಡ ರೀತಿ ಒಂದು ದಿನ ಶೋಕಾಚರಣೆ ಮಾಡುತ್ತೇವೆ. ತಾವು ಹೆಚ್ಚು ಪ್ರೀತಿಸುವ, ಜನರೊಂದಿಗೆ ಬೆರೆಯುವ ಸಂದರ್ಭದಲ್ಲಿಯೇ ಇಹಲೋಕ ತ್ಯಜಿಸಿದ್ದೀರಿ. ಇದು ಸರ್ವ ಜನರಿಗೂ ಸ್ಫೂರ್ತಿಯಾಗಲಿದೆ. ದುರಂತದ ಕಾರಣಕ್ಕೆ ಅವರ ಜೀವನ ಅರ್ಧಕ್ಕೆ ಕೊನೆಯಾಗಿರಬಹುದು. ಆದರೆ ಅವರ ಶ್ರೇಷ್ಠ ಗುಣ, ಪರಂಪರೆಯನ್ನು ಖಂಡಿತ ಜನ ನೆನಪಿಡುತ್ತಾರೆ. ನಾನು ಭಾರತದ ಜನರ ಪರವಾಗಿ ಹೃದಯಾಂತರಾಳದ ಸಂತಾಪವನ್ನು ಸಲ್ಲಿಸುತ್ತೇನೆ. ಅಲ್ಲದೆ, ಜಪಾನ್ ಪ್ರಜೆಗಳು ಹಾಗೂ ಶ್ರೀಮತಿ ಅಕಿ ಅಬೆ ಮತ್ತು ಅವರ ಕುಟುಂಬಕ್ಕೂ ಭಾರತೀಯರ ಪರವಾಗಿ ಸಂತಾಪಗಳನ್ನು ಹೇಳುತ್ತೇನೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಸುದೀರ್ಘವಾಗಿ ಶಿಂಜೋ ಅಬೆ ಕುರಿತಾಗಿ ಬರೆದುಕೊಂಡಿದ್ದಾರೆ.
Joined the first 'Arun Jaitley Memorial Lecture' in New Delhi. https://t.co/pqng2bIbxF
— Narendra Modi (@narendramodi) July 8, 2022
Shinzo Abe - an outstanding leader of Japan, a towering global statesman, and a great champion of India-Japan friendship - is not among us anymore. Japan and the world have lost a great visionary. And, I have lost a dear friend.I first met him in 2007, during my visit to Japan as the Chief Minister of Gujarat. Right from that first meeting, our friendship went beyond the trappings of office and the shackles of official protocol.
06-05-25 08:18 pm
Bangalore Correspondent
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm