ಒಂದು ಕಾಲದಲ್ಲಿ ಭಾರತವನ್ನು ಆಳಿದ್ದ ಬ್ರಿಟನನ್ನು ಆಳಲಿದ್ದಾರೆಯೇ ಭಾರತೀಯ? ಪ್ರಧಾನಿ ಹುದ್ದೆಗೆ ಹಕ್ಕುಸ್ಥಾಪಿಸಿದ ರಿಷಿ ಸುನಕ್, ಅತ್ಯುನ್ನತ ಹುದ್ದೆಗೇರಲು ಒಂದೇ ಗೇಣು!

09-07-22 03:22 pm       HK News Desk   ದೇಶ - ವಿದೇಶ

ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂಬ ನಾಣ್ಣುಡಿಯಂತೆ ಭಾರತೀಯ ಮೂಲದ ರಿಷಿ ಸುನಕ್ ಎಂಬ ವ್ಯಕ್ತಿ ಈಗ ಬ್ರಿಟನ್ ಪ್ರಧಾನಿ ಹುದ್ದೆಗೇರಲು ಒಂದೇ ಗೇಣು ಅನ್ನುವಷ್ಟರ ಮಟ್ಟಿಗೆ ಎತ್ತರಕ್ಕೇರಿದ್ದಾರೆ.

ನವದೆಹಲಿ, ಜುಲೈ 9: ಎಲ್ಲವೂ ಅಂದ್ಕೊಂಡ ರೀತಿಯಲ್ಲೇ ಆದಲ್ಲಿ ಇನ್ನೊಂದು ವಾರದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಒಂದು ಕಾಲದಲ್ಲಿ ಭಾರತವನ್ನು ಆಳಿದ್ದ ಬ್ರಿಟನ್ ದೇಶವನ್ನು ಆಳಲಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂಬ ನಾಣ್ಣುಡಿಯಂತೆ ಭಾರತೀಯ ಮೂಲದ ರಿಷಿ ಸುನಕ್ ಎಂಬ ವ್ಯಕ್ತಿ ಈಗ ಬ್ರಿಟನ್ ಪ್ರಧಾನಿ ಹುದ್ದೆಗೇರಲು ಒಂದೇ ಗೇಣು ಅನ್ನುವಷ್ಟರ ಮಟ್ಟಿಗೆ ಎತ್ತರಕ್ಕೇರಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜಿನಾಮೆ ಬಳಿಕ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇಬ್ಬರು ವ್ಯಕ್ತಿಗಳ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದ್ದು, ಆ ಪೈಕಿ ರಿಷಿ ಸುನಕ್ ಒಬ್ಬರು. ಇನ್ನೊಬ್ಬರು ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್. ಕಳೆದ ವಾರ ಬ್ರಿಟನ್ ಸಂಸತ್ತಿನ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ಸುನಕ್ ರಾಜಿನಾಮೆ ನೀಡಿ ಹೊರ ನಡೆದಿದ್ದರು. ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ಸಿಡಿದು ನಿಂತು ರಾಜಿನಾಮೆ ನೀಡಿದ ಸಚಿವರ ಪೈಕಿ ರಿಷಿ ಸುನಕ್ ಕೂಡ ಒಬ್ಬರು. ಇದೀಗ ತನ್ನ ಟ್ವಿಟರ್ ಖಾತೆಯಲ್ಲಿ ಮುಂದಿನ ಪ್ರಧಾನಿಯಾಗುವ ಇಂಗಿತವನ್ನು ರಿಷಿ ಸುನಕ್ ವ್ಯಕ್ತಪಡಿಸಿದ್ದಾರೆ. ನಾನು ಕನ್ಸರ್ವೇಟಿವ್ ಪಕ್ಷದ ನಾಯಕನಾಗಲು ಬಯಸುತ್ತೇನೆ. ಹಾಗೆಯೇ ನಿಮ್ಮ ಮುಂದಿನ ಪ್ರಧಾನಿಯಾಗುವುದಕ್ಕೂ ಹಕ್ಕು ಸ್ಥಾಪಿಸಲಿದ್ದೇನೆ. ನನ್ನ ಮೇಲೆ ನಂಬಿಕೆಯಿಡಿ. ನಾನು ದೇಶದ ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರುತ್ತೇನೆ. ಮತ್ತೆ ದೇಶವನ್ನು ಎತ್ತಿ ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Rishi Sunak launches bid to become next prime minister following Boris  Johnson's resignation | Politics News | Sky News

UK's former finance minister Rishi Sunak announces bid to succeed Boris  Johnson

ಬ್ರಿಟನ್ ದೇಶದಲ್ಲಿ ಅತ್ಯುನ್ನತ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ವ್ಯಕ್ತಿ ರಿಷಿ ಸುನಕ್. ಈ ಹಿಂದೆ ನೀರಜ್ ಪಾಲ್ ಸೇರಿದಂತೆ ಕೆಲವು ಭಾರತ ಮೂಲದವರು ಅಲ್ಲಿನ ಸಂಸತ್ತಿಗೆ ಆಯ್ಕೆಯಾಗಿದ್ದರು. ಆದರೆ 2015ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದ ರಿಷಿ ಸುನಕ್, 2020ರಲ್ಲಿ ಹಣಕಾಸು ಸಚಿವ(ಚಾನ್ಸಲರ್) ಸ್ಥಾನಕ್ಕೇರಿದ್ದರು. ಆನಂತರ ಕೊರೊನಾದಿಂದಾಗಿ ಬ್ರಿಟನ್ ಜನರು ತತ್ತರಿಸಿದಾಗ, 410 ಬಿಲಿಯನ್ ಡಾಲರ್ ಮೊತ್ತದ ದೊಡ್ಡ ಕೊಡುಗೆಯನ್ನು ದೇಶದ ಜನರಿಗೆ ನೀಡಿದ್ದು ರಿಷಿ ಸುನಕ್ ಜನ ಮೆಚ್ಚುಗೆ ಪಡೆಯುವಂತಾಗಿತ್ತು. ಕಡಿಮೆ ಬಡ್ಡಿ ದರದಲ್ಲಿ ಸಾಲದ ಯೋಜನೆಯನ್ನೂ ಪ್ರಕಟಿಸಿದ್ದರು.

Rishi Sunak Wiki, Age, Wife, Family, Biography & More - WikiBio

ಪಂಜಾಬ್ ಮೂಲದ ಯಶ್ವೀರ್ ಮತ್ತು ಉಷಾ ಸುನಕ್ ದಂಪತಿಯ ಮಗನಾದ ರಿಷಿ ಸುನಕ್ ಬ್ರಿಟನ್ ದೇಶದ ಸೌತಾಂಪ್ಟನ್ ನಗರದಲ್ಲಿ ಜನಿಸಿದ್ದರು. ಸಾಮಾನ್ಯ ಮೆಡಿಕಲ್ ರೆಫ್ ಆಗಿ ಬ್ರಿಟನಿನಲ್ಲಿ ನೆಲೆಸಿದ್ದ ಯಶ್ವೀರ್ ಕುಟುಂಬದ ಕುಡಿ ಈಗ ದೇಶದ ಅತ್ಯುನ್ನತ ಹುದ್ದೆಗೇರುವಲ್ಲಿ ಸಜ್ಜಾಗಿದ್ದಾರೆ. ಇದಕ್ಕಿಂತಲೂ ಮುಖ್ಯವಾದ್ದು ರಿಷಿ ಸುನಕ್ ಬ್ರಿಟನ್ ಪ್ರಜೆಯಾಗಿದ್ದರೂ ಭಾರತದ ಅಳಿಯ ಅನ್ನೋದು. ಬೆಂಗಳೂರು ಮೂಲದ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಮಗಳು ಅಕ್ಷತಾ ಮೂರ್ತಿ ರಿಷಿ ಸುನಕ್ ಪತ್ನಿಯಾಗಿದ್ದು, ರಿಷಿ ಬೆಂಗಳೂರಿನ ಅಳಿಯ ಎಂಬ ಶ್ರೇಯವನ್ನೂ ಹೊಂದಿದ್ದಾರೆ.

Indian-origin Rishi Sunak, son-in-law of Narayana Murthy, is Britain's  Finance Minister | The News Minute

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಕ್ಷತಾ ಮೂರ್ತಿಯನ್ನು ಭೇಟಿಯಾಗಿದ್ದ ರಿಷಿ ಸುನಕ್, ಆಬಳಿಕ ಪ್ರೀತಿಸಿ 2009ರಲ್ಲಿ ಮದುವೆಯಾಗಿದ್ದರು. ಮದುವೆಯ ಬಳಿಕ ರಿಷಿ ಸುನಕ್ ಅದೃಷ್ಟ ಖುಲಾಯಿಸಿತ್ತು. ಆವರೆಗೂ ಬ್ಯಾಂಕ್ ಒಂದರ ಹಣಕಾಸು ಸಲಹೆಗಾರರಾಗಿದ್ದ ರಿಷಿ ಸುನಕ್ 2012ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. 2015ರ ಮೇ ತಿಂಗಳಲ್ಲಿ ರಿಚ್ ಮಂಡ್ ಕ್ಷೇತ್ರದಿಂದ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು.

Explainer | Why is Akshata Murthy's wealth controversial?

ಈ ನಡುವೆ, ಪತ್ನಿ ಅಕ್ಷತಾ ಮೂರ್ತಿ ತನ್ನ ಇನ್ಫೋಸಿಸ್ ಲಾಭಾಂಶದಲ್ಲಿ ದೊರೆತ ಹಣಕ್ಕೆ ಬ್ರಿಟನ್ನಿನಲ್ಲಿ ಆದಾಯ ತೆರಿಗೆ ಕಟ್ಟಿಲ್ಲವೆಂಬ ಆರೋಪಕ್ಕೂ ಗುರಿಯಾಗಿದ್ದರು. ಇದರಿಂದ ಆಗ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ತೀವ್ರ ಒತ್ತಡಕ್ಕೂ ಸಿಲುಕಿದ್ದರು. ಇವೆಲ್ಲ ಅಗ್ಗಳಿಕೆಯನ್ನು ದಾಟಿ ಬಂದ ರಿಷಿ ಸುನಕ್ ಈಗ ಬ್ರಿಟನ್ ದೇಶದ ಅತ್ಯುನ್ನತ ಹುದ್ದೆಗೇರಲು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಮೂಲದ ವ್ಯಕ್ತಿಯೇ ಬ್ರಿಟನ್ ದೇಶವನ್ನು ಆಳುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆಯೇ ಎಂಬ ನಿರೀಕ್ಷೆಯನ್ನೂ ಹುಟ್ಟುಹಾಕಿದ್ದಾರೆ. 

A day after Boris Johnson resigned as the UK Prime Minister, former Finance Minister Rishi Sunak announced his bid to succeed him as the leader of Conservative party and the country’s PM.Taking to Twitter, Sunak wrote: “I’m standing to be the next leader of the Conservative Party and your Prime Minister. Let’s restore trust, rebuild the economy and reunite the country.”